ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯಕ್ಕಂತೂ ಫುಲ್ ಖುಷಿ ಮೂಡ್ನಲ್ಲಿದ್ದಾರೆ. ಪುಟ್ಟ ಮಗಳೇ ಇದಕ್ಕೆ ಕಾರಣ ಎಂಬುದಂತೂ ಸತ್ಯ.
ಇದೀಗ ವಿರಾಟ್ ಕೊಹ್ಲಿ ಮಗು ಹುಟ್ಟಿದ ಬೆನ್ನಲ್ಲೇ ತಮ್ಮ ಟ್ವಿಟರ್ ಬಯೋವನ್ನು ಬದಲು ಮಾಡಿಕೊಂಡಿದ್ದಾರೆ. A proud husband and father (ನಾನೊಬ್ಬ ಹೆಮ್ಮೆಯ ಪತಿ ಮತ್ತು ಅಪ್ಪ) ಎಂದು ಬರೆದುಕೊಂಡು, ಹಾರ್ಟ್ ಸಿಂಬಲ್ ಹಾಕಿದ್ದಾರೆ.
ಅನುಷ್ಕಾ ಹೆರಿಗೆ ನಿಮಿತ್ತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ, ತಮಗೆ ಮಗಳು ಹುಟ್ಟಿದ ವಿಷಯವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು. ನಮ್ಮ ಜೀವನದ ಹೊಸ ಅಧ್ಯಾಯ ಇಂದಿನಿಂದ ಶುರುವಾಯಿತು ಎಂದು ಹೇಳಿಕೊಂಡಿದ್ದರು.
ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಮಗಳು ಹುಟ್ಟಿದ ಬೆನ್ನಲ್ಲೇ ತಮ್ಮ ಟ್ವಿಟರ್ ಬಯೋವನ್ನು ಚೇಂಜ್ ಮಾಡಿಕೊಂಡು, ತಾನೊಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂಬುದನ್ನು ತೋರಿಸಿದ್ದಾರೆ.
Published On - 11:03 am, Mon, 18 January 21