T20 World Cup: ಕೊಹ್ಲಿಗಿಲ್ಲ ಸರಿಸಾಟಿ; ಟಿ20 ವಿಶ್ವಕಪ್​ನಲ್ಲಿ ಮ್ಯಾನ್‌ ಆಫ್‌ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಕ್ರಿಕೆಟಿಗರಿವರು

Edited By:

Updated on: Oct 12, 2022 | 2:57 PM

T20 World Cup: ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಈ ಪ್ರಶಸ್ತಿಗೆ ಭಾಜನರಾದ ವಿಶ್ವದ ಏಕೈಕ ಆಟಗಾರ ಭಾರತದ ಸ್ಟಾಲ್ವಾರ್ಟ್ ವಿರಾಟ್ ಕೊಹ್ಲಿ ಎಂಬುದು ಭಾರತೀಯರ ಹೆಗ್ಗಳಿಕೆಯಾಗಿದೆ.

1 / 8
ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ನಡೆಯಲಿದೆ. ಈ ಬಾರಿ, ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ T20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬೌಲಿಂಗ್ ವಿಷಯದಲ್ಲಿ, ಈ ಬಾರಿ ಟೀಂ ಇಂಡಿಯಾ ಸ್ವಲ್ಪ ದುರ್ಬಲವಾಗಿದ್ದು, ತಂಡಕ್ಕೆ ಯುವ ಬೌಲರ್‌ಗಳೇ ಆಸರೆಯಾಗಿದ್ದಾರೆ. ಟೀಂ ಇಂಡಿಯಾ ಮಾತ್ರವಲ್ಲದೆ ಇತರೆ ತಂಡಗಳು ಕೂಡ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿಯುತ್ತಿವೆ. ಅಂತಹ ಕೆಲವು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ನಡೆಯಲಿದೆ. ಈ ಬಾರಿ, ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ T20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬೌಲಿಂಗ್ ವಿಷಯದಲ್ಲಿ, ಈ ಬಾರಿ ಟೀಂ ಇಂಡಿಯಾ ಸ್ವಲ್ಪ ದುರ್ಬಲವಾಗಿದ್ದು, ತಂಡಕ್ಕೆ ಯುವ ಬೌಲರ್‌ಗಳೇ ಆಸರೆಯಾಗಿದ್ದಾರೆ. ಟೀಂ ಇಂಡಿಯಾ ಮಾತ್ರವಲ್ಲದೆ ಇತರೆ ತಂಡಗಳು ಕೂಡ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿಯುತ್ತಿವೆ. ಅಂತಹ ಕೆಲವು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

2 / 8

2007 ರಲ್ಲಿ ಆಡಿದ ಟಿ20 ವಿಶ್ವಕಪ್‌ನಲ್ಲಿ ಭಾರತ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಮಾತ್ರ ಪಾಕಿಸ್ತಾನದ ಲೆಜೆಂಡರಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಪಾಲಾಗಿತ್ತು. ಅಫ್ರಿದಿ 91 ರನ್‌ಗಳೊಂದಿಗೆ ವಿಶ್ವಕಪ್‌ನಲ್ಲಿ ಅತ್ಯಧಿಕ 12 ವಿಕೆಟ್‌ಗಳನ್ನು ಪಡೆದಿದ್ದರು.

3 / 8

2009 ರ ಸೀಸನ್​ನಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆದರೆ ಶ್ರೀಲಂಕಾದ ಬಲಿಷ್ಠ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು. ಫೈನಲ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ದಿಲ್ಶಾನ್, ಪಂದ್ಯಾವಳಿಯಲ್ಲಿ ಗರಿಷ್ಠ 317 ರನ್ ಗಳಿಸಿ್ದರು. ದಿಲ್ಶಾನ್ ಮಾಡಿದ್ದ ಈ ದಾಖಲೆಯನ್ನು 2014 ರಲ್ಲಿ ಕೊಹ್ಲಿ ಮುರಿದಿದ್ದರು.

4 / 8

2010ರಲ್ಲಿ ಇಂಗ್ಲೆಂಡ್‌ನ ದಿಗ್ಗಜ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಅತ್ಯುತ್ತಮ ಆಟಗಾರನಾಗಿ ಆಯ್ಕೆಯಾಗಿದ್ದು. ಅಲ್ಲದೆ ಚಾಂಪಿಯನ್ ಆದ ತಂಡದಿಂದ ಪಂದ್ಯಾವಳಿಯ ಆಟಗಾರನನ್ನು ಆಯ್ಕೆ ಮಾಡಿದ್ದು ಇದೇ ಮೊದಲು. ಅಂತಿಮ ಪಂದ್ಯದಲ್ಲಿ ಪೀಟರ್ಸನ್ 47 ರನ್‌ಗಳೊಂದಿಗೆ ಒಟ್ಟು 248 ರನ್ ಗಳಿಸಿದ್ದರು.

5 / 8

ವಾರ್ನರ್‌ಗಿಂತ ಮೊದಲು ಆಸ್ಟ್ರೇಲಿಯದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರು. 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮಾಟ್ಸನ್,249 ರನ್ ಬಾರಿಸುವುದರೊಂದಿಗೆ 11 ವಿಕೆಟ್ ಸಹ ಪಡೆದಿದ್ದರು.

6 / 8

ಆ ಬಳಿಕ 2016ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಿದ್ದರು. ಈ ಆವೃತ್ತಿಯಲ್ಲಿ ಕೊಹ್ಲಿ 273 ರನ್ ಗಳಿಸುವುದರೊಂದಿಗೆ ಒಂದು ವಿಕೆಟ್ ಸಹ ಪಡೆದಿದ್ದರು. ಇದು ಅವರ ಸತತ ಎರಡನೇ ಪ್ರಶಸ್ತಿಯಾಗಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

7 / 8

2014 ರ ವಿಶ್ವಕಪ್​ನಲ್ಲಿ ಕೊಹ್ಲಿ ಮೊದಲ ಬಾರಿಗೆ ಟೂರ್ನಿಯ ಆಟಗಾರ ಪ್ರಶಸ್ತಿ ಗೆದ್ದಿದ್ದರು. ಬಾಂಗ್ಲಾದೇಶದಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ, ಕೊಹ್ಲಿ ಅತ್ಯಧಿಕ 319 ರನ್ ಗಳಿಸಿದರು. ಇದು ಒಂದೇ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ.

8 / 8

ಕಳೆದ ವರ್ಷ ಅಂದರೆ 2021ರಲ್ಲಿ ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯದ ಲೆಜೆಂಡರಿ ಓಪನರ್ ಡೇವಿಡ್ ವಾರ್ನರ್ ಈ ಪ್ರಶಸ್ತಿ ಗೆದ್ದಿದ್ದರು. ಈ ಪಂದ್ಯಾವಳಿಯಲ್ಲಿ ಅತ್ಯಧಿಕ 289 ರನ್ ಬಾರಿಸಿದ್ದ ವಾರ್ನರ್, ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯೂ ವಾರ್ನರ್ ಉತ್ತಮ ಫಾರ್ಮ್‌ನಲ್ಲಿದ್ದು, ಅವರಿಗೆ ವಿರಾಟ್ ಕೊಹ್ಲಿಯಂತೆ ಎರಡನೇ ಬಾರಿ ಈ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವಿದೆ.

Published On - 2:57 pm, Wed, 12 October 22

Loading...
Unable to load recommendations.
Follow Us