Kusal Mendis: ಫೀಲ್ಡಿಂಗ್ ವೇಳೆ ಎದೆನೋವು: ಲಂಕಾ ಆಟಗಾರ ಆಸ್ಪತ್ರೆಗೆ ದಾಖಲು

Sri Lanka's Kusal Mendis: ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಅರ್ಧಶತಕ ಬಾರಿಸಿದ್ದ ಮೆಂಡಿಸ್, ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ಬರದ 48 ರನ್ ಗಳಿಸಿದರು.

Kusal Mendis: ಫೀಲ್ಡಿಂಗ್ ವೇಳೆ ಎದೆನೋವು: ಲಂಕಾ ಆಟಗಾರ ಆಸ್ಪತ್ರೆಗೆ ದಾಖಲು
Kusal Mendis
Updated By: ಝಾಹಿರ್ ಯೂಸುಫ್

Updated on: May 23, 2022 | 9:08 PM

ಶ್ರೀಲಂಕಾ ಮತ್ತು ಬಾಂಗ್ಲಾದೇಶ (SL vs BAN 2nd Test) ನಡುವಿನ ಮಿರ್‌ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ದಿನದಂದು ಶ್ರೀಲಂಕಾದ ಬ್ಯಾಟ್ಸ್‌ಮನ್ ಕುಶಾಲ್ ಮೆಂಡಿಸ್ (Kusal Mendis) ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಢಾಕಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂದ್ಯದ ಫೀಲ್ಡಿಂಗ್ ವೇಳೆ ಎದೆನೋವು ಕಾಣಿಸಿಕೊಂಡಿದ್ದರಿಂದ ಮೆಂಡಿಸ್ ಮೈದಾನದಿಂದ ಹೊರನಡೆದಿದ್ದರು. ಇದಾಗ್ಯೂ ಮುನ್ನೆಚ್ಚರಿಕೆಯ ಸಲುವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಪಂದ್ಯದ 23 ನೇ ಓವರ್‌ ವೇಳೆ ದಿಢೀರಣೆ ಮೆಂಡಿಸ್ ಮೈದಾನದಲ್ಲಿ ಮಲಗಿದಾಗ ಎಲ್ಲರಿಗೂ ಆಘಾತವಾಯಿತು. ಕೂಡಲೇ ಮೈದಾನಕ್ಕೆ ಓಡಿ ಬಂದ ವೈದ್ಯಕೀಯ ತಂಡ ತಪಾಸಣೆ ನಡೆಸಿ ಮೈದಾನದಿಂದ ಕರೆದುಕೊಂಡು ಹೋದರು. ಇನ್ನು ಮೈದಾನದಿಂದ ಡ್ರೆಸ್ಸಿಂಗ್ ರೂಮ್‌ಗೆ ತೆರಳುವ ಮಾರ್ಗದಲ್ಲಿ ಮೆಂಡಿಸ್ ಅವರಿಗೆ ಮತ್ತೆ ಎದೆನೋವು ಹೆಚ್ಚಾಗಿದ್ದು, ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಸಿಬಿ ವೈದ್ಯ ಮಂಜೂರ್ ಹುಸೇನ್ ಚೌಧರಿ ಹೇಳಿದ್ದಾರೆ.

ಚೌಧರಿ ಪ್ರಕಾರ, ಪಂದ್ಯಕ್ಕೂ ಮುನ್ನ ಮೆಂಡಿಸ್ ನಿರ್ಜಲೀಕರಣದಿಂದ ಬಳಲುತ್ತಿದ್ದರು. ಎದೆನೋವಿಗೆ ಇದೂ ಒಂದು ಕಾರಣವಾಗಿರಬಹುದು. ಅದೇ ಸಮಯದಲ್ಲಿ, ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಿಂದಲೂ ಇದು ಸಂಭವಿಸಬಹುದು. ಆದರೆ, ಅವರು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಮತ್ತು ಮೀರ್‌ಪುರ ಟೆಸ್ಟ್‌ನಲ್ಲಿ ಮತ್ತಷ್ಟು ಆಡಲು ಸಾಧ್ಯವಾಗುತ್ತದೆಯೇ ಎಂಬುದು ತಿಳಿದಿಲ್ಲ.

ಇದನ್ನೂ ಓದಿ
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

ಮೆಂಡಿಸ್ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ್ದರು. ಈ ಪಂದ್ಯವನ್ನು ಶ್ರೀಲಂಕಾ ತಂಡ ಡ್ರಾ ಮಾಡಿಕೊಳ್ಳುವಲ್ಲಿ ಮೆಂಡಿಸ್ ಪ್ರಮುಖ ಪಾತ್ರ ವಹಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಅರ್ಧಶತಕ ಬಾರಿಸಿದ್ದ ಮೆಂಡಿಸ್, ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ಬರದ 48 ರನ್ ಗಳಿಸಿದರು. ಇದೀಗ ಕುಸಾಲ್ ಮೆಂಡಿಸ್ 2ನೇ ಪಂದ್ಯದಲ್ಲಿ ಆಡಲಿದ್ದಾರಾ ಎಂಬುದು ಇನ್ನೂ ಕೂಡ ಖಚಿತವಾಗಿಲ್ಲ.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.