ಶಿಖರ್ ಧವನ್, ರಹಾನೆ, ಸ್ಟೀವ್ ಸ್ಮಿತ್, ಅಶ್ವಿನ್ ಸಖತ್ ಸ್ಟೆಪ್ಸ್; ದೆಹಲಿ ಕ್ಯಾಪಿಟಲ್ಸ್ ಟೀಂ ಆಟಗಾರರ ಭರ್ಜರಿ ಡ್ಯಾನ್ಸ್ ನೋಡಿ

| Updated By: ganapathi bhat

Updated on: Apr 13, 2021 | 2:12 PM

ನೃತ್ಯ ಮಾಡಿದವರಲ್ಲಿ ಯಾರು ಸೂಪರ್​ ​ಆಗಿ ನೃತ್ಯ ಮಾಡಿದ್ದಾರೆ ಎಂಬ ನಿಮ್ಮ ಉತ್ತರಗಳನ್ನು ಕಮೆಂಟ್ ಮಾಡಿ ಎಂದು ಅವರು ಬರೆದುಕೊಂಡಿದ್ದಾರೆ. ಸ್ಟೀವ್ ಸ್ಮಿತ್, ಕ್ರಿಸ್ ವೋಕ್ಸ್, ರಿಷಭ್ ಪಂತ್, ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್​ರಿಗೆ ಟ್ಯಾಗ್​ ಮಾಡುವ ಮೂಲಕ ಶಿಖರ್ ಧವನ್ ಪೋಸ್ಟ್​ ಹಂಚಿಕೊಂಡಿದ್ದಾರೆ.

ಶಿಖರ್ ಧವನ್, ರಹಾನೆ, ಸ್ಟೀವ್ ಸ್ಮಿತ್, ಅಶ್ವಿನ್ ಸಖತ್ ಸ್ಟೆಪ್ಸ್; ದೆಹಲಿ ಕ್ಯಾಪಿಟಲ್ಸ್ ಟೀಂ ಆಟಗಾರರ ಭರ್ಜರಿ ಡ್ಯಾನ್ಸ್ ನೋಡಿ
Follow us on

ಐಪಿಎಲ್​ ಕ್ರಿಕೆಟ್ ಟೂರ್ನಿಯ ಚೆನ್ನೈ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​ ಪಡೆಯುವುದರ ಮೂಲಕ ಶನಿವಾರ ದೆಹಲಿ ಕ್ಯಾಪಿಟಲ್ಸ್​ ಪಂದ್ಯವನ್ನು ಗೆದ್ದಿತ್ತು. ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು 7 ವಿಕೆಟ್​ಗಳಿಂದ ಸೋಲಿಸಿ, 190 ರನ್ ದಾಖಲಿಸಿ ಭಾರೀ ಜಯಗಳಿಸಿಕೊಂಡಿತ್ತು. ಈ ಬಗ್ಗೆ ಸಂಭ್ರಮ ಹಂಚಿಕೊಂಡಿರುವ ಶಿಖರ್​ ಧವನ್​ ತಾವು ನೃತ್ಯ ಮಾಡಿದ ವಿಡಿಯೋವನ್ನು ಸೋಮವಾರ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ಶಿಖರ್​ ಧವನ್ ತಮಿಳಿನ ಜನಪ್ರಿಯ ಹಾಡು ‘ವಾಥಿ ಕಮಿಂಗ್​’ಗೆ ಸಖತ್​​ ಸ್ಟೆಪ್​ ಹಾಕಿದ್ದಾರೆ. ಹಾಡಿನ ಬೀಟ್​ಗೆ ಮಸ್ತ್​ಆಗಿ ಕುಣಿದ ದೃಶ್ಯವನ್ನು ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಇವರು ನೃತ್ಯ ಮಾಡುವಾಗ ಆಟಗಾರ ಸ್ಟೀವ್ ಸ್ಮಿತ್, ಕ್ರಿಸ್ ವೋಕ್ಸ್, ರಿಷಭ್ ಪಂತ್, ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್ ಎಲ್ಲರೂ ‘ಮಾಸ್ಟರ್’ ಚಿತ್ರದ ಹಾಡಿನ ಡ್ಯಾನ್ಸ್​ಗೆ ಸಾತ್​ ನೀಡಿದ್ದಾರೆ.

ನೃತ್ಯ ಮಾಡಿದವರಲ್ಲಿ ಯಾರು ಸೂಪರ್​ ​ಆಗಿ ನೃತ್ಯ ಮಾಡಿದ್ದಾರೆ ಎಂಬ ನಿಮ್ಮ ಉತ್ತರಗಳನ್ನು ಕಮೆಂಟ್ ಮಾಡಿ ಎಂದು ಅವರು ಬರೆದುಕೊಂಡಿದ್ದಾರೆ. ಸ್ಟೀವ್ ಸ್ಮಿತ್, ಕ್ರಿಸ್ ವೋಕ್ಸ್, ರಿಷಭ್ ಪಂತ್, ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್​ರಿಗೆ ಟ್ಯಾಗ್​ ಮಾಡುವ ಮೂಲಕ ಶಿಖರ್ ಧವನ್ ಪೋಸ್ಟ್​ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ಅಂದವಾಗಿ ಸ್ಟೆಪ್​ ಹಾಕಿದ್ದಾರೆ. ಇನ್ನಿತರರು ಕ್ರಿಸ್ ವೋಕ್ಸ್ ಅವರೊಂದಿಗೆ ನೃತ್ಯ ಮಾಡಿದ್ದಾರೆ ಎಂದು ಅಭಿಮಾನಿಗಳು ಪೋಸ್ಟ್​ನಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 2021 ರ ಐಪಿಎಲ್ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ!

IPL 2021: ಡೆಲ್ಲಿ ಕ್ಯಾಪಿಟಲ್ಸ್​ಗೆ ಆಘಾತ! ಕೊರೊನಾಗೆ ತುತ್ತಾದ ಅಕ್ಷರ್​ ಪಟೇಲ್​.. ಆತಂಕದಲ್ಲಿ ಧವನ್, ಪಂತ್