Tokyo Olympics 2020: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರಿಕೆಟಿಗನ ಮಗ

| Updated By: ಝಾಹಿರ್ ಯೂಸುಫ್

Updated on: Aug 03, 2021 | 3:41 PM

ಇನ್ನು ವಿನ್​ಸ್ಟಜ್ ಬೆಂಜಮಿನ್ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ಪರಿಚಿತ ಹೆಸರು. ಏಕೆಂದರೆ 1987 ರಲ್ಲಿ ದೆಹಲಿ ಟೆಸ್ಟ್‌ನಲ್ಲಿ ಅವರು ಟೀಮ್ ಇಂಡಿಯಾ ವಿರುದ್ದ ಆಡಿದ್ದರು.

1 / 5
ಕ್ರಿಕೆಟ್​ಗೂ ಅಥ್ಲೀಟ್​ಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದು ಕೇಳುವವರೇ ಹೆಚ್ಚು. ಅದರಲ್ಲೂ ವಿಶ್ವದ ಹಲವು ಕ್ರೀಡೆಗಳು ಒಲಿಂಪಿಕ್​ನಲ್ಲಿ ಒಳಪಟ್ಟರೂ ಕ್ರಿಕೆಟ್ ಅನ್ನು ಇನ್ನೂ ಕೂಡ ಪರಿಗಣಿಸಲಾಗಿಲ್ಲ. ಅದಾಗ್ಯೂ ಕ್ರಿಕೆಟಿಗನೊಬ್ಬನ ಮಗ ಇದೀಗ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್​ನಲ್ಲೂ ಕ್ರಿಕೆಟ್ ಚರ್ಚೆಯಾಗುವಂತೆ ಮಾಡಿದ್ದಾನೆ.

2 / 5
ಹೌದು, ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪುರುಷರ 400 ಮೀ ಹರ್ಡಲ್ಸ್‌ ಓಟದಲ್ಲಿ ರೈ ಬೆಂಜಮಿನ್ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾನೆ. ಅಮೆರಿಕಾವನ್ನು ಪ್ರತಿನಿಧಿಸಿರುವ ರೈ ಬೆಂಜಮಿನ್ ಅವರ ತಂದೆ ವಿನ್‌ಸ್ಟನ್ ಬೆಂಜಮಿನ್.

3 / 5
ವಿನ್‌ಸ್ಟನ್ ಬೆಂಜಮಿನ್ ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಎಂಬುದು ಇಲ್ಲಿ ವಿಶೇಷ. 1980-90 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದ ಬೆಂಜಮಿನ್ 21 ಟೆಸ್ಟ್ ಹಾಗೂ 81 ಏಕದಿನ ಪಂದ್ಯಗಳನ್ನಾಡಿದ್ದಾರೆ. ವೇಗದ ಬೌಲರ್​ ಆಗಿ ಗುರಿತಿಸಿಕೊಂಡಿದ್ದ ಬೆಂಜಮಿನ್ ಒಟ್ಟು 161 ಅಂತಾರಾಷ್ಟ್ರೀಯ ವಿಕೆಟ್ ಪಡೆದು ಮಿಂಚಿದ್ದರು.

4 / 5
ಇದೀಗ ಅವರ ಮಗ ರೈ ಬೆಂಜಮಿನ್ ಟೋಕಿಯೊದ ಒಲಿಂಪಿಕ್​ನಲ್ಲಿ 400 ಮೀಟರ್ ಹರ್ಡಲ್ಸ್‌ನ ಫೈನಲ್‌ ರನ್ನಿಂಗ್​ ಅನ್ನು 46.17 ಸೆಕೆಂಡುಗಳಲ್ಲಿ ಪೂರೈಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಬೆಂಜಮಿನ್ ಅವರ ಕುಟುಂಬ ಮೂಲತಃ ಕೆರಿಬಿಯನ್ ದ್ವೀಪವಾದ ಆಂಟಿಗುವಾ ನಿವಾಸಿ. ಆದರೆ ಬಾಲ್ಯದಲ್ಲೇ ರೈ ತಮ್ಮ ತಾಯಿಯೊಂದಿಗೆ ನ್ಯೂಯಾರ್ಕ್‌ಗೆ ತೆರಳಿ ಅಲ್ಲಿನ ಪೌರತ್ವ ಪಡೆದಿದ್ದರು. ಇದೀಗ ಒಲಿಂಪಿಕ್ಸ್‌ನಲ್ಲಿ ಅಮೆರಿಕವನ್ನು ಪ್ರತಿನಿಧಿಸಿ ಪದಕ ತಂದುಕೊಟ್ಟಿದ್ದಾರೆ.

5 / 5
ಇನ್ನು ವಿನ್​ಸ್ಟಜ್ ಬೆಂಜಮಿನ್ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ಪರಿಚಿತ ಹೆಸರು. ಏಕೆಂದರೆ 1987 ರಲ್ಲಿ ದೆಹಲಿ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದ ಸಂಜಯ್ ಮಂಜ್ರೇಕರ್ ಎರಡನೇ ಇನಿಂಗ್ಸ್‌ನಲ್ಲಿ ಗಾಯಗೊಂಡಿದ್ದರು. ವಿನ್‌ಸ್ಟನ್‌ ಎಸೆದ ಶಾರ್ಟ್ ಪಿಚ್ ಬಾಲ್ ಅನ್ನು ಎದುರಿಸುವಲ್ಲಿ ಮಂಜ್ರೇಕರ್ ವಿಫಲರಾಗಿದ್ದರು. ಇದೇ ವೇಳೆ ಚೆಂಡು ನೇರವಾಗಿ ಅವರ ಎಡಗಣ್ಣಿಗೆ ಬಡಿದಿತ್ತು. ಅಲ್ಲದೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸಂಜಯ್ ಮಂಜ್ರೇಕರ್ ಗಾಯಗೊಂಡು ಹೊರನಡೆದಿದ್ದರು. ಈ ವೇಳೆ ವಿನ್​ಸ್ಟನ್ ಬೆಂಜಮಿನ್ ಹೆಸರು ಭಾರತದ ಪತ್ರಿಕೆಗಳಲ್ಲಿ ರಾರಾಜಿಸಿತ್ತು. ಇದೀಗ ಮಗ ರೈ ಬೆಂಜಮಿನ್ ಹೆಸರಿನೊಂದಿಗೆ ಮತ್ತೊಮ್ಮೆ ಮಾಜಿ ಕ್ರಿಕೆಟಿಗನ ಹೆಸರು ಚಾಲ್ತಿಗೆ ಬಂದಿದೆ.