ಮಾಲ್ಡೀವ್ಸ್ನಲ್ಲಿ ಆಸಿಸ್ ಆಟಗಾರರ ರಂಪಾಟ; ಬಾರ್ನಲ್ಲಿ ಪರಸ್ಪರ ಹೊಡೆದಾಡಿಕೊಂಡ ವಾರ್ನರ್-ಸ್ಲೆಟರ್?
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತು ಐಪಿಎಲ್ನಲ್ಲಿ ಕಾಮಂಟೇಟರ್ ಆಗಿದ್ದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೆಟರ್ ಪರಸ್ಪರ ಜಗಳ ಮಾಡಿ ಕೊಂಡಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಹಾಗಾದ್ರೆ ಅದ್ಯಾವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಐಪಿಎಲ್ ಅರ್ಧಕ್ಕೆ ಮೊಟಕುಗೊಂಡಿರೋದ್ರಿಂದ ವಿದೇಶಿ ಕ್ರಿಕೆಟಿಗರೆಲ್ಲಾ, ತಮ್ಮ ತಮ್ಮ ತವರಿಗೆ ವಾಪಸ್ ಆಗಿದ್ದಾರೆ. ಮೇ 15ರವರೆಗೆ ಆಸ್ಟ್ರೇಲಿಯಾ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದೆ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಮಾತ್ರ ತಮ್ಮ ತವರಿಗೆ ತೆರಳೋಕಾಗದೇ ಮಾಲ್ಡೀವ್ಸ್ನಲ್ಲಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟಿಗರು ಮಾಲ್ಡೀವ್ಸ್ನಲ್ಲಿದ್ರೆ ಸುದ್ದಿಯಾಗ್ತಾ ಇರಲಿಲ್ಲ. ಆದ್ರೆ ಮಾಲ್ಡೀವ್ಸ್ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಹೊಡೆದಾಡಿಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತು ಐಪಿಎಲ್ನಲ್ಲಿ ಕಾಮಂಟೇಟರ್ ಆಗಿದ್ದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೆಟರ್ ಪರಸ್ಪರ ಜಗಳ ಮಾಡಿ ಕೊಂಡಿದ್ದಾರೆ.
ಬಾರ್ನಲ್ಲಿ ಹೊಡೆದಾಡಿಕೊಂಡ ವಾರ್ನರ್-ಸ್ಲೆಟರ್? ಹೇಗೋ ತವರಿಗೆ ಹೋಗ್ತೀವಿ ಅನ್ನೋ ಖುಷಿಯಲ್ಲಿದ್ದ ಆಸಿಸ್ ಕ್ರಿಕೆಟಿಗರು ರಿಲ್ಯಾಕ್ಸ್ ಆಗೋಕೆ ಬಾರ್ಗೆ ತೆರಳಿದ್ದಾರೆ. ಈ ವೇಳೆ ವಾರ್ನರ್ ಮತ್ತು ಸ್ಲೆಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಚಕಮಕಿ ಜೋರಾಗಿ ಇಬ್ಬರು ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ವಾಗ್ವಾದ ಉಂಟಾಗಿ, ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಇತರೆ ಆಟಗಾರರು ಇಬ್ಬರ ಜಗಳವನ್ನ ಬಿಡಿಸಿದ್ದಾರೆ.
ಇಬ್ಬರು ಈ ಸುದ್ದಿಯನ್ನ ನಿರಾಕರಿಸಿದ್ದಾರೆ ವಾರ್ನರ್ ಮತ್ತು ಸ್ಲೆಟರ್ ಮಾಲ್ಡೀವ್ಸ್ನ ಬಾರ್ನಲ್ಲಿ ಜಗಳ ಮಾಡಿಕೊಂಡಿರುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದ್ರೆ ಡೇವಿಡ್ ವಾರ್ನರ್ ಮತ್ತು ಮೈಕಲ್ ಸ್ಲೆಟರ್ ಇಬ್ಬರು ಈ ಸುದ್ದಿಯನ್ನ ನಿರಾಕರಿಸಿದ್ದಾರೆ. ನಾವಿಬ್ಬರು ದೀರ್ಘಕಾಲದ ಸ್ನೇಹಿತರು ನಮ್ಮಿಬ್ಬರ ನಡುವೆ ಯಾವುದೇ ಜಗಳವಾಗಿಲ್ಲ ಎಂದಿದ್ದಾರೆ.
ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ರು ಇಲ್ಲಿ ವಾರ್ನರ್ ಮಾತನ್ನ ನಂಬೋ ಹಾಗಿಲ್ಲ.. ಯಾಕಂದ್ರೆ 2013ರಲ್ಲಿ ವಾರ್ನರ್ ಕುಡಿದ ಮತ್ತಿನಲ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ ಜೊತೆ ಜಗಳವಾಡಿ, ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ರು. ಹೀಗಾಗಿ ಕುಡಿದ ಮತ್ತಿನಲ್ಲಿ ಕಿರಿಕ್ ತಗೆಯೋ ವಾರ್ನರ್ ಸ್ಲೆಟರ್ ಜೊತೆ ಜಗಳವಾಡಿರೋ ವಿಚಾರವನ್ನ, ಸುಲಭವಾಗಿ ಅಲ್ಲಗೆಳೆಯುವಂತಿಲ್ಲ.
ಇದನ್ನೂ ಓದಿ:IPL 2021: ಪ್ಲೀಸ್ ಡ್ಯಾಡಿ, ಬೇಗ ಮನೆಗೆ ಬನ್ನಿ.. ಮಗಳ ಭಾವನಾತ್ಮಾಕ ಸಂದೇಶ ಹಂಚಿಕೊಂಡ ಡೇವಿಡ್ ವಾರ್ನರ್