ವಿರಾಟ್ ಕೊಹ್ಲಿ.. ಸದ್ಯ ವಿಶ್ವ ಕ್ರಿಕೆಟ್ನ ರನ್ ಸಾಮ್ರಾಟ. ಕೊಹ್ಲಿ ಅಪ್ರತಿಮ ಬ್ಯಾಟಿಂಗ್ಗೆ ದಿಗ್ಗಜರ ದಾಖಲೆಗಳು ಚಿಂದಿ ಚಿಂದಿಯಾಗ್ತಿದೆ. ಕೊಹ್ಲಿಯ ಕ್ಲಾಸ್ ಅಂಡ್ ಮಾಸ್ ಪರ್ಫಾಮೆನ್ಸ್ಗೆ ವಿಲವಿಲ ಒದ್ದಾಡೋ ಬೌಲರ್ಗಳು, ವಿಕೆಟ್ ಪಡೆಯೋದಕ್ಕೆ ಇನ್ನಿಲ್ಲದ ಹರಸಾಹಸವನ್ನ ಪಡ್ತಿದ್ದಾರೆ.
ವಿರಾಟ್ ಕೊಹ್ಲಿ ಕ್ರೀಸ್ಗಿಳಿದ್ರೆ ಸಾಕು, ಎದುರಾಳಿಗಳಿಗೆ ನಡುಕ ಶುರುವಾಗುತ್ತೆ. ಕೊಹ್ಲಿಯ ರನ್ ರೌದ್ರಾವತಾರಕ್ಕೆ ಎದುರಾಳಿಗಳು ಉಡೀಸ್ ಆಗಿಹೋಗ್ತಾರೆ. ಅಷ್ಟರಮಟ್ಟಿಗೆ ಆನ್ಫೀಲ್ಡ್ನಲ್ಲಿ ವಿರಾಟ್ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಪ್ರತಿಯೊಂದು ಸರಣಿಯಲ್ಲೂ ಒಂದಿಲ್ಲೊಂದು ದಾಖಲೆಗಳನ್ನ ಸೃಷ್ಟಿಸೋ ವೀರಾಧಿವೀರ ಕೊಹ್ಲಿ.
ರನ್ ಮಷಿನ್ ಕೊಹ್ಲಿಗೆ ಲೆಗ್ ಸ್ಪಿನ್ನರ್ಸ್ ಕಂಡ್ರೆ ಭಯ?
ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಇದೇ ಕೊಹ್ಲಿಗೀಗ ಲೆಗ್ ಸ್ಪಿನ್ನರ್ಗಳು ಕಂಡ್ರೆ ಭಯನಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಯಾಕಂದ್ರೆ, ಪ್ರಸಕ್ತ ನ್ಯೂಜಿಲೆಂಡ್ ಸರಣಿಯಲ್ಲಿ ಲೆಗ್ ಸ್ಪಿನ್ನರ್ಗಳ ಓವರ್ನಲ್ಲಿ ವಿರಾಟ್ ರನ್ ಗಳಿಸೋದಕ್ಕೆ ಪರದಾಡ್ತಿದ್ದಾರೆ. ಹ್ಯಾಮಿಲ್ಟನ್ನ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ವಿರಾಟ್, ಲೆಗ್ ಸ್ಪಿನ್ನರ್ ಇಶ್ ಸೋದಿ ಗೂಗ್ಲಿಗೆ ಬಲಿಯಾಗಿದ್ರು.
ಕುತೂಹಲದ ವಿಷ್ಯ ಅಂದ್ರೆ, ಇದೊಂದೇ ಪಂದ್ಯದಲ್ಲಿ ಕೊಹ್ಲಿ ಲೆಗ್ ಸ್ಪಿನ್ನರ್ಗೆ ಬಲಿಯಾಗಿದ್ರೆ, ಇಷ್ಟೊಂದು ಸುದ್ದಿಯಾಗ್ತಿರಲಿಲ್ಲ. ಆದ್ರೆ, ವಿರಾಟ್ ಕಳೆದ 4ಏಕದಿನ ಪಂದ್ಯಗಳ ಪೈಕಿ ಮೂರು ಬಾರಿ ಲೆಗ್ ಸ್ಪಿನ್ನರ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಆಸಿಸ್ ಸರಣಿಯಲ್ಲಿ ಕೊಹ್ಲಿಯನ್ನ ಕಾಡಿದ್ದ ಜಂಪಾ!
ಕೊಹ್ಲಿ ವಾಂಖೆಡೆ ಮತ್ತು ರಾಜ್ಕೋಟ್ನಲ್ಲಿ ಮಾತ್ರವಲ್ಲ. ಒಟ್ಟು 7 ಬಾರಿ ಅಡಮ್ ಜಂಪಾ ಬೌಲಿಂಗ್ನಲ್ಲೇ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಕೊಹ್ಲಿಯನ್ನ ಹೇಗೆ ಬಲಿಪಡೆಯಬೇಕು ಅನ್ನೋದ್ರ ಬಗ್ಗೆ, ಜಂಪಾ ಬಹಿರಂಗವಾಗೇ ಹೇಳಿದ್ರು. ಕೊಹ್ಲಿ ಕ್ರೀಸ್ಗೆ ಬಂದು ಸೆಟಲ್ ಆಗೋಕ್ಕಿಂತ ಮುಂಚೆ, ಲೆಗ್ ಸ್ಪಿನ್ನರ್ಗಳಿಗೆ ಪರದಾಡ್ತಾರಂತೆ. ಆ ಸಮಯದಲ್ಲಿ ಲೆಗ್ ಸ್ಪಿನ್ನರ್ಗೆ ಬೌಲಿಂಗ್ ನೀಡಿದ್ರೆ, ಕೊಹ್ಲಿ ವಿಕೆಟ್ ಪಡೆಯಬಹುದು ಅಂತಾ ಜಂಪಾ ಸೀಕ್ರೆಟ್ ಬಿಚ್ಚಿಟ್ಟಿದ್ದ.
17 ಬಾರಿ ಲೆಗ್ ಸ್ಪಿನ್ನರ್ಗೆ ವಿಕೆಟ್ ಒಪ್ಪಿಸಿರೋ ಕೊಹ್ಲಿ!
ಇನ್ನೂ ಕಲರ್ಫುಲ್ ಟೂರ್ನಿ ಐಪಿಎಲ್ನಲ್ಲೂ ವಿರಾಟ್ ಲೆಗ್ ಸ್ಪಿನ್ನರ್ಗೆ ಒಟ್ಟು 10ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಅದ್ರಲ್ಲೂ ರಾಜಸ್ಥಾನ ರಾಯಲ್ಸ್ ತಂಡ ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಗೆ, ವಿರಾಟ್ ಬಲಿಯಾಗಿರೋದೇ ಹೆಚ್ಚು. ಒಟ್ನಲ್ಲಿ ವಿಶ್ವ ಕ್ರಿಕೆಟ್ನ ರನ್ ಮಷೀನ್ಗೆ ಲೆಗ್ ಸ್ಪಿನ್ನರ್ಗಳ ಭಯ ಕಾಡೋದಕ್ಕೆ ಶುರುವಾಗಿದೆ. ಕೊಹ್ಲಿ ಆದಷ್ಟು ಬೇಗನೇ ಈ ವೀಕ್ನೆಸ್ನಿಂದ ಹೊರಬರಬೇಕಿದೆ.
Published On - 9:44 am, Sat, 8 February 20