ಈ ವರ್ಷ IPL T20 ನಡೆಸಿಯೇ ತೀರುತ್ತೇನೆ – ಬಿಗ್​ಬಾಸ್ ಸೌರವ್​ ಗಂಗೂಲಿ

| Updated By:

Updated on: Jul 09, 2020 | 2:31 PM

ಮೊನ್ನೆ ಮೊನ್ನೆಯಷ್ಟೇ BCCI ಈ ವರ್ಷದ T20 ವಿಶ್ವ ಕಪ್ ಆಯೋಜನೆ ವಿಚಾರದಲ್ಲಿ ICC ನಿರ್ಧಾರ ಪ್ರಕಟಿಸೋವರೆಗೂ ಕಾಯಲು ಸಾಧ್ಯವಿಲ್ಲ ಎಂದು ಗುಡುಗಿತ್ತು. ಜೊತೆಗೆ, ನಾವು IPL ಆಯೋಜಿಸುವ ಬಗ್ಗೆ ಈಗಾಗಲೇ ತೀರ್ಮಾನವನ್ನ ತೆಗೆದುಕೊಳ್ಳೋದಕ್ಕೆ ಶುರು ಮಾಡಿದ್ದೇವೆ ಎಂದೂ ಸಹ ಹೇಳಿತ್ತು. ಇದೀಗ, ಹುಟ್ಟುಹಬ್ಬದ ಸಂಭ್ರಮದಲ್ಲಿರೋ BCCI ಅಧ್ಯಕ್ಷ ಸೌರವ್ ಗಂಗೂಲಿ 2020 ಇಸವಿಯನ್ನ IPL ನಡೆಸದೆ ಮುಗಿಸೋದಿಲ್ಲ ಎಂದಿದ್ದಾರೆ. ಅಲ್ಲಿಗೆ ಕೊರೊನಾ ಕೋಲಾಹಲದ ನಡುವೆಯೂ ಈ ಬಾರಿ IPL ಶತಾಯಗತಾಯ ನಡೆಯುತ್ತೆ ಅನ್ನೋದನ್ನ ಬಿಗ್​ಬಾಸ್ ಸೌರವ್ […]

ಈ ವರ್ಷ IPL T20 ನಡೆಸಿಯೇ ತೀರುತ್ತೇನೆ - ಬಿಗ್​ಬಾಸ್ ಸೌರವ್​ ಗಂಗೂಲಿ
Follow us on

ಮೊನ್ನೆ ಮೊನ್ನೆಯಷ್ಟೇ BCCI ಈ ವರ್ಷದ T20 ವಿಶ್ವ ಕಪ್ ಆಯೋಜನೆ ವಿಚಾರದಲ್ಲಿ ICC ನಿರ್ಧಾರ ಪ್ರಕಟಿಸೋವರೆಗೂ ಕಾಯಲು ಸಾಧ್ಯವಿಲ್ಲ ಎಂದು ಗುಡುಗಿತ್ತು. ಜೊತೆಗೆ, ನಾವು IPL ಆಯೋಜಿಸುವ ಬಗ್ಗೆ ಈಗಾಗಲೇ ತೀರ್ಮಾನವನ್ನ ತೆಗೆದುಕೊಳ್ಳೋದಕ್ಕೆ ಶುರು ಮಾಡಿದ್ದೇವೆ ಎಂದೂ ಸಹ ಹೇಳಿತ್ತು.

ಇದೀಗ, ಹುಟ್ಟುಹಬ್ಬದ ಸಂಭ್ರಮದಲ್ಲಿರೋ BCCI ಅಧ್ಯಕ್ಷ ಸೌರವ್ ಗಂಗೂಲಿ 2020 ಇಸವಿಯನ್ನ IPL ನಡೆಸದೆ ಮುಗಿಸೋದಿಲ್ಲ ಎಂದಿದ್ದಾರೆ. ಅಲ್ಲಿಗೆ ಕೊರೊನಾ ಕೋಲಾಹಲದ ನಡುವೆಯೂ ಈ ಬಾರಿ IPL ಶತಾಯಗತಾಯ ನಡೆಯುತ್ತೆ ಅನ್ನೋದನ್ನ ಬಿಗ್​ಬಾಸ್ ಸೌರವ್ ಗಂಗೂಲಿ ತಿಳಿಸಿದ್ದಾರೆ.

35 ರಿಂದ 40 ದಿನ ಕಾಲಾವಧಿ ಸಾಕು..
IPL ಇಲ್ಲದೆ 2020 ಇಸವಿಯನ್ನ ಮುಗಿಸೋಕೆ ನಾವು ಬಯಸುವುದಿಲ್ಲ. ನಮ್ಮ ಮೊದಲ ಆದ್ಯತೆ ಭಾರತ. ನಮಗೆ 35 ರಿಂದ 40 ದಿನಗಳ ಕಾಲಾವಧಿ ಸಿಕ್ಕರೂ IPL ಪಂದ್ಯಾವಳಿ ಆಯೋಜಿಸುತ್ತೇವೆ. ಆದರೆ ಎಲ್ಲಿ ಅನ್ನೋದು ಸದ್ಯಕ್ಕೆ ಯೋಚಿಸಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಸದ್ಯ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗ್ತಿದೆ. ಹೀಗಾಗಿ, ಇಲ್ಲಿ IPL ನಡೆಸೋದಕ್ಕೆ ಸಾಧ್ಯವಾಗದೇ ಹೋದ್ರೆ, ವಿದೇಶದಲ್ಲಿ ಆಯೋಜಿಸುವ ಬಗ್ಗೆ BCCI ಚಿಂತನೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ ನಮ್ಮ ಮೊದಲ ಆದ್ಯತೆ ಭಾರತವೇ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ವಿದೇಶದಲ್ಲಿ ಆಯೋಜಿಸೋಕೆ ಚಿಂತನೆ ನಡೆಸುತ್ತಿದ್ದೇವೆ ಎಂದು ಹಂಚಿಕೊಂಡಿದ್ದಾರೆ.

ಆದರೆ, ಒಂದು ವೇಳೆ ವಿದೇಶದಲ್ಲಿ IPL ಪಂದ್ಯಾವಳಿಯನ್ನ ಆಯೋಜಿಸಬೇಕಾಗಿ ಬಂದರೆ BCCI ಮತ್ತು ಎಲ್ಲಾ ತಂಡದ ಫ್ರಾಂಚೈಸಿಗೂ ಅಧಿಕ ವೆಚ್ಚ ತಗುಲಬಹುದು ಎಂದು ಗಂಗೂಲಿ ಹೇಳಿದ್ದಾರೆ. ಇದುವರೆಗಿನ IPL ಇತಿಹಾಸದಲ್ಲಿ ಒಟ್ಟು 12 ಪಂದ್ಯಾವಳಿಗಳನ್ನ ಆಯೋಜಿಸಲಾಗಿದೆ. ಅದರಲ್ಲಿ, 2009ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆ ವರ್ಷದ ಪಂದ್ಯಾವಳಿಯನ್ನ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಒಟ್ನಲ್ಲಿ, ದಾದಾ ಏನೇ ಆದರೂ IPL ನಡೆಸಿಯೇ ತೀರುತ್ತೇನೆ ಎಂದು ಪಣತೊಟ್ಟಿದ್ದಾರೆ.

Published On - 12:14 pm, Thu, 9 July 20