ನೀವು ಕೂಡ ಬೇಗ ಲಸಿಕೆ ಪಡೆಯಿರಿ; ಮೊದಲ ಹಂತದ ಕೊರೊನಾ ಲಸಿಕೆ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

|

Updated on: May 10, 2021 | 2:31 PM

ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಸಿಕೆ ಹಾಕುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಲಸಿಕೆ ಹಾಕಿಸಿಕೊಳ್ಳುವಂತೆ ಉಳಿದ ಜನರಲ್ಲಿ ಮನವಿ ಮಾಡಿದರು.

ನೀವು ಕೂಡ ಬೇಗ ಲಸಿಕೆ ಪಡೆಯಿರಿ; ಮೊದಲ ಹಂತದ ಕೊರೊನಾ ಲಸಿಕೆ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಕೊರೊನಾ ಲಸಿಕೆ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
Follow us on

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಹಂತದ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಮಾಹಿತಿ ನೀಡಿದರು. ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಸಿಕೆ ಹಾಕುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಲಸಿಕೆ ಹಾಕಿಸಿಕೊಳ್ಳುವಂತೆ ಉಳಿದ ಜನರಲ್ಲಿ ಮನವಿ ಮಾಡಿದರು. ದಯವಿಟ್ಟು ನೀವು ಕೂಡ ಬೇಗ ಲಸಿಕೆ ಪಡೆಯಿರಿ. ಸುರಕ್ಷಿತವಾಗಿರಿ ಎಂದು ಕೊಹ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಎರಡನೇ ಡೋಸ್ ಇಂಗ್ಲೆಂಡ್‌ನಲ್ಲಿ ನೀಡಲಾಗುವುದು
ಟೀಂ ಇಂಡಿಯಾದ ನಾಯಕ ಕೊಹ್ಲಿ ಸೇರಿದಂತೆ, ಅಜಿಂಕ್ಯ ರಹಾನೆ, ಶಿಖರ್ ಧವನ್, ಉಮೇಶ್ ಯಾದವ್ ಕೂಡ ಮೊದಲ ಹಂತದ ಲಸಿಕೆ ಪಡೆದರು. ಐಪಿಎಲ್ 2021 ಅನ್ನು ಅಮಾನತುಗೊಳಿಸಿದಾಗಿನಿಂದಲೂ ಭಾರತೀಯ ಆಟಗಾರರು ಮನೆಯಲ್ಲಿದ್ದಾರೆ. ಜೂನ್ ಮೊದಲ ವಾರದಲ್ಲಿ ಅವರು ಇಂಗ್ಲೆಂಡ್‌ಗೆ ಭೇಟಿ ನೀಡಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಟಗಾರರಿಗೆ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿಯೇ ಮೊದಲ ಡೋಸ್ ತೆಗೆದುಕೊಂಡ ನಂತರ, ಎರಡನೇ ಡೋಸ್ ಅನ್ನು ಇಂಗ್ಲೆಂಡ್‌ನಲ್ಲಿ ಈ ಆಟಗಾರರಿಗೆ ನೀಡಲಾಗುವುದು.

ಕೊರೊನಾ ಯೋಧರ ತ್ಯಾಗ ಮತ್ತು ಬದ್ಧತೆಗೆ ಧನ್ಯವಾದಗಳು
ಐಪಿಎಲ್ 2021 ಅನ್ನು ನಿಲ್ಲಿಸಿದ ನಂತರ ಭಾರತದ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಕೊರೊನಾ ಲಸಿಕೆಯ ಮೊದಲ ಪ್ರಮಾಣವನ್ನು ಮೇ 7 ರಂದು ತೆಗೆದುಕೊಂಡರು. ಗುರುವಾರ ಲಸಿಕೆ ಪಡೆದ ನಂತರ ಧವನ್, ನಾನು ಲಸಿಕೆ ತೆಗೆದುಕೊಂಡಿದ್ದೇನೆ. ಕೊರೊನಾ ಯೋಧರ ತ್ಯಾಗ ಮತ್ತು ಬದ್ಧತೆಗೆ ಧನ್ಯವಾದಗಳು. ದಯವಿಟ್ಟು ಹಿಂಜರಿಯಬೇಡಿ ಮತ್ತು ಶೀಘ್ರದಲ್ಲೇ ಲಸಿಕೆ ಪಡೆಯಿರಿ. ಇದರಿಂದ ವೈರಸ್‌ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಧವನ್ ಅವರ ಹೆಜ್ಜೆಗಳನ್ನು ಅನುಸರಿಸಿ, ಭಾರತೀಯ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಕೂಡ ಲಸಿಕೆ ತೆಗೆದುಕೊಂಡಿದ್ದಾರೆ. ಮೇ 8 ರ ಶನಿವಾರ ಮುಂಬೈನಲ್ಲಿ ರಹಾನೆ ಲಸಿಕೆಯ ಮೊದಲ ಪ್ರಮಾಣವನ್ನು ತೆಗೆದುಕೊಂಡರು. ರಹಾನೆ ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳಲಿದ್ದು, ಅಲ್ಲಿ ಅವರು ಮೂರೂವರೆ ತಿಂಗಳು ತಂಗಲಿದ್ದಾರೆ.

ರವಿಶಾಸ್ತ್ರಿ ಲಸಿಕೆ ಪಡೆದರು
ವೇಗದ ಬೌಲರ್ ಉಮೇಶ್ ಯಾದವ್ ಅವರು ಮೇ 8 ರಂದು ತಮ್ಮ ಮೊದಲ ಡೋಸ್ ಲಸಿಕೆ ಪಡೆದರೆ, ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಮಾರ್ಚ್ ತಿಂಗಳಲ್ಲಿಯೇ ಲಸಿಕೆ ಪಡೆದರು. ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಶಾಸ್ತ್ರಿ ಅಹಮದಾಬಾದ್‌ನಲ್ಲಿ ಲಸಿಕೆ ಹಾಕಿಸಿಕೊಂಡರು.