ಟೋಕಿಯೊ ಪ್ಯಾರಾಲಿಂಪಿಕ್ಸ್ (Tokyo 2020 Paralympics) ನಲ್ಲಿ ಭಾರತದ ಟೆಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಮಹಿಳಾ ಸಿಂಗಲ್ಸ್ನ A ಗುಂಪಿನ ಮೊದಲ ಪಂದ್ಯದಲ್ಲೇ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದರು. ಸದ್ಯ ಇಂದು ಎರಡನೇ ಗುಂಪಿನ ಎ ಪಂದ್ಯದಲ್ಲಿ ಭಾವಿನಾ ಗ್ರೇಟ್ ಬ್ರಿಟನ್ನ ಮೆಗನ್ ಶಾಕ್ಲೆಟನ್ ವಿರುದ್ಧ ಸೆಣೆಸಾಟ ನಡೆಸಲಿದ್ದು, ಇದು ಮಹತ್ವದ ಪಂದ್ಯವಾಗಿದೆ.
ಬುಧವಾರ ನಡೆದ ಟೆಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾ ಅವರು ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಸೋಲು ಅನುಭವಿಸಿದರು. ಮಹಿಳಾ ಸಿಂಗಲ್ಸ್ನ A ಗುಂಪಿನ ಮೊದಲ ಪಂದ್ಯದಲ್ಲಿ ಭಾವಿನಾಬೆನ್ ನೇರ ಸೆಟ್‌ಗಳಿಂದ ಸೋಲೊಪ್ಪಿಕೊಂಡರು.
2008 ಮತ್ತು 2012ರ ಒಲಿಂಪಿಕ್ ಚಾಂಪಿಯನ್ ಝೌ ಯಿಂಗ್ ಕೇವಲ 18 ನಿಮಿಷಗಳಲ್ಲಿ ಭಾವಿನಾ ಪಟೇಲ್ ಅವರನ್ನು 3-0 (11-3, 11-9, 11-2) ನೇರ ಸೆಟ್‌ಗಳಿಂದ ಸೋಲಿಸಿದ ಪರಿಣಾಮ ಗುರುವಾರ ಗ್ರೇಟ್ ಬ್ರಿಟನ್ನ ಮೇಗನ್ ಶಾಕ್ಲೆಟನ್ ವಿರುದ್ಧ ಸ್ಪರ್ಧಿಸಲಿದ್ದಾರೆ.
Are you ready for some table tennis action again? Catch our resilient and talented paddlers in action on @ddsportschannel tomorrow, 26 August
Come on India, join in & #Cheer4India #Praise4Para@PMOIndia @ianuragthakur @NisithPramanik @ParalympicIndia @DeepaAthlete @PIB_India pic.twitter.com/GzghQ0N6HF
— SAI Media (@Media_SAI) August 25, 2021
ಇನ್ನೂ ಬುಧವಾರದ ಮತ್ತೊಂದು ಪಂದ್ಯದಲ್ಲಿ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಸೋನಾಲ್ಬೆನ್ ಪಟೇಲ್ ವಿಶ್ವದ 4ನೇ ಶ್ರೇಯಾಂಕದಲ್ಲಿರುವ ಕಿಯಾನ್ ಲಿ ಅವರ ವಿರುದ್ಧ ನಿರಾಶೆ ಅನುಭವಿಸಿದ್ದರು. 3-2 ಸೆಟ್ಗಳ ಅಂತರದಿಂದ ಪಟೇಲ್ ಸೋತಿದ್ದು, ಎರಡನೇ ಗುಂಪಿನ ಡಿ ಪಂದ್ಯದಲ್ಲಿ ಗುರುವಾರ ದಕ್ಷಿಣ ಕೊರಿಯಾದ ಮಿ ಗಿಯು ಲೀ ವಿರುದ್ಧ ಸೆಣಸಲಿದ್ದಾರೆ.
ಟೋಕಿಯೊ ಕ್ರೀಡಾಕೂಟದಲ್ಲಿ ಭಾರಗತೀಯ ಸ್ಪರ್ಧಿಗಳು ಹಲವು ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ಯಾನೋಯಿಂಗ್, ಶೂಟಿಂಗ್, ಈಜು, ಪವರ್ ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೋ ಸೇರಿದಂತೆ ಒಂಬತ್ತು ಕ್ರೀಡೆಗಳಲ್ಲಿ ದೇಶದ 54 ಆಟಗಾರರು ಭಾಗವಹಿಸಲಿದ್ದಾರೆ.
India vs England: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ತಕ್ಷಣ ಜೇಮ್ಸ್ ಆ್ಯಂಡರ್ಸನ್ ಮಾಡಿದ್ದೇನು ನೋಡಿ
(Tokyo 2020 Paralympics Sonal Patel and Bhavina Patel Only Indians in Action on Day 2)
Published On - 9:02 am, Thu, 26 August 21