ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿ 7 ವರ್ಷ ನಿಷೇಧಕ್ಕೊಳಗಾಗಿದ್ದ ಕೇರಳ ಎಕ್ಸ್ಪ್ರೆಸ್ ಎಸ್.ಶ್ರೀಶಾಂತ್, ಮತ್ತೆ ಕ್ರಿಕೆಟ್ ಅಂಗಳಕ್ಕೆ ಎಂಟ್ರಿಕೊಡ್ತಿದ್ದಾರೆ. 2013ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನ ಪ್ರತಿನಿಧಿಸುತ್ತಿದ್ದ ಶ್ರೀಶಾಂತ್, ಅಜಿತ್ ಚಂಡೀಲಾ ಮತ್ತು ಅಂಕಿತ್ ಚೌವ್ಹಾಣ್ ಜೊತೆ ಸೇರಿ ಸ್ಪಾಟ್ ಫಿಕ್ಸಿಂಗ್ ಸುಳಿಯಲ್ಲಿ ಸಿಲುಕಿ ಬಿಸಿಸಿಐನಿಂದ ಅಜೀವ ನಿಷೇದಧ ಶಿಕ್ಷೆಗೆ ಒಳಗಾಗಿದ್ರು.
ನಿಷೇಧದ ಅವಧಿ ಇದೆ ಸೆಪ್ಟೆಂಬರ್ಗೆ ಮುಕ್ತಾಯವಾಗೋದ್ರಿಂದ, ಮುಂಬರುವ ರಣಜಿ ಟೂರ್ನಿಯಲ್ಲಿ ಆಡಲು ಅವಕಾಶ ನೀಡೋದಕ್ಕೆ ಕೇರಳ ಕ್ರಿಕೆಟ್ ಅಸೋಸಿಯೇಷನ್ ತೀರ್ಮಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸಜನ್ ಕೆ ವರ್ಗೀಸ್, ಕೆಸಿಎ ಶ್ರೀಶಾಂತ್ಗೆ ಮರಳಿ ಸ್ವಾಗತಿಸಲು ರೆಡಿಯಾಗಿದೆ. ಆದ್ರೆ ಶ್ರೀಶಾಂತ್ ರಣಜಿ ತಂಡಕ್ಕೆ ಎಂಟ್ರಿ ಕೊಡಲು, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ನಿಜವಾಗಿಯೂ ಅವರೊಬ್ಬ ಅದ್ಭುತ ಬೌಲರ್ ಎಂದು ಹೇಳಿದ್ದಾರೆ.
ಕೇರಳ ಕ್ರಿಕೆಟ್ ಸಂಸ್ಥೆ ಇತ್ತೀಚಿಗೆ ಭಾರತ ತಂಡದ ಮಾಜಿ ವೇಗಿ ಟೀನು ಯೊಹಾನಾರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ. ಈಗ ಶ್ರೀಶಾಂತ್ ಕೂಡ ತಂಡವನ್ನು ಕೂಡಿಕೊಳ್ಳುವುದರಿಂದ ಕೇರಳ ತಂಡದ ಸದೃಢವಾಗಲಿದೆ ಎಂದು ಕೆಸಿಎ ಕಾರ್ಯದರ್ಶಿ ಶ್ರೀತ್ ನಾಯರ್ ತಿಳಿಸಿದ್ದಾರೆ. ಒಟ್ನಲ್ಲಿ ಶ್ರೀ ಕಮ್ಬ್ಯಾಕ್ ಅದ್ಧೂರಿಯಾಗಿರಲಿ ಅನ್ನೊದೇ ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.