ಬೌಂಡರಿ ಲೈನ್ ಅಂಚಿನಲ್ಲಿ.. ಆಲ್ ರೌಂಡ್ ಚುರುಮುರಿ ಸುದ್ದಿಗಳು
ಮತ್ತೊಬ್ಬ ಮಲಿಂಗಾ ಎಂಟ್ರಿ:
ಶ್ರೀಲಂಕಾ ನೆಲದಲ್ಲಿ ಮತ್ತೊಬ್ಬ ಮಲಿಂಗಾನ ಎಂಟ್ರಿಯಾಗಿದೆ.. ಮತಿಶ್ ಪತಿರಾನಾ ಎಂಬ 17 ವರ್ಷದ ಯುವ ಆಟಗಾರ ಥೇಟ್ ಲಸಿತ್ ಮಲಿಂಗಾ ಶೈಲಿಯಲ್ಲೇ ಬೌಲಿಂಗ್ ಮಾಡಿ ಮೈದಾನದಲ್ಲಿ ಹೆಸರು ಮಾಡ್ತಿದ್ದಾನೆ.. ಅಖಾಡಕ್ಕಿಳಿದ ಮೊದಲ ಪಂದ್ಯದಲ್ಲೇ 6 ವಿಕೆಟ್ ಪಡೆದ ಮತಿಶ್ ಬೌಲಿಂಗ್ ಆಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
Trinity College Kandy produces another Slinga !!
17 Year old Matheesha Pathirana took 6 wickets for 7 Runs on his debut game for Trinity !! #lka pic.twitter.com/q5hrI0Gl68
— Nibraz Ramzan (@nibraz88cricket) September 26, 2019
ದಾದಾಗೆ ಮತ್ತೆ ಅಧ್ಯಕ್ಷ ಪಟ್ಟ:
ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.. ಸಿಎಬಿ ಚುನಾವಣೆಯಲ್ಲಿ ದಾದಾಗೆ ಪ್ರತಿಸ್ಪರ್ಧಿ ಇಲ್ಲದ ಕಾರಣ ದಾದಾ ಅವರ ಐವರು ಬೆಂಬಲಿಗರು ಮತ್ತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2020ರ ಜುಲೈ ತನಕ ಗಂಗೂಲಿ ಬೆಂಗಾಲ್ ಕ್ರಿಕೆಟ್ಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಬಿಗ್ ಬ್ಯಾಷ್ ಲೀಗ್ ಆಡ್ತಿಲ್ಲ:
ಭಾರತ ಮಹಿಳಾ ತಂಡದ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ಜೆಮಿಮಾ ರೊಡ್ರಿಗಸ್ ಈ ಬಾರಿಯ ಬಿಗ್ಬ್ಯಾಷ್ ಲೀಗ್ನಲ್ಲಿ ಪಾಲ್ಗೊಳ್ಳುತ್ತಿಲ್ಲ.. ದಕ್ಷಿಣ ಆಫ್ರಿಕಾ ಸರಣಿ ಜೊತೆಗೆ ಆಸ್ಟ್ರೇಲಿಯಾ ಸರಣಿ ಈ ವರ್ಷಾಂತ್ಯದಲ್ಲೇ ನಡೆಯಲಿದೆ. ಹೀಗಾಗಿ ಅಕ್ಟೋಬರ್ 18ರಿಂದ ಡಿಸೆಂಬರ್ 8ರ ತನಕ ನಡೆಯಲಿರುವ ಮಹಿಳಾ ಬಿಗ್ಬ್ಯಾಷ್ ಲೀಗ್ನಲ್ಲಿ ಮೂವರು ಭಾಗವಹಿಸುತ್ತಿಲ್ಲ.
Published On - 1:31 pm, Sat, 28 September 19