AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕಿ-ಟಾಕಾಗೆ ಕಂಗೆಟ್ಟ ಫ್ರಾನ್ಸ್​: ಫೈನಲ್​ಗೇರಿದ ಸ್ಪೇನ್

FIFA World Cup 2026: ಒಂದು ಕಾಲದಲ್ಲಿ ಶಾರ್ಟ್ ಪಾಸ್‌ಗಳ ಮೂಲಕ ಇಡೀ ವಿಶ್ವ ಫುಟ್‌ಬಾಲ್ ಅನ್ನು ಆಳಿದ್ದ ಸ್ಪೇನ್‌ನ ಸಾಂಪ್ರದಾಯಿಕ 'ಟಿಕಿ-ಟಾಕಾ' ಶೈಲಿ ಈಗ ಸಂಪೂರ್ಣ ಹೊಸ ರೂಪ ಪಡೆದುಕೊಂಡಿದೆ. ಫಿಫಾ ವಿಶ್ವಕಪ್ 2026ರ ಸೆಮಿಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಮಣಿಸಿದ ಸ್ಪೇನ್, ಕೇವಲ ಪಂದ್ಯವನ್ನಷ್ಟೇ ಗೆಲ್ಲಲಿಲ್ಲ. ಬದಲಿಗೆ ಆಧುನಿಕ ಫುಟ್‌ಬಾಲ್ ಜಗತ್ತಿಗೆ ತನ್ನ ಹೊಚ್ಚ ಹೊಸ ತಂತ್ರಗಾರಿಕೆಯಾದ 'ಟಿಕಿ-ಟಾಕಾ 2.0'  ಅನ್ನು ಪರಿಚಯಿಸಿತು.

ಟಿಕಿ-ಟಾಕಾಗೆ ಕಂಗೆಟ್ಟ ಫ್ರಾನ್ಸ್​: ಫೈನಲ್​ಗೇರಿದ ಸ್ಪೇನ್
SpainImage Credit source: FIFA
ಝಾಹಿರ್ ಯೂಸುಫ್
|

Updated on: Jul 15, 2026 | 7:39 AM

Share

ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಸ್ಪೇನ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟೆಕ್ಸಾಸ್‌ನ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸ್ಪೇನ್ ತಂಡದ ಅದ್ಭುತ ರಕ್ಷಣಾತ್ಮಕ ಆಟ ಮತ್ತು ಟಿಕಿ-ಟಾಕಾ ತಂತ್ರಗಾರಿಕೆಗೆ ಫ್ರಾನ್ಸ್ ಸಂಪೂರ್ಣವಾಗಿ ತತ್ತರಿಸಿತು. ಪರಿಣಾಮ ಸ್ಪೇನ್ ಬರೋಬ್ಬರಿ 16 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್​ಗೇರುವಲ್ಲಿ ಯಶಸ್ವಿಯಾಗಿದೆ.

ಟಿಕಿ-ಟಾಕಾ 2.0:

‘ಟಿಕಿ-ಟಾಕಾ 2.0’ ಎಂಬುದು ಸಾಂಪ್ರದಾಯಿಕ ನಿಧಾನಗತಿಯ ಪಾಸಿಂಗ್ ಆಟಕ್ಕೆ ಆಧುನಿಕ ವೇಗ ಮತ್ತು ಆಕ್ರಮಣಕಾರಿ ತಂತ್ರವನ್ನು ಬೆರೆಸಿ ಸ್ಪೇನ್ ಕೋಚ್ ಲೂಯಿಸ್ ಡೆ ಲಾ ಫ್ಯೂಯೆಂಟೆ ರೂಪಿಸಿರುವ ಹೊಚ್ಚ ಹೊಸ ಫುಟ್‌ಬಾಲ್ ತಂತ್ರಗಾರಿಕೆಯಾಗಿದೆ.

ಹಳೆಯ ಶೈಲಿಯಲ್ಲಿ ಕೇವಲ ಚೆಂಡನ್ನು ತನ್ನ ಬಳಿ ಇಟ್ಟುಕೊಳ್ಳುವುದಕ್ಕಷ್ಟೇ ಪ್ರಾಮುಖ್ಯತೆ ಇರುತ್ತಿತ್ತು. ಆದರೆ ಈ ಹೊಸ ಟಿಕಿ-ಟಾಕಾ ತಂತ್ರದಲ್ಲಿ ಚೆಂಡಿನ ನಿಯಂತ್ರಣದ ಜೊತೆಗೆ ಎದುರಾಳಿ ಕೋಟೆಗೆ ನೇರವಾಗಿ ಲಗ್ಗೆ ಇಡುವ ಮಾರಕ ವೇಗವೂ ಅಡಗಿದೆ.

ಇದೇ ತಂತ್ರದೊಂದಿಗೆ ಕಣಕ್ಕಿಳಿದ ಸ್ಪೇನ್ ಆಟಗಾರರು ಆರಂಭದಿಂದಲೇ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಪರಿಣಾಮ ಸ್ಪೇನ್ ಇಡೀ ಪಂದ್ಯದಲ್ಲಿ ಶೇಕಡಾ 62 ಕ್ಕಿಂತ ಹೆಚ್ಚು ಸಮಯ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಮೂಲಕ ಫ್ರಾನ್ಸ್ ಆಟಗಾರರನ್ನು ಓಡಾಡುವಂತೆ ಮಾಡಿತು.

ಇದರಿಂದ ಒತ್ತಡಕ್ಕೆ ಒಳಗಾದ ಫ್ರಾನ್ಸ್ ಆಟಗಾರರು ಚೆಂಡಿನ ಮೇಲಿನ ನಿಯಂತ್ರಣ ಕಳೆದುಕೊಂಡರು. ಇತ್ತ ಸ್ಪೇನ್​ ತಂಡದ ಮಿಡ್‌ಫೀಲ್ಡರ್‌ಗಳಾದ ಪೆಡ್ರೆ ಮತ್ತು ಫ್ಯಾಬಿಯನ್ ರೂಯಿಝ್ ಪರಸ್ಪರ ನೂರಾರು ಶಾರ್ಟ್ ಪಾಸ್‌ಗಳನ್ನು ನೀಡುತ್ತಾ ಫ್ರಾನ್ಸ್‌ನ ರಕ್ಷಣಾ ಕೋಟೆಯನ್ನು ನಿರಾಯಾಸವಾಗಿ ಭೇದಿಸಿದರು.

  • ಮೊದಲ ಗೋಲು: ಪಂದ್ಯದ 22ನೇ ನಿಮಿಷದಲ್ಲಿ ಫ್ರಾನ್ಸ್‌ನ ಹಿರಿಯ ಡಿಫೆಂಡರ್ ಲ್ಯೂಕಾಸ್ ಡಿಗ್ನೆ ಅವರು ಸ್ಪೇನ್‌ನ ಯುವ ತಾರೆ ಲಾಮಿನ್ ಯಮಾಲ್ ಅವರ ಮೇಲೆ ಫೌಲ್ ಮಾಡಿದರು. ಇದರ ಫಲವಾಗಿ ಸ್ಪೇನ್‌ಗೆ ಲಭಿಸಿದ ಪೆನಾಲ್ಟಿ ಅವಕಾಶವನ್ನು ಮೈಕೆಲ್ ಒಯರ್ಝಬಾಲ್ ಯಾವುದೇ ತಪ್ಪಿಲ್ಲದೆ ಗೋಲಾಗಿ ಪರಿವರ್ತಿಸಿ 1-0 ಮುನ್ನಡೆ ತಂದುಕೊಟ್ಟರು.
  • ಎರಡನೇ ಗೋಲು: ದ್ವಿತೀಯಾರ್ಧದಲ್ಲೂ ಟಿಕಿ-ಟಾಕಾ ಆಟ ಮುಂದುವರಿಸಿದ ಸ್ಪೇನ್ ತಂಡಕ್ಕೆ 58ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಪೆಡ್ರೊ ಪೊರೊ ಅವರು ಡ್ಯಾನಿ ಓಲ್ಮೊ ಅವರೊಂದಿಗೆ ಅತ್ಯದ್ಭುತ ಒನ್-ಟು-ಒನ್ ಪಾಸ್ ಚತುರತೆ ಪ್ರದರ್ಶಿಸಿ, ಫ್ರಾನ್ಸ್ ಗೋಲ್‌ಕೀಪರ್ ಮೈಕ್ ಮೈಗ್ನಾನ್ ಅವರನ್ನು ವಂಚಿಸಿ ಎರಡನೇ ಗೋಲು ಬಾರಿಸಿದರು.

ಮಂಕಾದ ಎಂಬಾಪೆ: ಫ್ರಾನ್ಸ್‌ಗೆ ಗಾಯದ ಮೇಲೆ ಬರೆ

ವಿಶ್ವದ ಅತ್ಯಂತ ಅಪಾಯಕಾರಿ ಆಕ್ರಮಣಕಾರಿ ಮುನ್ಪಡೆ ಹೊಂದಿದ್ದರೂ, ಫ್ರಾನ್ಸ್ ನಾಯಕ ಕಿಲಿಯನ್ ಎಂಬಾಪೆ ಸ್ಪೇನ್‌ನ ಬಿಗಿಯಾದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಪಂದ್ಯದ 31ನೇ ನಿಮಿಷದಲ್ಲಿ ಫ್ರಾನ್ಸ್‌ನ ಪ್ರಮುಖ ಡಿಫೆಂಡರ್ ವಿಲಿಯಂ ಸಲಿಬಾ ಗಾಯಗೊಂಡು ಮೈದಾನ ತೊರೆದದ್ದು ಫ್ರಾನ್ಸ್‌ಗೆ ಭಾರಿ ಹಿನ್ನಡೆಯಾಯಿತು.

ಇತ್ತ ಟಿಕಿ-ಟಾಕಾ ಶೈಲಿಯಲ್ಲೇ ಪಂದ್ಯ ಮುಂದುವರೆಸಿದ ಸ್ಪೇನ್, ಎಂಬಾಪೆಯ ಕೌಂಟರ್ ಅಟ್ಯಾಕ್​ ಅನ್ನು ಸಂಪೂರ್ಣ ನಿಯಂತ್ರಿಸಿದರು. ಪರಿಣಾಮ ಒತ್ತಡಕ್ಕೆ ಒಳಗಾದ ಎಂಬಾಪೆ ಕೆಲ ಅವಕಾಶಗಳು ಲಭಿಸಿದರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಸ್ಪೇನ್​ಗೆ ಹ್ಯಾಟ್ರಿಕ್ ಗೆಲುವು:

ಸ್ಪೇನ್ ತಂಡವು ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಫ್ರಾನ್ಸ್ ವಿರುದ್ಧ ಸತತ ಮೂರನೇ ಬಾರಿ ಗೆಲುವು ಸಾಧಿಸಿ ತನ್ನ ಪ್ರಾಬಲ್ಯ ಮೆರೆದಿದೆ.

  • ಯೂರೋ ಕಪ್ 2024 (ಸೆಮಿಫೈನಲ್): ಸ್ಪೇನ್ 2-1 ಗೋಲುಗಳಿಂದ ಜಯಭೇರಿ.
  • ಯುಇಎಫ್‌ಎ ನೇಷನ್ಸ್ ಲೀಗ್ 2025 (ಸೆಮಿಫೈನಲ್): ಸ್ಪೇನ್ 5-4 ಗೋಲುಗಳ ರೋಚಕ ಗೆಲುವು.
  • ಫಿಫಾ ವಿಶ್ವಕಪ್ 2026 (ಸೆಮಿಫೈನಲ್): ಸ್ಪೇನ್ 2-0 ಗೋಲುಗಳ ಭರ್ಜರಿ ಜಯ

ಇದನ್ನೂ ಓದಿ: ನಾವು ಹೆದರಲ್ಲ… ಕೊಹ್ಲಿ, ರೋಹಿತ್​​ಗೆ ಡಕೆಟ್ ಸವಾಲು!

ಫೈನಲ್ ಫೈಟ್:

ಭಾನುವಾರ (ಜುಲೈ 19) ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಮಹಾ ಫೈನಲ್‌ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೋತ ಫ್ರಾನ್ಸ್ ತಂಡವು ಶನಿವಾರ ಮಿಯಾಮಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಸೋತ ತಂಡವನ್ನು ಎದುರಿಸಲಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ