Tokyo Olympics: ಕೊನೆಯ 10 ಸೆಕೆಂಡುಗಳಲ್ಲಿ ಪಂದ್ಯ ಕೈಚೆಲ್ಲಿದ ಕುಸ್ತಿಪಟು ದೀಪಕ್ ಪೂನಿಯಾ; ಕಂಚಿನ ಪದಕದ ಪಂದ್ಯದಲ್ಲಿ ಸೋಲು

| Updated By: ಪೃಥ್ವಿಶಂಕರ

Updated on: Aug 05, 2021 | 5:25 PM

Tokyo Olympics: ಇಬ್ಬರ ನಡುವೆ ತೀವ್ರ ಪೈಪೋಟಿ ಇತ್ತು. ಪಂದ್ಯದುದ್ದಕ್ಕೂ ದೀಪಕ್ ತನ್ನ ಮುನ್ನಡೆಯನ್ನು ಕಾಯ್ದುಕೊಂಡರು ಆದರೆ ಕೊನೆಯ 10 ಸೆಕೆಂಡುಗಳಲ್ಲಿ ಪಂದ್ಯವನ್ನು ಕಳೆದುಕೊಂಡರು.

Tokyo Olympics: ಕೊನೆಯ 10 ಸೆಕೆಂಡುಗಳಲ್ಲಿ ಪಂದ್ಯ ಕೈಚೆಲ್ಲಿದ ಕುಸ್ತಿಪಟು ದೀಪಕ್ ಪೂನಿಯಾ; ಕಂಚಿನ ಪದಕದ ಪಂದ್ಯದಲ್ಲಿ ಸೋಲು
ದೀಪಕ್ ಪೂನಿಯಾ
Follow us on

ಟೋಕಿಯೊ ಒಲಿಂಪಿಕ್ಸ್‌ನ ಕುಸ್ತಿ ಅಖಾಡದಲ್ಲಿ ರವಿ ದಹಿಯಾ ಬೆಳ್ಳಿ ಗೆದ್ದ ನಂತರ ಭಾರತದ ದೀಪಕ್ ಪುನಿಯಾ ಪುರುಷರ 86 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೋಲನುಭವಿಸದರು. ಸ್ಯಾನ್ ಮರಿನೋದ 24 ವರ್ಷದ ಕುಸ್ತಿಪಟು ಮೈಲ್ಸ್ ಅಮಿನ್ ದೀಪಕ್​ ಅವರನ್ನು ಸೋಲಿಸಿದರು. ಇಬ್ಬರ ನಡುವೆ ತೀವ್ರ ಪೈಪೋಟಿ ಇತ್ತು. ಪಂದ್ಯದುದ್ದಕ್ಕೂ ದೀಪಕ್ ತನ್ನ ಮುನ್ನಡೆಯನ್ನು ಕಾಯ್ದುಕೊಂಡರು ಆದರೆ ಕೊನೆಯ 10 ಸೆಕೆಂಡುಗಳಲ್ಲಿ ಪಂದ್ಯವನ್ನು ಕಳೆದುಕೊಂಡರು. ಕಂಚಿನ ಪದಕದ ಹೋರಾಟದಲ್ಲಿ ದೀಪಕ್ ಪೂನಿಯಾ ಅವರನ್ನು ಸೋಲಿಸಿದ ಸ್ಯಾನ್ ಮರಿನೋ ಕುಸ್ತಿಪಟು ಮೊದಲ ಬಾರಿಗೆ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

ದೀಪಕ್ ಪೂನಿಯಾ ನೇರವಾಗಿ ಕಂಚಿನ ಪದಕ ಪಂದ್ಯಕ್ಕೆ ಪ್ರವೇಶಿಸಿದರು. ಇದಕ್ಕಾಗಿ ಅವರು ರಿಪೀಚೇಜ್ ಸುತ್ತನ್ನು ಆಡಬೇಕಾಗಿರಲಿಲ್ಲ. ಏಕೆಂದರೆ ಅವರು ಸೆಮಿಫೈನಲ್‌ನಲ್ಲಿ ತಮ್ಮ ವಿಭಾಗದಲ್ಲಿ ಸೋತಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ದೀಪಕ್ ಅವರನ್ನು ಅಮೆರಿಕದ ಟೇಲರ್ ಲೀ 10-0 ಅಂತರದಿಂದ ಸೋಲಿಸಿದರು. ಮೊದಲು ಕ್ವಾರ್ಟರ್ ಫೈನಲ್‌ನಲ್ಲಿ ದೀಪಕ್ ಚೀನಾದ ಲಿನ್ ಅವರನ್ನು 6-3 ಅಂತರದಿಂದ ಸೋಲಿಸಿದ್ದರು. ಆದರೆ ಅವರು ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವನ್ನು ನೈಜೀರಿಯಾದ ಕುಸ್ತಿಪಟು ವಿರುದ್ಧ 12-1 ಅಂತರದಲ್ಲಿ ಗೆದ್ದರು.

ದೀಪಕ್ ಪೂನಿಯಾ ಪಂದ್ಯದ ಕೊನೆಯಲ್ಲಿ ಸೋತರು
ಕಂಚಿನ ಪದಕದ ಪಂದ್ಯದಲ್ಲಿ ಭಾರತದ ದೀಪಕ್ ಪುನಿಯಾ ಮೊದಲ ಸುತ್ತಿನಲ್ಲಿ 2-1 ಮುನ್ನಡೆ ಸಾಧಿಸಿದರು. ಅವರು ಎರಡನೇ ಸುತ್ತಿನಲ್ಲೂ ಈ ಮುನ್ನಡೆಯನ್ನು ಕಾಯ್ದುಕೊಂಡರು. ಆದರೆ, ಕೊನೆಯದಾಗಿ 10 ಸೆಕೆಂಡುಗಳು ಉಳಿದಿರುವಾಗ, ಸ್ಯಾನ್ ಮರಿನೋನ ಕುಸ್ತಿಪಟು ಆಡಿದ ಆಟದಿಂದ ದೀಪಕ್ ಸೋಲಬೇಕಾಯ್ತು. ಇದರ ಫಲಿತಾಂಶವೇನೆಂದರೆ ಇಡೀ ಪಂದ್ಯವನ್ನು ಗೆಲ್ಲುತ್ತಿದ್ದ ದೀಪಕ್ ಪೂನಿಯಾ ಕೊನೆಯ ಸಮಯದಲ್ಲಿ ಸೋತರು.

ಸಣ್ಣ ದೇಶದ ದೊಡ್ಡ ಸಾಧನೆ
ಸ್ಯಾನ್ ಮರಿನೋ ಒಂದು ಸಣ್ಣ ದೇಶವಾಗಿದ್ದು, ಮೈಲ್ಸ್ ಅಮಿನ್, ದೀಪಕ್ ಪೂನಿಯಾ ಅವರನ್ನು ಸೋಲಿಸಿದ ಆ ದೇಶದ ಕುಸ್ತಿಪಟು ಆಗಿದ್ದಾರೆ. ಈ ದೇಶದ ಜನಸಂಖ್ಯೆ 34000, ಅಂದರೆ, ಭಾರತದ ಒಂದು ಪಟ್ಟಣದ ಜನಸಂಖ್ಯೆ ಇದಕ್ಕಿಂತ ಹೆಚ್ಚಾಗಿದೆ. ಆದರೆ ಈ ದೇಶದ 5 ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಪದಕಗಳನ್ನು ಖಚಿತಪಡಿಸಿದರು. ಹೌದು, ಸ್ಯಾನ್ ಮರಿನೋದಿಂದ 5 ಕ್ರೀಡಾಪಟುಗಳು ಒಟ್ಟಾಗಿ ಟೋಕಿಯೊದಲ್ಲಿ 3 ಪದಕಗಳನ್ನು ಗೆದ್ದಿದ್ದಾರೆ. ಮತ್ತೊಂದೆಡೆ, ಭಾರತದ 127 ಕ್ರೀಡಾಪಟುಗಳು ಕೇವಲ 5 ರಲ್ಲಿ ಮಾತ್ರ ಗೆದ್ದಿದ್ದಾರೆ.

Published On - 5:10 pm, Thu, 5 August 21