ಸಚಿನ್ ತೆಂಡೂಲ್ಕರ್ ಜಗತ್ತಿಲ್ಲಿ ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸುಮಾರು ಎರಡುವರೆ ದಶಕಗಳ ಕಾಲ ಕ್ರಿಕೆಟ್ ಎಂಬ ಮೂರಕ್ಷರವನ್ನು ಆಳಿದ ‘ಗ್ರೇಟ್ ಬ್ಯಾಟ್ಸ್ ಮ್ಯಾನ್’. ಕ್ರಿಕೆಟ್ ದೇವರು, ಶತಕಗಳ ಶತಕದ ಸರದಾರ ಎಂದು ಕರೆಸಿಕೊಳ್ಳುವ ಯುಗ ಪುರುಷ ತಮ್ಮ ಜೀವನದ ರೋಚಕ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ.
ಇನ್ನಿಂಗ್ಸ್ ಆರಂಭಿಸಲು ಭಿಕ್ಷೆ ಬೇಡಬೇಕಾಯಿತು:
“ನಾನು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಲು ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಬಳಿ ಬೇಡಿಕೊಂಡಿದ್ದೆ, ಆಗ ಎಲ್ಲಾ ತಂಡಗಳು ಬಳಸಿದ ತಂತ್ರವೆಂದರೆ ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನ, ಅಂತಹ ಪಂದ್ಯದಲ್ಲಿ ನಾನು 49 ಎಸೆತಗಳಲ್ಲಿ 82 ರನ್ ಗಳಿಸಿದ್ದೇನೆ.
ಒಂದು ವೇಳೆ ನಾನು ವಿಫಲನಾಗಿದ್ರೆ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯುತ್ತಿರಲಿಲ್ಲ. ಆದರೆ ವಿಫಲತೆಗೆ ಯಾವುದೇ ಭಯಪಡಬಾರದು”
– ಸಚಿನ್ ತೆಂಡೂಲ್ಕರ್
ಲಿಂಕ್ಡ್‌ಇನ್‌ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡ ಸಚಿನ್, ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಕಾರಣವಾದ ಕ್ಷಣಗಳನ್ನು ನೆನಪಿಸಿಕೊಂಡರು.
ಈ ರೀತಿ ಕ್ರಿಕೆಟ್ ದಿಗ್ಗಜ ಸಚಿನ್ ತಮ್ಮ ನಿವೃತ್ತಿಯವರೆಗೂ ಒಬ್ಬ ಓಪನ್ ಬ್ಯಾಟ್ಸ್ ಮ್ಯಾನ್ ಆಗಿ ಹೊರಹೊಮ್ಮಲು ಸಾಧ್ಯವಾಯಿತು. ಆ ಕ್ರಮವನ್ನು ಉದಾಹರಣೆಯಾಗಿ ಬಳಸಿಕೊಂಡು, ಸಮೃದ್ಧ ಮಾಜಿ ಬ್ಯಾಟ್ಸ್‌ಮನ್ ವೈಫಲ್ಯದ ಭೀತಿಯಿಂದಾಗಿ ಅಪಾಯಗಳನ್ನು ತೆಗೆದುಕೊಳ್ಳುವುದರಿಂದ ಎಂದಿಗೂ ಹಿಂಜರಿಯಬಾರದು ಎಂದು ತಮ್ಮ ಅಭಿಮಾನಿಗಳಿಗೂ ತಿಳಿಸಿದ್ದಾರೆ.
Published On - 11:35 am, Fri, 27 September 19