ರೋಹಿತ್ ಶರ್ಮಾ ವಿಚಾರದಲ್ಲಿ ಕಿಡಿ ಹೊತ್ತಿಸಿದ ಮಾಂಜ್ರೇಕರ್ಗೆ ಗಂಗೂಲಿ ತಿರುಗೇಟು
ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಟೀಮ್ ಇಂಡಿಯಾ ಈಗಾಗಲೇ ಕಾಂಗರೂಗಳ ನಾಡಿನಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸವನ್ನೂ ಆರಂಭಿಸಿದೆ. ಆದ್ರೆ ಏಕದಿನ ಮತ್ತು ಟಿಟ್ವೆಂಟಿ ತಂಡಕ್ಕೆ ಆಯ್ಕೆಯಾಗದ ರೋಹಿತ್ ಶರ್ಮಾ, ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿದ ಮಾಂಜ್ರೇಕರ್ಗೆ, ಗಂಗೂಲಿ ನೀಡಿದ ತಿರುಗೇಟೇನು ಬನ್ನಿ ನೋಡೋಣ. ಆಸ್ಟ್ರೇಲಿಯಾ ವಿರುದ್ಧದ ಟಿಟ್ವೆಂಟಿ ಮತ್ತು ಏಕದಿನ ಸರಣಿಯಿಂದ ರೋಹಿತ್ ಶರ್ಮಾರನ್ನ ಕೈ ಬಿಟ್ಟಿರೋ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಮೊದಲಿಗೆ ಆಯ್ಕೆ ಸಮಿತಿ ರೋಹಿತ್ಗೆ ಗಾಯವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ಕೈ ಬಿಟ್ಟಿರೋದಾಗಿ ತಿಳಿಸಿತ್ತು. ಆದ್ರೆ […]
ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಟೀಮ್ ಇಂಡಿಯಾ ಈಗಾಗಲೇ ಕಾಂಗರೂಗಳ ನಾಡಿನಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸವನ್ನೂ ಆರಂಭಿಸಿದೆ. ಆದ್ರೆ ಏಕದಿನ ಮತ್ತು ಟಿಟ್ವೆಂಟಿ ತಂಡಕ್ಕೆ ಆಯ್ಕೆಯಾಗದ ರೋಹಿತ್ ಶರ್ಮಾ, ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿದ ಮಾಂಜ್ರೇಕರ್ಗೆ, ಗಂಗೂಲಿ ನೀಡಿದ ತಿರುಗೇಟೇನು ಬನ್ನಿ ನೋಡೋಣ.
ಆಸ್ಟ್ರೇಲಿಯಾ ವಿರುದ್ಧದ ಟಿಟ್ವೆಂಟಿ ಮತ್ತು ಏಕದಿನ ಸರಣಿಯಿಂದ ರೋಹಿತ್ ಶರ್ಮಾರನ್ನ ಕೈ ಬಿಟ್ಟಿರೋ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಮೊದಲಿಗೆ ಆಯ್ಕೆ ಸಮಿತಿ ರೋಹಿತ್ಗೆ ಗಾಯವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ಕೈ ಬಿಟ್ಟಿರೋದಾಗಿ ತಿಳಿಸಿತ್ತು. ಆದ್ರೆ ಆಯ್ಕೆ ಸಮಿತಿಗೆ ಸೆಡ್ಡು ಹೊಡೆದ ರೋಹಿತ್, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಚಾಂಪಿಯನ್ ಮಾಡಿ ತಿರುಗೇಟು ನೀಡಿದ್ರು.
ಹೀಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ ವಿಚಾರದಲ್ಲಿ ಏನೋ ಎಡವಟ್ಟಾಗ್ತಿದೆ ಅನ್ನೋವಾಗಲೇ, ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾರನ್ನ ಆಯ್ಕೆ ಮಾಡಿದೆ. ಆದ್ರೀಗ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿ, ಏಕದಿನ ಮತ್ತು ಟಿಟ್ವೆಂಟಿ ತಂಡದಿಂದ ಹೊರಗಿಟ್ಟಿದ್ಯಾಕೆ ಅನ್ನೋದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಬಿಸಿಸಿಐ ನಡೆಯನ್ನ ಪ್ರಶ್ನಿಸಿದ ಸಂಜಯ್ ಮಾಂಜ್ರೇಕರ್ ಭಾರತ ತಂಡದ ಮಾಜಿ ಕ್ರಿಕೆಟಿಗ ಕಮ್ ಕಮಂಟೇಟರ್ ಸಂಜಯ್ ಮಾಂಜ್ರೇಕರ್, ರೋಹಿತ್ ಶರ್ಮಾ ವಿಚಾರವಾಗಿ ಬಾಂಬ್ ಸಿಡಿಸಿದ್ದಾರೆ. ರೋಹಿತ್ ಫಿಟ್ನೆಸ್ ವಿಚಾರದಲ್ಲಿ ಯಾರಿಗೂ ಸ್ಪಷ್ಟತೆ ಇಲ್ಲ. ಹೀಗಾಗಿ ರೋಹಿತ್ ಆಯ್ಕೆಯಾಗದಿರೋದ್ರ ಹಿಂದೆ ಅನುಮಾನ ವ್ಯಕ್ತಪಡಿಸಿದ್ದಾರೆ.
ರೋಹಿತ್ ಬಗ್ಗೆ ಸ್ಪಷ್ಟತೆ ಇಲ್ಲ. ‘‘ ರೋಹಿತ್ ಶರ್ಮಾ ಫಿಟ್ನೆಸ್ ಕುರಿತಂತೆ ಯಾರಿಗೂ ಸ್ಪಷ್ಟತೆಯೇ ಇಲ್ಲ. ಬಹುಶಃ ಇದು ಬಿಸಿಸಿಐ ನಿರ್ಧಾರವಾಗಿರಬಹುದು. ಆದರೆ ಜನರಿಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದಾಗ ಸಾಮಾನ್ಯವಾಗಿಯೇ ಪ್ರಶ್ನೆಗಳು ಉದ್ಭವಿಸುತ್ತದೆ. ಆದರೆ ನನಗಂತೂ ಆಯ್ಕೆ ಸಮಿತಿಯಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ.’’ -ಸಂಜಯ್ ಮಾಂಜ್ರೇಕರ್, ಮಾಜಿ ಕ್ರಿಕೆಟಿಗ
ಆದ್ರೀಗ ಸಂಜಯ್ ಮಾಂಜ್ರೇಕರ್ ಹೇಳಿಕೆಗೆ ಬಿಸಿಸಿಐ ಅಧ್ಯಕ್ಷ ಮಾಜಿ ನಾಯಕ ಸೌರವ್ ಗಂಗೂಲಿ ಸರಿಯಾಗಿ ತಿರುಗೇಟು ನೀಡಿದ್ದಾರೆ. ರೋಹಿತ್ ಶರ್ಮಾ ಶೇಕಡಾ 70ರಷ್ಟು ಮಾತ್ರ ಫಿಟ್ ಆಗಿದ್ದಾರೆ. ಇದೇ ಕಾರಣಕ್ಕೆ ಏಕದಿನ ಮತ್ತು ಟಿಟ್ವೆಂಟಿ ತಂಡದಿಂದ ಕೈ ಬಿಟ್ಟಿರೋದಾಗಿ ತಿಳಿಸಿದ್ದಾರೆ.
ರೋಹಿತ್ 70ರಷ್ಟು ಫಿಟ್ ಆಗಿದ್ದಾರೆ. ‘‘ ರೋಹಿತ್ ಶರ್ಮಾ ಶೇ. 70ರಷ್ಟು ಮಾತ್ರ ಫಿಟ್ ಆಗಿದ್ದಾರೆ. ಇನ್ನೂ 30ರಷ್ಟು ಚೇತರಿಕೆ ಕಾಣಬೇಕಿದೆ. ಇದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಗುತ್ತದೆ. ಹೀಗಾಗಿ ಅವರನ್ನು ಆಸ್ಟ್ರೇಲಿಯ ಪ್ರವಾಸದ ಏಕದಿನ ಹಾಗೂ ಟಿ20 ಸರಣಿಯಿಂದ ಹೊರಗಿಡಲಾಗಿದೆ.’’ -ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ
ಹೀಗೆ ರೋಹಿತ್ ಶರ್ಮಾ ವಿಚಾರದಲ್ಲಿ ಮಾಂಜ್ರೇಕರ್ ಹೊತ್ತಿಸಿದ ಕಿಡಿಯನ್ನ ದಾದಾ, ತಕ್ಕ ತಿರುಗೇಟು ನೀಡೋ ಮೂಲಕ ಆರಿಸಿದ್ದಾರೆ. ಈ ವಿಚಾರವನ್ನ ಗಂಗೂಲಿಯಾಗಲಿ, ಆಯ್ಕೆ ಸಮಿತಿಯಾಗಲಿ ತಂಡ ಆಯ್ಕೆ ಮಾಡಿದ ದಿನವೇ ಹೇಳಿದ್ರೆ, ರೋಹಿತ್ ವಿಚಾರದಲ್ಲಿ ಅನುಮಾನದ ಹುತ್ತ ಏಳ್ತಿರಲಿಲ್ಲ.