ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ (Tokyo Olympics)ನಲ್ಲಿ ಭಾರತದ ಯುವ ಬಾಕ್ಸರ್ ಲವ್ಲಿನಾ ಬಾರ್ಗೋಹೈನ್(Lovlina Borgohain) ಕಂಚಿನ ಪದಕ (Bronze) ಗೆದ್ದಿದ್ದಾರೆ. ಸೆಮಿಫೈನಲ್ನಲ್ಲಿ ಟರ್ಕಿಯಾದ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0 ಅಂತರದಲ್ಲಿ ಸೋತಿದ್ದರಿಂದ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಆದರೆ ಅದ್ಭುತ ಫೈಟ್ಕೊಟ್ಟ ಲವ್ಲಿನಾರನ್ನು ಇಡೀ ದೇಶ ಹೊಗಳುತ್ತಿದೆ. ಈಗ ಭಾರತದ ಡೇರಿ ಉತ್ಪನ್ನಗಳ ಪ್ರಮುಖ ಕಂಪನಿಯಾದ ಅಮುಲ್ (Amul) ಕೂಡ ಕಾರ್ಟೂನ್ ಮೂಲಕ ಲವ್ಲಿನಾರಿಗೆ ವಿಶೇಷ ಗೌರವ, ಅಭಿನಂದನೆ ಸಲ್ಲಿಸಿದೆ. ಕೈಯಲ್ಲಿ ಬೊಕ್ಕೆ ಹಿಡಿದು, ತನ್ನ ಪದಕವನ್ನು ಎತ್ತಿ ತೋರಿಸುತ್ತಿರುವ ಲವ್ಲಿನಾ ಬಾರ್ಗೋಹೈನ್ ಅವರಿಗೆ ಅಮುಲ್ ಬೇಬಿ ಶುಭಾಶಯ ಹೇಳುತ್ತಿರುವಂಥ ಕಾರ್ಟೂನ್ ತುಂಬ ಮುದ್ದಾಗಿದೆ.
ಅಮುಲ್ ಕೇವಲ ಲವ್ಲಿನಾರಿಗೆ ಅಷ್ಟೇ ಅಲ್ಲದೆ, ಒಲಿಂಪಿಕ್ಸ್ನಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬರಿಗೂ ತನ್ನದೇ ರೀತಿಯಲ್ಲಿ ಅಭಿನಂದನೆ ಸಲ್ಲಿಸುತ್ತಿದೆ. ಹಾಗೇ ಈಗಾಗಲೇ ಕಂಚು ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಅವರಿಗೂ ಕಾರ್ಟೂನ್ ಮೂಲಕ ಅಮುಲ್ ಶುಭಾಶಯ ಕೋರಿದೆ. ಅಷ್ಟೇ ಅಲ್ಲ, 41 ವರ್ಷದ ಬಳಿಕ ಕಂಚಿನ ಪದಕ ಗೆದ್ದು, ಐತಿಹಾಸಿಕ ಸಾಧನೆ ಮಾಡಿದ ಪುರುಷರ ಹಾಕಿ ತಂಡಕ್ಕೂ ಅಭಿನಂದನೆ ಸಲ್ಲಿದೆ. ಇದೀಗ ಬೆಳ್ಳಿ ಗೆದ್ದಿರುವ ಕುಸ್ತಿಪಟು ರವಿಕುಮಾರ್ ದಹಿಯಾ ಅವರಿಗೂ ಶುಭಕೋರಿದೆ.
ಈ ಬಾರಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಅಥ್ಲೀಟ್ಗಳು ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಮೀರಾಬಾಯಿ ಚಾನು ಅವರಿಂದ ಶುರುವಾದ ಪದಕ ಬೇಟೆ ಮುಂದುವರಿದಿದೆ. ಅದರಲ್ಲೂ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವಲ್ಲಿ ಮಹಿಳೆಯರೇ ಒಂದು ಕೈ ಮುಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು, ಪ್ರತಿಯೊಬ್ಬ ಭಾರತೀಯರೂ ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ: Tokyo Olympics: ಕೊನೆಯ 10 ಸೆಕೆಂಡುಗಳಲ್ಲಿ ಪಂದ್ಯ ಕೈಚೆಲ್ಲಿದ ಕುಸ್ತಿಪಟು ದೀಪಕ್ ಪೂನಿಯಾ; ಕಂಚಿನ ಪದಕದ ಪಂದ್ಯದಲ್ಲಿ ಸೋಲು
Amul celebrates women power at Tokyo Olympics with beautiful cartoons
Published On - 6:31 pm, Thu, 5 August 21