ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ಲಸಿಕೆ ಹಾಕಲು ವಿಳಂಬ; ಕ್ರೀಡಾಪಟು ವಿನೇಶ್ ಫೋಗಟ್​ ಅಸಮಾಧಾನ

| Updated By: guruganesh bhat

Updated on: Apr 25, 2021 | 10:15 PM

ಕ್ರೀಡಾಪಟುಗಳಿಗೆ ಕೊವಿಡ್​ 19 ಲಸಿಕೆ ನೀಡಲು ವಿಳಂಬವಾಗಿದ್ದರಿಂದ ಒಲಂಪಿಕ್​ ಬಂಡ್​ ಕುಸ್ತಿಪಟು ವಿನೇಶ್​ ಫೋಗಾಟ್​ ನಿರಾಶೆ ವ್ಯಕ್ತಪಡಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ಲಸಿಕೆ ಹಾಕಲು ವಿಳಂಬ; ಕ್ರೀಡಾಪಟು ವಿನೇಶ್ ಫೋಗಟ್​ ಅಸಮಾಧಾನ
ವಿನೇಶ್ ಫೋಗಟ್
Follow us on

ಕ್ರೀಡಾಪಟುಗಳಿಗೆ ಕೊವಿಡ್​ 19 ಲಸಿಕೆ ನೀಡಲು ವಿಳಂಬವಾಗಿದ್ದರಿಂದ ಒಲಂಪಿಕ್​ ಬೌಂಡ್​​ ಕುಸ್ತಿಪಟು ವಿನೇಶ್​ ಫೋಗಟ್​ ನಿರಾಶೆ ವ್ಯಕ್ತಪಡಿಸಿದ್ದಾರೆ. ನಾವು ವ್ರೆಸ್ಲಿಂಗ್​​ ಫೆಡರೇಶನ್​ ಆಪ್ ಇಂಡಿಯಾಗೆ (WFI) ಕರೆ ಮಾಡಲು ಕಾಯುತ್ತಿದ್ದೇವೆ. ಅದರೆ ಏನೂ ಪ್ರಯೋಜನವಾಗಿಲ್ಲ. ಈ ಹಂತದಲ್ಲಿ ಲಸಿಕೆ ತೆಗೆದುಕೊಳ್ಳುವುದರಿಂದ ಅನುಕೂಲವಿದೆ. ಏಕೆಂದರೆ ಇದು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಿನೇಶ್​ ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರ 53 ಕೆಜಿ ಫ್ರೀಸ್ಟೈಲ್​ ಸ್ಪರ್ಧೆಯಲ್ಲಿ ಅರ್ಹತೆ ಪಡೆದ ವಿನೇಶ್​, ಟೋಕಿಯೊ ಒಲಂಪಿಕ್ಸ್​ಗೆ ಹತ್ತಿರದಲ್ಲಿ ಲಸಿಕೆಗಳನ್ನು ಹೊಂದಿರುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಲಸಿಕೆ ಪಡೆ ತಕ್ಷಣ ಜ್ವರ ಅಥವಾ ತೋಳಿನಲ್ಲಿ ನೋವು ಕಾಣಿಸಿಕೊಳ್ಳಬಹುದು. ಔಷಧದ ಅಡ್ಡ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಒಲಂಪಿಕ್​ ಬೌಂಡ್​ ಕ್ರೀಡಾಪಟುಗಳಿಗೆ ಇದೀಗ ಲಸಿಕೆಗಳನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ. ಶುಕ್ರವಾರ ಮಾಧ್ಯಗಳೊಂದಿಗೆ ಆನ್​ಲೈನ್​ ಸಂವಾದದ ಸಮಯದಲ್ಲಿ ಲಸಿಕೆಗಳನ್ನು ಪಡೆಯಲು ತನ್ನ ಸಂಪರ್ಕಗಳನ್ನು ಬಳಸಿಕೊಂಡು ವಿವಾದದ ಕೇಂದ್ರವಾಗಲು ನಾನು ಬಯಸುವುದಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ವಿಶ್ವ ಚಾಂಪಿಯನ್​ಶಿಪ್​ನ ಕಂಚಿನ ಪದಕ ವಿಜೇತ ಮತ್ತು ಒಲಂಪಿಕ್​ ಬೌಂಡ್​ ಕುಸ್ತಿಪಟು ಭಜರಂಗ್​ ಪುನಿಯಾದ ಪುರುಷರ 65 ಕೆಜಿ ಫ್ರೀಸ್ಟೈಲ್​ ಸ್ಪರ್ಧೆಯಲ್ಲಿ ಅರ್ಹತೆ ಪಡೆದಿದ್ದಾರೆ.

ಮಹಿಳಾ ಗುಂಪಿನಲ್ಲಿ ಮೂವರು ಸೇರಿದಂತೆ ಆರು ಕುಸ್ತಿಪಟುಗಳು ಟೋಕಿಯೊ ಒಲಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ. ಮೇ 6ರಿಂದ 9ರವರೆಗೆ ಸೋಫಿಯಾದಲ್ಲಿ ಟೋಕಿಯೊ ಒಲಂಪಿಕ್ಸ್​ ಕೊನೆಯ ಅರ್ಹತಾ ಪಂದ್ಯಾವಳಿ ನಡೆಯಲಿದೆ.

ಇದನ್ನೂ ಓದಿ: ಕೈವ್​ನಲ್ಲಿ ನಡೆದ ರೆಸ್ಲಿಂಗ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ವಿನೇಶ್ ಪೋಗಟ್