ಆಟಗಾರನಿಗೆ ಕೊರೊನಾ; ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ಮುಂದೂಡಿಕೆ

|

Updated on: Dec 04, 2020 | 6:01 PM

ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲು ಇಂಗ್ಲೆಂಡ್​ ತಂಡ ತೆರಳಿದೆ. ಶುಕ್ರವಾರ ಮುಂಜಾನೆ 11 ಗಂಟೆಗೆ ಮ್ಯಾಚ್​ ಆರಂಭಗೊಳ್ಳಬೇಕಿತ್ತು. ಆದರೆ, ಇದಕ್ಕೂ ಮೊದಲು ನಡೆದ ಕೊರೊನಾ ಪರೀಕ್ಷೆಯಲ್ಲಿ ಆಟಗಾರನಿಗೆ ಕೊರೊನಾ ವೈರಸ್​ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

ಆಟಗಾರನಿಗೆ ಕೊರೊನಾ; ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ಮುಂದೂಡಿಕೆ
Follow us on

ಕೊರೊನಾ ಪರೀಕ್ಷೆ ವೇಳೆ ಆಟಗಾರನೊಬ್ಬನಿಗೆ ಪಾಸಿಟಿವ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್​-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ಮುಂದೂಡಲ್ಪಟ್ಟಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲು ಇಂಗ್ಲೆಂಡ್​ ತಂಡ ತೆರಳಿದೆ. ಶುಕ್ರವಾರ ಮುಂಜಾನೆ 11 ಗಂಟೆಗೆ ಮ್ಯಾಚ್​ ಆರಂಭಗೊಳ್ಳಬೇಕಿತ್ತು. ಆದರೆ, ಇದಕ್ಕೂ ಮೊದಲು ನಡೆದ ಕೊರೊನಾ ಪರೀಕ್ಷೆಯಲ್ಲಿ ಆಟಗಾರನಿಗೆ ಕೊರೊನಾ ವೈರಸ್​ ಇರುವುದು ದೃಢಪಟ್ಟಿದೆ. ಹೀಗಾಗಿ, ಪಂದ್ಯ ಭಾನುವಾರಕ್ಕೆ ಮುಂದೂಡಲ್ಪಟ್ಟಿದೆ.

ಎರಡೂ ತಂಡದ ಆಟಗಾರರ ಹಿತದೃಷ್ಟಿಯಿಂದ ನಾವು ಪಂದ್ಯವನ್ನು ಮುಂದೂಡುತ್ತಿದ್ದೇವೆ. ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ಎರಡೂ ಕ್ರಿಕೆಟ್​ ಮಂಡಳಿ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿವೆ. ಅಷ್ಟೇ ಅಲ್ಲ, ಎಲ್ಲ ಕ್ರಿಕೆಟ್​ ಆಟಗಾರರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಇಂಗ್ಲೆಂಡ್ ಮೂರು ಪಂದ್ಯಗಳನ್ನು ಆಡಲಿದೆ. ಇಂದಿನಿಂದ ಪಂದ್ಯ ಆರಂಭಗೊಳ್ಳಬೇಕಿತ್ತು.

Published On - 5:54 pm, Fri, 4 December 20