ಸಾನಿಯಾ ಮಿರ್ಜಾ ಸೋದರಿ ಆನಂ ಮದುವೆಯಾಗುತ್ತಿರುವುದು ಇದೇ ಕ್ರಿಕೆಟ್ ಆಟಗಾರನನ್ನು!

|

Updated on: Oct 08, 2019 | 11:11 AM

ಆನಂ ಮಿರ್ಜಾ –ಸಾನಿಯಾ ಮಿರ್ಜಾರ ಖಾಸಾ ಸಹೋದರಿ. ಭಾರತೀಯ ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್​ರನ್ನು ಮದುವೆಯಾಗಿ ಒಂದು ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಇದೀಗ ಮಿರ್ಜಾ ಕುಟುಂಬದಲ್ಲಿ ಮತ್ತೊಂದು ಸಂತಸದ ಹೊನಲು ಹರಿದಿದೆ. ಸಾನಿಯಾ ತಂಗಿ ಆನಂ, ಇದೇ ವರ್ಷಾಂತ್ಯ ಮದುವೆಯಾಗಲಿದ್ದಾರೆ. ಹೌದು, ಆನಂ ಮದುವೆ ಆಗುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಅವರ ಹಿರಿಯ ಪುತ್ರ ಆಸಾದುದ್ದೀನ್ ಅವ್ರನ್ನ. ಇನ್ನು, ಮೊಹಮೊದ್ ಅಸಾದುದ್ದೀನ್ ಮಸೂದಿ […]

ಸಾನಿಯಾ ಮಿರ್ಜಾ ಸೋದರಿ ಆನಂ ಮದುವೆಯಾಗುತ್ತಿರುವುದು ಇದೇ ಕ್ರಿಕೆಟ್ ಆಟಗಾರನನ್ನು!
Follow us on

ಆನಂ ಮಿರ್ಜಾ –ಸಾನಿಯಾ ಮಿರ್ಜಾರ ಖಾಸಾ ಸಹೋದರಿ. ಭಾರತೀಯ ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್​ರನ್ನು ಮದುವೆಯಾಗಿ ಒಂದು ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಇದೀಗ ಮಿರ್ಜಾ ಕುಟುಂಬದಲ್ಲಿ ಮತ್ತೊಂದು ಸಂತಸದ ಹೊನಲು ಹರಿದಿದೆ.
ಸಾನಿಯಾ ತಂಗಿ ಆನಂ, ಇದೇ ವರ್ಷಾಂತ್ಯ ಮದುವೆಯಾಗಲಿದ್ದಾರೆ. ಹೌದು, ಆನಂ ಮದುವೆ ಆಗುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಅವರ ಹಿರಿಯ ಪುತ್ರ ಆಸಾದುದ್ದೀನ್ ಅವ್ರನ್ನ. ಇನ್ನು, ಮೊಹಮೊದ್ ಅಸಾದುದ್ದೀನ್ ಮಸೂದಿ ಅವರು ಅಜರುದ್ದೀನ್ ಮತ್ತು ಅವರ ಮೊದಲ ಪತ್ನಿ ನೌರಿನ್​ರ ಇಬ್ಬರು ಪುತ್ರರಲ್ಲಿ ಒಬ್ಬರು. ಮತ್ತೊಬ್ಬ ಪುತ್ರ ಅಜಾದುದ್ದೀನ್ ನಡುರಾತ್ರಿ ನಡೆದ ಭೀಕರ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.

ಅಸಾದುದ್ದೀನ್ ಸಹ ಕ್ರಿಕೆಟರ್ ಆಗಿದ್ದು, ಗೋವಾ ಪರ ಆಡ್ತಾರೆ. ಅಲ್ಲಿಗೆ ಅಪ್ಪಟ ಕ್ರೀಡಾ ಮನೆತನದ ಮಿರ್ಜಾ ಕುಟುಂಬದ ಇಬ್ಬರೂ ಅಳಿಯಂದಿರು ಕ್ರಿಕೆಟ್ ಆಟಗಾರರೇ ಆಗಿದ್ದಾರೆ. ಆನಂ ಮಿರ್ಜಾ ಯಾವುದೇ ಕ್ರೀಡಾಪಟು ಅಲ್ಲವಾದರೂ ಹವ್ಯಾಸಿ ಪತ್ರಕರ್ತೆಯಾಗಿದ್ದಾರೆ.

Published On - 9:30 pm, Mon, 7 October 19