Tokyo Olympics: ಫೈನಲ್ ಪ್ರವೇಶಿಸಲು ಬಜರಂಗ್ ಪೂನಿಯಾ ವಿಫಲ: ಆದರೂ ಪದಕದ ಆಸೆ ಜೀವಂತ

| Updated By: Vinay Bhat

Updated on: Aug 06, 2021 | 3:22 PM

bajrang punia: ಈ ಮೊದಲು ನಡೆದ ಕ್ವಾರ್ಟರ್ ಫೈನಲ್​ನಲ್ಲಿ ಇರಾನಿನ ಮೊರ್ತೆಜಾ ಗಿಯಾಸಿ ಅವರನ್ನು ಬಜರಂಗ್ ಪೂನಿಯಾ 2-1ರ ಅಂತರದಿಂದ ಸೋಲಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟು ಪದಕದ ಭರವಸೆ ನೀಡಿದ್ದರು.

Tokyo Olympics: ಫೈನಲ್ ಪ್ರವೇಶಿಸಲು ಬಜರಂಗ್ ಪೂನಿಯಾ ವಿಫಲ: ಆದರೂ ಪದಕದ ಆಸೆ ಜೀವಂತ
bajrang punia
Follow us on

ಟೋಕಿಯೋ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಸೆಮಿ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದು ಫೈನಲ್​​ ಪ್ರವೇಶಿಸಲು ವಿಫಲರಾಗಿದ್ದಾರೆ. ಪುರುಷಯ 65 ಕೆ. ಜಿ. ಫ್ರೀಸ್ಟೈಲ್ ವಿಭಾಗದ ಸೆಮಿ ಫೈನಲ್​ ಪಂದ್ಯದಲ್ಲಿ ಬಜರಂಗ್ ಅವರು ಅಜೆರ್ಬೈಜಾನ್ ರಸ್ಲರ್ ಹಾಜಿ ಅಲಿಯೇವ್ ವಿರುದ್ಧ 5-12 ಅಂತರದಿಂದ ಸೋಲು ಕಂಡಿದ್ದಾರೆ. ಆದರೂ ಭಾರತದದ ಪದಕದ ಆಸೆ ಜೀವಂತವಾಗಿದೆ. ಕಂಚಿನ ಪದಕಕ್ಕಾಗಿ ಬಜರಂಗ್ ಮುಂದಿನ ಆಟ ಆಡಲಿದ್ದಾರೆ.

ಎದುರಾಳಿಯ ಆಕ್ರಮಣಕಾರಿ ಆಟದ ಎದುರು ಬಜರಂಗ್​ಗೆ ಕೇವಲ 5 ಅಂಕ ಸಂಪಾದಿಸಲಷ್ಟೇ ಶಕ್ತವಾಯಿತು. ಕಂಚಿಗಾಗಿ ಬಜರಂಗ್ ಹಾಗೂ ರಷ್ಯಾದ ಗಾಡ್ಜಿಮುರಾದ್ ರಶಿದೋವ್ ಶನಿವಾರ ಕಾದಾಟ ನಡೆಸಲಿದ್ದಾರೆ. ಈ ಮೊದಲು ಪ್ರೀ-ಕ್ವಾರ್ಟರ್ ಫೈನಲ್​ ಮುಖಾಮುಖಿಯಲ್ಲಿ ಬಜರಂಗ್, ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ವಿರುದ್ಧ ಮೇಲುಗೈ ಸಾಧಿಸಿದರು. ನಂತರ ನಡೆದ ಕ್ವಾರ್ಟರ್ ಫೈನಲ್​ನಲ್ಲಿ ಇರಾನಿನ ಮೊರ್ತೆಜಾ ಗಿಯಾಸಿ ಅವರನ್ನು 2-1ರ ಅಂತರದಿಂದ ಸೋಲಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟು ಪದಕದ ಭರವಸೆ ನೀಡಿದ್ದರು.

ಆದರೆ, ಸೆಮೀಸ್​ನಲ್ಲಿ ಹಾಜಿ ಅಲಿಯೇವ್ ವಿರುದ್ಧ ಗೆಲುವಿಗೆ ಕಠಿಣ ಹೋರಾಟ ನಡೆಸಿದರಾದೂ ಗೆಲ್ಲಲಾಗದೆ ಸೋಲು ಕಂಡಿದ್ದಾರೆ.

 

ಭಾರತದ ಪದಕ ಖಾತೆಯಲ್ಲಿ ಈವರೆಗೆ 2 ಬೆಳ್ಳಿ, 3 ಕಂಚಿನ ಪದಕಗಳಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಸಿಕ್ಕ ಬೆಳ್ಳಿ ಪದಕ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಗೆದ್ದ ಕಂಚು, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್ ಜಯಿಸಿದ ಕಂಚು, ಪುರುಷರ ಹಾಕಿಯಲ್ಲಿ ಭಾರತೀಯ ತಂಡ ಗೆದ್ದ ಕಂಚಿನ ಪದಕ ಮತ್ತು ರಸ್ಲಿಂಗ್‌ನಲ್ಲಿ ರವಿಕುಮಾರ್ ಗೆದ್ದ ಬೆಳ್ಳಿ ಪದಕಗಳು ಇದರಲ್ಲಿ ಸೇರಿವೆ.

Published On - 3:10 pm, Fri, 6 August 21