Tokyo Olympics: ಸೋತು ಕಣ್ಣೀರಿಟ್ಟರೂ ಭಾರತೀಯರ ಮನ ಗೆದ್ದ ಮಹಿಳಾ ಹಾಕಿ ತಂಡ: ಪ್ರಧಾನಿ ಮೋದಿಯಿಂದ ಶಹಬ್ಬಾಶ್ ಗಿರಿ
Indian Womens Hockey Team: ಕೊನೆಯ ನಿಮಿಷದ ವರೆಗೂ ಕೆಚ್ಚೆದೆಯ ಹೋರಾಟ ನಡೆಸಿದ ಭಾರತೀಯ ಮಹಿಳೆಯರು ಸೋತರೂ ಗೆದ್ದಷ್ಟೆ ಖುಷಿ ನೀಡಿದರು. ಪಂದ್ಯ ಮುಗಿದ ಬಳಿಕ ಗೆಲ್ಲಲು ಸಾಧ್ಯವಾಗಿಲ್ಲವಲ್ಲ ಎಂಬ ಕಣ್ಣೀರು ರಾಣಿ ಪಡೆಯಲ್ಲಿ ಮನೆ ಮಾಡಿತ್ತು.
ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬ್ರಿಟನ್ ವಿರುದ್ಧ ವೀರೋಚಿತ ಆಟವಾಡಿ ಭಾರತ ಮಹಿಳಾ ಹಾಕಿ ತಂಡ 4-3 ಗೋಲುಗಳಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಒಲಿಂಪಿಕ್ಸ್ ಹಾಕಿಯಲ್ಲಿ ಚೊಚ್ಚಲ ಪದಲ ಗೆಲ್ಲುವ ಕನಸು ಈಡೇರಲಿಲ್ಲ. ಆದರೆ, ಸೋತರೂ ಕೋಟ್ಯಾಂತರ ಭಾರತೀಯರ ಮನ ಗೆದ್ದಿದ ರಾಣಿ ರಾಂಪಾಲ್ ಪಡೆ. ಪಂದ್ಯ ಆರಂಭವಾದ ಮೊದಲ ಕ್ವಾರ್ಟರ್ನಲ್ಲಿ ಉಭಯ ತಂಡಗಳಿಗೆ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ, ಎರಡನೇ ಕ್ವಾರ್ಟರ್ನ ಆರಂಭದಲ್ಲಿ ಭಾರತೀಯರು ಮಾಡಿದ ತಪ್ಪಿನಿಂದ ಬ್ರಿಟನ್ ಖಾತೆ ತೆರೆಯಿತು. ಇದರ ಬೆನ್ನಲ್ಲೆ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಇದರ ನಡುವೆ ಬ್ರಿಟನ್ ಮತ್ತೊಂದು ಗೋಲು ದಾಖಲಿಸಿ 2-0 ಮುನ್ನಡೆ ಸಾಧಿಸಿತು.
0-2 ಮುನ್ನಡೆಯಲ್ಲಿದ್ದ ಬ್ರಿಟನ್ಗೆ ಎರಡನೇ ಕ್ವಾರ್ಟರ್ ಅಂತ್ಯದ ವೇಳೆಗೆ ಭಾರತ ಒಂದು ಕ್ಷಣ ಶಾಕ್ ನೀಡಿದ್ದು ಮಾತ್ರ ಸುಳ್ಳಲ್ಲ. ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ ಭಾರತ ಪೆನಾಲ್ಟಿ ಕಾರ್ನರ್ನಲ್ಲಿ ಗುರುಜಿತ್ ಕೌರ್ ಎರಡು ಬಾರಿ ಚೆಂಡನ್ನು ನೆಟ್ನೊಳಗೆ ಅಟ್ಟಿ ಸಮಬಲ ಸಾಧಿಸಿದರು. ಮತ್ತೊಮ್ಮೆ ವಂದನಾ ಅವರು ತಮ್ಮ ಚಾಣಕ್ಷತನದಿಂದ ಗೋಲು ದಾಖಲಿಸಿ 3-2 ರ ಮುನ್ನಡೆ ಸಾಧಿಸುವಂತೆ ಮಾಡಿದರು.
We narrowly missed a medal in Women’s Hockey but this team reflects the spirit of New India- where we give our best and scale new frontiers. More importantly, their success at #Tokyo2020 will motivate young daughters of India to take up Hockey and excel in it. Proud of this team.
— Narendra Modi (@narendramodi) August 6, 2021
ಕೊನೆಯ ನಿಮಿಷದ ವರೆಗೂ ಕೆಚ್ಚೆದೆಯ ಹೋರಾಟ ನಡೆಸಿದ ಭಾರತೀಯ ಮಹಿಳೆಯರು ಸೋತರೂ ಗೆದ್ದಷ್ಟೆ ಖುಷಿ ನೀಡಿದರು. ಪಂದ್ಯ ಮುಗಿದ ಬಳಿಕ ಗೆಲ್ಲಲು ಸಾಧ್ಯವಾಗಿಲ್ಲವಲ್ಲ ಎಂಬ ಕಣ್ಣೀರು ರಾಣಿ ಪಡೆಯಲ್ಲಿ ಮನೆ ಮಾಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಭಾರತ ಮಹಿಳಾ ಹಾಕಿ ತಂಡದ ಹೋರಾಟ ಕಂಡು ಶಹಬ್ಬಾಶ್ ಎಂದಿದ್ದಾರೆ.
They are crying I’m crying But you’d made this country so proud that we can’t even tell World’s Top 4th Team It’s our Women’s Team ??? Medal nahi aaya lekin छाती चौड़ा हो गया हमारा #womenhockeyindia #CheerForIndia ?#GBRvIND #IndiaKaGame #Tokyo2020 #TeamIndia #Hockey pic.twitter.com/fviIMCOi2e
— ?? Mukesh Kumar Singh ?? ???️हर हर महादेव? (@JaiHindNamo) August 6, 2021
ಭಾರತೀಯ ಮಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮೋದಿ, ಸ್ವಲ್ಪದರಲ್ಲೇ ನಾವು ಪದಕ ಗೆಲ್ಲುವ ಅವಕಾಶವನ್ನು ಮಿಸ್ ಮಾಡಿಕೊಂಡೆವು. ಆದರೆ ಮಹಿಳಾ ತಂಡದ ಈ ಪ್ರದರ್ಶನ ಹೊಸ ಭಾರತವನ್ನು ಪ್ರತಿಬಿಂಬಿಸುತ್ತಿದೆ. ಅದಕ್ಕಿಂತ ಮುಖ್ಯವಾಗಿ ಟೋಕಿಯೋ ಒಲಿಂಪಿಕ್ಸ್ ಮಹಿಳಾ ತಂಡದ ದಿಟ್ಟ ಪ್ರದರ್ಶನ, ದೇಶದ ಯುವ ಸಹೋದರಿಯರಿಗೆ ಸ್ಪೂರ್ತಿಯಾಗಲಿದೆ. ಈ ತಂಡದ ಪ್ರದರ್ಶನದ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Tokyo Olympics: ಒಲಿಂಪಿಕ್ಸ್ ಹಾಕಿ ಇತಿಹಾಸದಲ್ಲಿ ಚೊಚ್ಚಲ ಪದಕ ಗೆಲ್ಲುವ ಭಾರತೀಯ ಮಹಿಳೆಯರ ಕನಸು ಭಗ್ನ
Tokyo Olympics: ಸೆಮಿ ಫೈನಲ್ಗೆ ಲಗ್ಗೆಯಿಟ್ಟ ಭಜರಂಗ್ ಪುನಿಯ: ಪದಕದ ನಿರೀಕ್ಷೆಯಲ್ಲಿ ಭಾರತ
(Tokyo Olympics Indian Womens Hockey Team in Tears After Losing Bronze Medal PM Modi praises)