ಮಾಜಿ ಕ್ರಿಕೆಟ್ ಆಟಗಾರ್ತಿ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ; ಕೊಂಡಾಡಿದ ಶಿವಲಾಲ್​ ಯಾದವ್​ ಸಹೋದರಿ

|

Updated on: May 20, 2021 | 12:16 PM

Virat Kohli donates: ತಾರಾ ದಂಪತಿಯಾದ ವಿರಾಟ್​ ಕೊಹ್ಲಿ - ಅನುಷ್ಕಾ ಅವರು ಈ ಆಂದೋಲನದ ಮುಖಾಂತರ ಅಂದಾಜು 11 ಕೋಟಿ ರೂಪಾಯಿಗೂ ಹೆಚ್ಚು ಧನ ಸಂಗ್ರಹಿಸಿದರು. ಕೋವಿಡ್​ ಸೋಂಕಿತರಿಗೆ ನೆರವಾಗಲೆಂದು ಖುದ್ದಾಗಿ ವಿರಾಟ್​ ಕೊಹ್ಲಿ ದಂಪತಿ ಸಹ ಕೋಟಿ ರೂ ದೇಣಿಗೆ ನೀಡಿದ್ದಾರೆ.

ಮಾಜಿ ಕ್ರಿಕೆಟ್ ಆಟಗಾರ್ತಿ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ; ಕೊಂಡಾಡಿದ ಶಿವಲಾಲ್​ ಯಾದವ್​ ಸಹೋದರಿ
ವಿರಾಟ್​ ಕೊಹ್ಲಿ
Follow us on

ಶ್ರಾವಂತಿ ನಾಯ್ಡು ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ. ಅವರ ತಾಯಿ ಇತ್ತೀಚೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಅದೇ ವೇಳೆಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಅವರು ಮುಂದೂಡಲ್ಪಟ್ಟಿರುವ IPL 2021 ಟೂರ್ನಿಯಿಂದಾಗ ಮನೆ ಸೇರಿಕೊಂಡರು. ಸರಿಯಾಗಿ ಆ ವೇಳೆಯಲ್ಲೇ ಅವರ ತಾರಾ ಪತ್ನಿ ಅನುಷ್ಕಾ ಶರ್ಮಾ ಅವರು ಕೊವೀಡ್​ ಸೋಂಕಿತರಿಗೆ ನೆರವಾಗಬೇಕೆಂದು ತಮ್ಮ ನಿಧಿ ಸಂಗ್ರಹ ಕಾರ್ಯಕ್ಕೆ ಮುಂದಾದರು. ತಾರಾ ದಂಪತಿಯಾದ ವಿರಾಟ್​ ಕೊಹ್ಲಿ – ಅನುಷ್ಕಾ ಅವರು ಈ ಆಂದೋಲನದ ಮುಖಾಂತರ ಅಂದಾಜು 11 ಕೋಟಿ ರೂಪಾಯಿಗೂ ಹೆಚ್ಚು ಧನ ಸಂಗ್ರಹಿಸಿದರು. ಕೋವಿಡ್​ ಸೋಂಕಿತರಿಗೆ ನೆರವಾಗಲೆಂದು ಖುದ್ದಾಗಿ ವಿರಾಟ್​ ಕೊಹ್ಲಿ ದಂಪತಿ ಸಹ ಕೋಟಿ ರೂ ದೇಣಿಗೆ ನೀಡಿದ್ದಾರೆ.

ಈ ಮಧ್ಯೆ ನಿನ್ನೆ ಬುಧವಾರ ಕ್ಯಾಪ್ಟನ್ ವಿರಾಟ್​ ಕೊಹ್ಲಿ ತಮ್ಮ ಸಹೋದ್ಯೋಗಿ ಆಟಗಾರ್ತಿಗೆ ಆರ್ಥಿಕ ನೆರವು ನೀಡಿ, ಸತ್ಕಾರ್ಯ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್​ ಚಿಕಿತ್ಸೆ ಪಡೆಯುತ್ತಿರುವ ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ಅವರ ತಾಯಿ ಎಸ್​ ಕೆ ಸುಮನ್​ ಅವರ ಚಿಕಿತ್ಸೆಗೆಂದು ₹6.77 ಲಕ್ಷ ಆರ್ಥಿಕ ದೇಣಿಗೆ ನೀಡಿದ್ದಾರೆ.

ಮಾಜಿ ಸ್ಪಿನ್​ ಬೌಲರ್​ ಶಿವಲಾಲ್​ ಯಾದವ್​ ಅವರ ಸಹೋದರಿ, ಬಿಸಿಸಿಐ ದಕ್ಷಿಣ ವಲಯ ಸಂಯೋಜಕಿ ಎನ್​ ವಿದ್ಯಾ ಯಾದವ್​ ಅವರು ಶ್ರಾವಂತಿ ನಾಯ್ಡು ಅವರ ತಾಯಿಗೆ ಆರ್ಥಕ ನೆರವಿನ ಅಗತ್ಯವಿದೆ ಎಂದು ಟ್ವಿಟ್ಟರ್​ನಲ್ಲಿ ಗಮನ ಸೆಳೆದಿದ್ದರು. ಮತ್ತು ಆಟ ಟ್ವೀಟ್​ ಅನ್ನು ವಿರಾಟ್​ ಕೊಹ್ಲಿಗೆ ಟ್ಯಾಗ್​ ಮಾಡಿದ್ದರು. ಸುಮನ್​ ಅವರ ಕೋವಿಡ್ ಚಿಕಿತ್ಸೆಗೆಂದು ಅದಾಗಲೇ 16 ಲಕ್ಷ ರೂಪಾಯಿ ಖರ್ಚು ಮಡಲಾಗಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದರು. ಇದನ್ನು ಕಂಡು ಕರಗಿದ ವಿರಾಟ್​ ಕೊಹ್ಲಿ ದಂಪತಿ ತಕ್ಷಣ ಶ್ರಾವಂತಿ ನಾಯ್ಡು ಅವರತ್ತ ನೆರವಿನಹಸ್ತ ಚಾಚಿದ್ದಾರೆ. ಈ ಸಕಾಲಿಕ, ಅಮೂಲ್ಯ ನೆರವನ್ನು ಕಂಡು ವಿರಾಟ್​ ಕೊಹ್ಲಿ ದಂಪತಿಯನ್ನು ವಿದ್ಯಾ ಯಾದವ್​ ಕೊಂಡಾಡಿದ್ದಾರೆ.

(Virat Kohli donates rs 6.77 lakh for covid 19 treatment of former women cricketer Sravanthi Naidu mother SK Suman)