- Kannada News Photo gallery Cricket photos IND vs WI mukesh kumar selected for west indies tour after expensive ipl 2023 season for delhi capitals
IND vs WI: ಐಪಿಎಲ್ನಲ್ಲಿ ದುಬಾರಿ ಎನಿಸಿಕೊಂಡಿದ್ದ ಬೌಲರ್ಗೆ ಮಣೆ ಹಾಕಿದ ಬಿಸಿಸಿಐ..!
IND vs WI: ವಾಸ್ತವವಾಗಿ 16ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಬಲಗೈ ವೇಗಿ ಮುಖೇಶ್ ಕುಮಾರ್ ಆಡಿದ ಒಟ್ಟು 10 ಪಂದ್ಯಗಳಲ್ಲಿ 186 ಎಸೆತಗಳನ್ನು ಬೌಲ್ ಮಾಡಿ 326 ರನ್ ಬಿಟ್ಟುಕೊಟ್ಟಿದ್ದರು.
Updated on:Jun 24, 2023 | 12:37 PM

ಟೀಂ ಇಂಡಿಯಾ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಬಿಸಿಸಿಐನ ಆಯ್ಕೆ ಸಮಿತಿಯು ಶುಕ್ರವಾರ ಈ ಪ್ರವಾಸಕ್ಕಾಗಿ ಟೆಸ್ಟ್ ಮತ್ತು ಏಕದಿನ ತಂಡವನ್ನು ಪ್ರಕಟಿಸಿದೆ.

ಈ ಎರಡೂ ತಂಡಗಳಲ್ಲಿ ಯುವ ವೇಗಿ ಮುಖೇಶ್ ಕುಮಾರ್ ಸ್ಥಾನ ಪಡೆದಿದ್ದಾರೆ. ಆದರೆ ಇಲ್ಲೊಂದು ಅಚ್ಚರಿಯ ಸಂಗತಿಯೆಂದರೆ ಇದೇ ಮುಖೇಶ್ ಕುಮಾರ್ ಐಪಿಎಲ್ನಲ್ಲಿ ಬರೋಬ್ಬರಿ 10.52 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.

ವಾಸ್ತವವಾಗಿ 16ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಬಲಗೈ ವೇಗಿ ಮುಖೇಶ್ ಕುಮಾರ್ ಆಡಿದ ಒಟ್ಟು 10 ಪಂದ್ಯಗಳಲ್ಲಿ 186 ಎಸೆತಗಳನ್ನು ಬೌಲ್ ಮಾಡಿ 326 ರನ್ ಬಿಟ್ಟುಕೊಟ್ಟಿದ್ದರು. ಹಾಗೆಯೇ ಕೇವಲ ಏಳು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಮುಖೇಶ್ರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣವೂ ಇದ್ದು, ದೇಶೀಯ ಕ್ರಿಕೆಟ್‌ನಲ್ಲಿ ಮುಖೇಶ್ ಅವರ ಪ್ರದರ್ಶನ ಅದ್ಭುತವಾಗಿದೆ. ಹೀಗಾಗಿ ಆಯ್ಕೆ ಮಂಡಳಿ ಮುಖೇಶ್ಗೆ ಮಣೆಹಾಕಿದೆ.

ದೇಶೀ ಕ್ರಿಕೆಟ್‌ನಲ್ಲಿ ಬಂಗಾಳ ಪರ ಆಡುವ ಮುಖೇಶ್, 2019-20 ಮತ್ತು 2022-23ರ ರಣಜಿ ಟ್ರೋಫಿಯ ಫೈನಲ್‌ಗೆ ತಂಡವನ್ನು ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದುವರೆಗೆ 39 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮುಖೇಶ್ 149 ವಿಕೆಟ್ ಪಡೆದಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಮುಖೇಶ್ ನಂತರ ಭಾರತ-ಎ ಪರ ಆಡಿದ್ದರು. ಇಲ್ಲಿಯೂ ತಮ್ಮ ಖಾತೆಗೆ ಒಟ್ಟು 18 ವಿಕೆಟ್ಗಳನ್ನು ಹಾಕಿಕೊಂಡಿದ್ದರು. ಈ ಹಿಂದೆ ಇಂಗ್ಲೆಂಡ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಮುಖೇಶ್ ಟೀಂ ಇಂಡಿಯಾದಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು. ಇದೀಗ ಮುಖೇಶ್ ವಿಂಡೀಸ್ ಪ್ರವಾಸದಲ್ಲಿ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆಗಳಿವೆ.
Published On - 12:34 pm, Sat, 24 June 23
























