WI vs AUS: ಹೆಟ್ಮೇರ್ ಸ್ಫೋಟಕ ಆಟ: ಆಸೀಸ್ ಬ್ಯಾಟ್ಸ್​ಮನ್​ಗಳನ್ನ ಹೆಡೆಮುರಿ ಕಟ್ಟಿದ ವೆಸ್ಟ್​ ಇಂಡೀಸ್

| Updated By: Vinay Bhat

Updated on: Jul 11, 2021 | 1:36 PM

56 ರನ್​ಗಳ ಭರ್ಜರಿ ಜಯದೊಂದಿಗೆ 2-0 ಮುನ್ನಡೆ ಸಾಧಿಸಿರುವ ವೆಸ್ಟ್​ ಇಂಡೀಸ್ ಸರಣಿ ವಶಪಡಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಇತ್ತ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಫಿಂಚ್ ಪಡೆ ರಣತಂತ್ರ ಹೇರಬೇಕಿದೆ.

WI vs AUS: ಹೆಟ್ಮೇರ್ ಸ್ಫೋಟಕ ಆಟ: ಆಸೀಸ್ ಬ್ಯಾಟ್ಸ್​ಮನ್​ಗಳನ್ನ ಹೆಡೆಮುರಿ ಕಟ್ಟಿದ ವೆಸ್ಟ್​ ಇಂಡೀಸ್
WI vs AUS
Follow us on

ಕೆರಿಬಿಯನ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ವೆಸ್ಟ್​ ಇಂಡೀಸ್ ವಿರುದ್ಧ ಟಿ-20 ಸರಣಿ ಆಡುತ್ತಿದೆ. ಮೊದಲ ಟಿ-20 ಪಂದ್ಯದಲ್ಲಿ ಹೀನಾಯ ಸೋಲುಕಂಡಿದ್ದ ಕಾಂಗರೂ ಪಡೆ ಎರಡನೇ ಪಂದ್ಯದಲ್ಲೂ ಮತ್ತೆ ಎಡವಿದೆ. ಇಂದು ನಡೆದ ಎರಡನೇ ಟಿ-20 ಪಂದ್ಯದಲ್ಲಿ ವಿಂಡೀಸ್ ಬ್ಯಾಟ್ಸ್​ಮನ್​-ಬೌಲರ್​ಗಳ ಅದ್ಭುತ ಪ್ರದರ್ಶನಕ್ಕೆ ತಲೆಬಾಗಿದ ಆಸೀಸ್ ಸತತ ಎರಡನೇ ಸೋಲುಂಡಿದೆ. 56 ರನ್​ಗಳ ಭರ್ಜರಿ ಜಯದೊಂದಿಗೆ ಪೂರನ್ ತಂಡ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ವೆಸ್ಟ್​ ಇಂಡೀಸ್ ನೀಡಿದ್ದ 197 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಮ್ಯಾಥ್ಯೂ ವೇಡ್(0) ಮತ್ತು ನಾಯಕ ಆ್ಯರೋನ್ ಫಿಂಚ್(6) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ಮಿಚೆಲ್ ಮಾರ್ಷ್ ಜೊತೆಯಾದ ಜೋಚ್ ಪಿಲಿಪ್(13) ತಂಡಕ್ಕೆ ಕೊಂಚ್ ಚೇತರಿಕೆ ನೀಡಿದರು. ಈ ಜೋಡಿ 37 ರನ್​ಗಳ ಕಾಣಿಕೆ ನೀಡಿತು.

ಮೋಸಿಸ್ ಹೆನ್ರಿಕ್ಯೂಸ್ 21 ಎಸೆತಗಳಲ್ಲಿ 19 ರನ್ ಗಳಿಸಿ ಔಟ್ ಆದರು. ಇತ್ತ ತಂಡದ ಗೆಲುವಿಗೆ ಹೋರಾಟ ನಡೆಸುತ್ತಿದ್ದ ಮಿಚೆಲ್ ಮಾರ್ಷ್ ಕೂಡ 42 ಎಸೆತಗಳಲ್ಲಿ 54 ರನ್ ಬಾರಿಸಿ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರೂ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಬಂದ ಬೆನ್ನಲ್ಲೆ ಪೆವಿಲಿಯನ್ ಸೇರಿಕೊಂಡಿರು. ಅಂತಿಮವಾಗಿ ಆಸ್ಟ್ರೇಲಿಯಾ 19.2 ಓವರ್​ನಲ್ಲೇ 140 ರನ್​ಗೆ ಸರ್ವಪತನ ಕಂಡಿತು. ವಿಂಡೀಸ್ ಪರ ಹೇಡನ್ ವಾಲ್ಶ್ 3 ವಿಕೆಟ್ ಕಿತ್ತರು.

 

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ವಿಂಡೀಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತಾದರು ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೇರ್ ಸ್ಫೋಟಕ ಆಟ ತಂಡಕ್ಕೆ ನೆರವಾಯಿತು. 36 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಿಡಿಸಿ ಹೆಟ್ಮೇರ್ 61 ರನ್ ಚಚ್ಚಿದರು. ಡಿಜೆ ಬ್ರಾವೋ 34 ಎಸೆತಗಳಲ್ಲಿ ಅಜೇಯ 47 ಮತ್ತು ಆಂಡ್ರೆ ರಸೆಲ್ ಅಜೇಯ 25 ರನ್ ಬಾರಿಸಿ ತಂಡದ ಮೊತ್ತವನ್ನು 196ಕ್ಕೆ ತಂದಿಟ್ಟರು.

56 ರನ್​ಗಳ ಭರ್ಜರಿ ಜಯದೊಂದಿಗೆ 2-0 ಮುನ್ನಡೆ ಸಾಧಿಸಿರುವ ವೆಸ್ಟ್​ ಇಂಡೀಸ್ ಸರಣಿ ವಶಪಡಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಇತ್ತ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಫಿಂಚ್ ಪಡೆ ರಣತಂತ್ರ ಹೇರಬೇಕಿದೆ. ಮೂರನೇ ಟಿ-20 ಪಂದ್ಯ ಜುಲೈ 12 ಸೋಮವಾರದಂದು ನಡೆಯಲಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರನ ಸಾರ್ವಕಾಲಿಕ IPL XI ನಲ್ಲಿ ಧೋನಿಗಿಲ್ಲ ಸ್ಥಾನ: ಯಾರೆಲ್ಲಾ ಇದ್ದಾರೆ?

ನ್ಯೂಜಿಲೆಂಡ್ ಕ್ರಿಕೆಟಿಗನಿಂದ ಡೈವ್ ಹೊಡೆದು ಊಹಿಸಲಾಗದ ಕ್ಯಾಚ್: ಇಲ್ಲಿದೆ ರೋಚಕ ವಿಡಿಯೋ

Published On - 1:35 pm, Sun, 11 July 21