Indonesia Masters: ತನ್ನ ಎದುರಾಳಿಯನ್ನು ಕೇವಲ 35 ನಿಮಿಷಗಳಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು!

| Updated By: ಪೃಥ್ವಿಶಂಕರ

Updated on: Nov 19, 2021 | 4:59 PM

Indonesia Masters: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಶುಕ್ರವಾರ ಟರ್ಕಿಯ ನೆಸ್ಲಿನ್ ಯಿಗಿಟ್ ವಿರುದ್ಧ ಏಕಪಕ್ಷೀಯ ಜಯ ಸಾಧಿಸುವ ಮೂಲಕ ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.

Indonesia Masters: ತನ್ನ ಎದುರಾಳಿಯನ್ನು ಕೇವಲ 35 ನಿಮಿಷಗಳಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು!
ಪಿವಿ ಸಿಂಧು
Follow us on

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಶುಕ್ರವಾರ ಟರ್ಕಿಯ ನೆಸ್ಲಿನ್ ಯಿಗಿಟ್ ವಿರುದ್ಧ ಏಕಪಕ್ಷೀಯ ಜಯ ಸಾಧಿಸುವ ಮೂಲಕ ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸಿಂಧು ಎದುರಾಳಿಗೆ ಇಡೀ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಲು ಅವಕಾಶ ನೀಡದೆ ಗೆದ್ದರು. ಇವರಿಬ್ಬರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಕೇವಲ 35 ನಿಮಿಷಗಳ ಕಾಲ ನಡೆದಿದ್ದು, ಈ ಪಂದ್ಯವನ್ನು ಹಾಲಿ ವಿಶ್ವ ಚಾಂಪಿಯನ್ 21-13, 21-10 ಅಂತರದಿಂದ ಗೆದ್ದುಕೊಂಡರು.

ಸಿಂಧು ಇದುವರೆಗೆ ನಾಲ್ಕು ಬಾರಿ ಈ ಟರ್ಕಿಶ್ ಆಟಗಾರ್ತಿಯನ್ನು ಎದುರಿಸಿದ್ದು, ಪ್ರತಿ ಬಾರಿಯೂ ಗೆಲುವು ಅವರದೇ ಖಾತೆಗೆ ಸೇರಿದೆ. ಕಳೆದ ತಿಂಗಳು ನಡೆದ ಡೆನ್ಮಾರ್ಕ್ ಓಪನ್‌ನಲ್ಲೂ ಅವರು ಭಾರತದ ತಾರೆಯಿಂದ ಸೋತಿದ್ದರು. ಟೂರ್ನಿಯಲ್ಲಿ ಸಿಂಧು ಹಾದಿ ಸುಗಮವಾಗಿತ್ತು. ಆದಾಗ್ಯೂ, ಸೆಮಿಫೈನಲ್‌ನಲ್ಲಿ ಅವರು ಕಠಿಣ ಹೋರಾಟವನ್ನು ಎದುರಿಸಲಿದ್ದಾರೆ, ಅಲ್ಲಿ ಅವರು ಅಗ್ರ ಶ್ರೇಯಾಂಕದ ಜಪಾನ್‌ನ ಅಕಾನೆ ಯಮಗುಚಿ ಮತ್ತು ಐದನೇ ಶ್ರೇಯಾಂಕದ ಪೊರ್ನ್‌ಪಾವೆ ಚೊಚುವಾಂಗ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಇಬ್ಬರು ಸ್ಟಾರ್‌ಗಳಾದ ಎಚ್‌ಎಸ್ ಪ್ರಣಯ್ ಮತ್ತು ಕಿಡಂಬಿ ಶ್ರೀಕಾಂತ್ ಮುಖಾಮುಖಿಯಾಗಲಿದ್ದಾರೆ.

ಪ್ರಣಯ್ ಮತ್ತು ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ಗೆದ್ದಿದ್ದರು
ಒಂದು ಗಂಟೆ 11 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್ 14-21, 21-19, 21-16 ಸೆಟ್‌ಗಳಿಂದ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ವಿಕ್ಟರ್ ಅಕ್ಸೆಲ್‌ಸೆನ್ ಅವರನ್ನು ಸೋಲಿಸುವ ಮೂಲಕ ಎದುರಾಳಿಗೆ ದೊಡ್ಡ ನಿರಾಸೆ ಮೂಡಿಸಿದರು. ಮೊದಲ ಗೇಮ್‌ನಲ್ಲಿ ಸೋತ ನಂತರ, ಪ್ರಣಯ್ ವಿಶ್ವದ ನಂ. 2 ಆಟಗಾರನ ವಿರುದ್ಧ ಅದ್ಭುತವಾದ ಪುನರಾಗಮನವನ್ನು ಮಾಡಿ ಸ್ಮರಣೀಯ ಗೆಲುವನ್ನು ದಾಖಲಿಸಿದರು. ಅಕ್ಸೆಲ್‌ಸೆನ್ ವಿರುದ್ಧ ಆರು ಪಂದ್ಯಗಳಲ್ಲಿ ಪ್ರಣಯ್‌ಗೆ ಇದು ಮೊದಲ ಜಯವಾಗಿದೆ. ವಿಶ್ವ ಶ್ರೇಯಾಂಕದಲ್ಲಿ 32 ನೇ ಸ್ಥಾನದಲ್ಲಿರುವ ಪ್ರಣಯ್ ಮಾರ್ಚ್ ನಂತರ ಪೂರ್ಣ ಪಂದ್ಯದಲ್ಲಿ ಡ್ಯಾನಿಶ್ ಆಟಗಾರನನ್ನು ಸೋಲಿಸಿದ ಮೊದಲ ಭಾರತೀಯರಾಗಿದ್ದಾರೆ. ಒಂದು ಗಂಟೆ ಎರಡು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ 13-21, 21-18, 21-15 ರಲ್ಲಿ ಇಂಡೋನೇಷ್ಯಾದ ಆರನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸಿದರು. ಈಗ ಉಭಯ ಆಟಗಾರರು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ಭಾರತ ನಿರಾಸೆ ಅನುಭವಿಸಿತು
ಕಪಿಲಾ ಮತ್ತು ಸಿಕ್ಕಿ ಮೂರು ಗೇಮ್‌ಗಳ 15-21 23-21 18-21 ರ ಕಠಿಣ ಎರಡನೇ ಸುತ್ತಿನ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಥಾಯ್ ಜೋಡಿ ಸುಪಕ್ ಜೊಮ್ಕೊಹ್ ಮತ್ತು ಸುಪಿಸಾರಾ ಪ್ಯೂಸಂಪ್ರಾನ್ ವಿರುದ್ಧ ಸೋಲು ಕಂಡರು. ಮಹಿಳೆಯರ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಕೂಡ ನಿರಾಸೆ ಅನುಭವಿಸಿದರು. ಭಾರತದ ಜೋಡಿಯನ್ನು 18-21 12-21 ನೇರ ಗೇಮ್‌ಗಳಲ್ಲಿ ಮೂರನೇ ಶ್ರೇಯಾಂಕದ ಜೋಂಗ್‌ಕೋಲ್ಫಾನ್ ಕಿಟಿತಾರ್ಕುಲ್ ಮತ್ತು ರವೀಂದಾ ಪ್ರಜೊಂಗ್‌ಜಾಯ್ ವಿರುದ್ಧ ಸೋಲಿಸಿದರು.