ಸಾಲುಮರದ ತಿಮ್ಮಕ್ಕರನ್ನು ನೋಡಿ ಕಲೀರಿ -ಪಟಾಕಿ ಹೊಡಿಬೇಡಿ ಅಂದಿದ್ದಕ್ಕೆ ಕೊಹ್ಲಿ​ಗೆ ಫುಲ್​​ ಟ್ರೋಲ್!

|

Updated on: Nov 15, 2020 | 7:10 PM

ಮುಂಬೈ: ಐಪಿಎಲ್​ನ 13ನೇ ಆವೃತ್ತಿಯನ್ನು ಮುಗಿಸಿ ಸೀದಾ ಆಸ್ಟ್ರೇಲಿಯಾದಲ್ಲಿ ಸರಣಿ ಕ್ರಿಕೆಟ್ ಆಡಲು ತೆರಳಿರುವ ಟೀಂ ಇಂಡಿಯಾದ ಆಟಗಾರರು ಸದ್ಯ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಸುಮಾರು 2 ತಿಂಗಳ ಕಾಲ ಆಸ್ಟ್ರೇಲಿಯಾದಲ್ಲೇ ಇರಲಿರುವ ಟೀಂ ಇಂಡಿಯಾ ಈ ಬಾರಿ ಎದುರಾಳಿ ತಂಡಗಳ ವಿರುದ್ಧ ಮಿಂಚುವ ತವಕದಲ್ಲಿದ್ದಾರೆ. ಈ ನಡುವೆ, ದೀಪಾವಳಿ ಸಂದರ್ಭದಲ್ಲಿ ತಾಯ್ನಾಡಿನಿಂದ ದೂರವಿರುವ ಆಟಗಾರರಿಗೆ ಈ ಬಾರಿ ಹಬ್ಬವನ್ನು ಕ್ವಾರಂಟೈನ್​ನಲ್ಲೇ ಆಚರಿಸಬೇಕಾಗಿದೆ. ಹಾಗಾಗಿ, ಹಬ್ಬದ ಪ್ರಯುಕ್ತ ಆಸ್ಟ್ರೇಲಿಯಾದಿಂದ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ […]

ಸಾಲುಮರದ ತಿಮ್ಮಕ್ಕರನ್ನು ನೋಡಿ ಕಲೀರಿ -ಪಟಾಕಿ ಹೊಡಿಬೇಡಿ ಅಂದಿದ್ದಕ್ಕೆ ಕೊಹ್ಲಿ​ಗೆ ಫುಲ್​​ ಟ್ರೋಲ್!
Follow us on

ಮುಂಬೈ: ಐಪಿಎಲ್​ನ 13ನೇ ಆವೃತ್ತಿಯನ್ನು ಮುಗಿಸಿ ಸೀದಾ ಆಸ್ಟ್ರೇಲಿಯಾದಲ್ಲಿ ಸರಣಿ ಕ್ರಿಕೆಟ್ ಆಡಲು ತೆರಳಿರುವ ಟೀಂ ಇಂಡಿಯಾದ ಆಟಗಾರರು ಸದ್ಯ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಸುಮಾರು 2 ತಿಂಗಳ ಕಾಲ ಆಸ್ಟ್ರೇಲಿಯಾದಲ್ಲೇ ಇರಲಿರುವ ಟೀಂ ಇಂಡಿಯಾ ಈ ಬಾರಿ ಎದುರಾಳಿ ತಂಡಗಳ ವಿರುದ್ಧ ಮಿಂಚುವ ತವಕದಲ್ಲಿದ್ದಾರೆ.

ಈ ನಡುವೆ, ದೀಪಾವಳಿ ಸಂದರ್ಭದಲ್ಲಿ ತಾಯ್ನಾಡಿನಿಂದ ದೂರವಿರುವ ಆಟಗಾರರಿಗೆ ಈ ಬಾರಿ ಹಬ್ಬವನ್ನು ಕ್ವಾರಂಟೈನ್​ನಲ್ಲೇ ಆಚರಿಸಬೇಕಾಗಿದೆ. ಹಾಗಾಗಿ, ಹಬ್ಬದ ಪ್ರಯುಕ್ತ ಆಸ್ಟ್ರೇಲಿಯಾದಿಂದ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಕೋರಿರುವ ತಂಡದ ನಾಯಕ ವಿರಾಟ್​ ಕೊಹ್ಲಿ ಈ ಸಲ ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಕರೆ ನೀಡಿದ್ದಾರೆ. ಪಟಾಕಿ ಹೊಡೆದು ಪರಿಸರ ಮಾಲಿನ್ಯಕ್ಕೆ ಕಾರಣವಾಗಬೇಡಿ. ಬದಲಾಗಿ ದೀಪ ಬೆಳಗಿ, ಸಿಹಿ ತಿಂದು ಮನೆಯವರೊಂದಿಗೆ ಸಂಭ್ರಮಿಸಿ ಎಂದು ಹೇಳಿದ್ದಾರೆ.

ವಿರಾಟ್​ ಈ ವಿಡಿಯೋವನ್ನು ಟ್ವೀಟ್​ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಕಿಂಗ್ ಕೊಹ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ದೀಪಾವಳಿಯಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಯನ್ನು ಹೊಸ ವರ್ಷದ ದಿನ ಸಿಡಿಸಿದರೆ, ಐಪಿಎಲ್ ಸಂದರ್ಭದಲ್ಲಿ ಹೊಡೆದರೆ ತೊಂದರೆ ಇಲ್ಲವೇ? ನಿಮ್ಮ ಹುಟ್ಟುಹಬ್ಬದ ದಿನ ಹೊಡೆಯುವ ಪಟಾಕಿ ಆಮ್ಲಜನಕ ಉತ್ಪಾದನೆ ಮಾಡುತ್ತದೆಯೇ? ಎಂದೆಲ್ಲಾ ಪ್ರಶ್ನಿಸಿರುವ ನೆಟ್ಟಿಗರು ಕೊಹ್ಲಿ ಪಟಾಕಿ ಸಿಡಿಸುತ್ತಿರುವ ಹಳೇ ಫೋಟೋವನ್ನು ಹಾಕಿಕೊಂಡು ನಿಮ್ಮ ನಕಲಿ ಪರಿಸರ ಪ್ರೇಮದ ಬಗ್ಗೆ ಗೊತ್ತಾಗುತ್ತದೆ ಎಂದು ಕಾಲೆಳೆದಿದ್ದಾರೆ.

‘ಸಾಲುಮರದ ತಿಮ್ಮಕ್ಕನವರನ್ನು ನೋಡಿ ಕಲಿಯಿರಿ!’

ಕೊಹ್ಲಿಯನ್ನು ನಕಲಿ ಪರಿಸರ ಪ್ರೇಮಿ ಎಂದು ಟೀಕಿಸಿದ್ದಲ್ಲದೇ ಸಾಲುಮರದ ತಿಮ್ಮಕ್ಕನವರ ಫೋಟೋವನ್ನು ಪಕ್ಕದಲ್ಲಿ ಹಾಕಿರುವ ನೆಟ್ಟಿಗರು ಶತಾಯುಷಿ ತಿಮ್ಮಕ್ಕ ನಿಜವಾದ ಪರಿಸರ ಪ್ರೇಮಿ. ಕುಡಿಯುವ ನೀರಿನಲ್ಲಿ ಐಷಾರಾಮಿ ಕಾರು ತೊಳೆದು ದಂಡ ಕಟ್ಟಿರುವ ನೀವು ಬಾಯಿ ಮಾತಿನಲ್ಲಿ ಕಾಳಜಿ ವ್ಯಕ್ತಪಡಿಸುವ ಬದಲು ಇವರನ್ನು ನೋಡಿ ಕಲಿಯಿರಿ ಎಂದು ಟೀಕಿಸಿದ್ದಾರೆ.

ಕೊಹ್ಲಿ ಬೆನ್ನಿಗೆ ನಿಂತ ಅಭಿಮಾನಿಗಳು!
ಇತ್ತ, ಕೊಹ್ಲಿ ಮೇಲೆ ಟೀಕಾ ಪ್ರಹಾರ ಹೆಚ್ಚುತ್ತಿದ್ದಂತೆಯೇ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಪರ ನಿಂತು ಬೆಂಬಲ ಸೂಚಿಸಿದ್ದಾರೆ. #IstandWithVirat #ViratKohli ಹ್ಯಾಷ್​​ಟ್ಯಾಗ್ ಆರಂಭಿಸಿರುವ ಕೊಹ್ಲಿ ಅಭಿಮಾನಿ ಪಡೆ ಅದನ್ನು ಟ್ರೆಂಡ್ ಮಾಡಿದ್ದಾರೆ.