ರಾಮ ಮಂದಿರ ಪ್ರಾಣ ಪ್ರತಿಷ್ಠಾದಲ್ಲಿ ಕ್ರೀಡಾ ಲೋಕದ ಈ ದಿಗ್ಗಜರು ಪಾಲ್ಗೊಳ್ಳುವುದು ಖಚಿತ

|

Updated on: Jan 19, 2024 | 5:26 PM

Ram Mandir Inauguration: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರೀಡಾ ಜಗತ್ತಿನ ಅನೇಕ ದಿಗ್ಗಜರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಸೇರಿದ್ದಾರೆ. ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ರವೀಂದ್ರ ಜಡೇಜಾ ಅವರ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ.

ರಾಮ ಮಂದಿರ ಪ್ರಾಣ ಪ್ರತಿಷ್ಠಾದಲ್ಲಿ ಕ್ರೀಡಾ ಲೋಕದ ಈ ದಿಗ್ಗಜರು ಪಾಲ್ಗೊಳ್ಳುವುದು ಖಚಿತ
ಅಯೋಧ್ಯೆ
Follow us on

ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ (Ram Mandir Inauguration) ಕಾರ್ಯಕ್ರಮ ನಡೆಯಲಿದ್ದು, ಅದರ ಸಿದ್ಧತೆಗಳು ಇದೀಗ ಭರದಿಂದ ಸಾಗಿವೆ. ಈ ಪ್ರಯುಕ್ತ ಇಂದು ಜನವರಿ 19 ರಿಂದ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನ ಆರಂಭಗೊಂಡಿದ್ದು, ಜನವರಿ 21ರವರೆಗೆ ನಡೆಯಲಿದೆ. ಮುಖ್ಯ ಕಾರ್ಯಕ್ರಮವನ್ನು ಆಯೋಜಿಸುವ ಮತ್ತು ಅತಿಥಿಗಳನ್ನು ಆಹ್ವಾನಿಸುವ ಜವಾಬ್ದಾರಿಯನ್ನು ಒಳಗೊಂಡಿರುವ ಈ ಸಂಪೂರ್ಣ ಕಾರ್ಯಕ್ರಮದ ಜವಾಬ್ದಾರಿಯನ್ನು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ವಹಿಸಿಕೊಂಡಿದೆ. ವಿಶ್ವವೇ ಎದುರು ನೋಡುತ್ತಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಈಗಾಗಲೇ 1000ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗಿದೆ.

ಕ್ರಿಕೆಟ್ ಲೋಕದಲ್ಲಿ ಯಾರಿಗೆಲ್ಲ ಸಿಕ್ಕಿದೆ ಆಹ್ವಾನ?

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರೀಡಾ ಜಗತ್ತಿನ ಅನೇಕ ದಿಗ್ಗಜರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಸೇರಿದ್ದಾರೆ. ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ರವೀಂದ್ರ ಜಡೇಜಾ ಅವರ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ. ಇವರಲ್ಲದೆ ಅನುಭವಿ ಆಟಗಾರರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ ಮತ್ತು ಮಿಥಾಲಿ ರಾಜ್ ಅವರ ಹೆಸರೂ ಸೇರಿದೆ.

Ayodhya Ram Mandir: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ‘ಕ್ರಿಕೆಟ್ ದೇವರಿಗೆ’ ಆಹ್ವಾನ

ಭಾರತ ಕ್ರಿಕೆಟ್ ತಂಡವು ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಸ್ತುತ ತಂಡದ ಇತರ ಆಟಗಾರರು ಭಾಗವಹಿಸುವ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ. ಸಾಧ್ಯವಾದರೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ವಿರಾಟ್ ಕೊಹ್ಲಿ ಆಗಮಿಸುವ ಸಾಧ್ಯತೆಗಳು ಹೆಚ್ಚಿವೆ.

ಕ್ರೀಡಾ ಲೋಕದಲ್ಲಿ ಯಾರಿಗೆಲ್ಲ ಸಿಕ್ಕಿದೆ ಆಹ್ವಾನ?

ಇನ್ನು ಕ್ರಿಕೆಟ್ ಲೋಕದ ದಿಗ್ಗಜರ ಜೊತೆಗೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ರೀಡಾ ಲೋಕದ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅವರಲ್ಲಿ ಪಿಟಿ ಉಷಾ, ಅನಿಲ್ ಕುಂಬ್ಳೆ, ಕಪಿಲ್ ದೇವ್, ಲಿಯಾಂಡರ್ ಪೇಸ್, ​​ಮಹೇಂದ್ರ ಸಿಂಗ್ ಧೋನಿ, ಮಿಥಾಲಿ ರಾಜ್, ನೀರಜ್ ಚೋಪ್ರಾ, ಪುಲ್ಲೇಲ ಗೋಪಿಚಂದ್, ಪಿವಿ ಸಿಂಧು, ರಾಹುಲ್ ದ್ರಾವಿಡ್, ರವೀಂದ್ರ ಜಡೇಜಾ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಸೈನೆ ನೆಹ್ವಾಲ್, ಸೌರವ್ ಗಂಗೂಲಿ, ಸುನಿಲ್ ಗಂಗೂಲಿ, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ವಿಶ್ವನಾಥನ್ ಆನಂದ್, ಕರ್ಣಂ ಮಲ್ಲೇಶ್ವರಿ, ಕಲ್ಯಾಣ್ ಚೌಬೆ, ದೇವೆಂದಾ ಝಂಜದಾಲೆ, ಬೈಚುಂಗ್ ಭುಟಿಯಾ, ಬಚೇಂದ್ರಿ ಪಾಲ್, ಪ್ರಕಾಶ್ ಪಡುಕೋಣೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Fri, 19 January 24