AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್ ಕ್ರಿಕೆಟಿಗನಿಂದ ಡೈವ್ ಹೊಡೆದು ಊಹಿಸಲಾಗದ ಕ್ಯಾಚ್: ಇಲ್ಲಿದೆ ರೋಚಕ ವಿಡಿಯೋ

172 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಮಿಡಲ್ಸ್​ಎಕ್ಸ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದ್ದು ಗ್ಲೆನ್ ಪಿಲಿಪ್ಸ್. ಓಪನರ್ ಸ್ಟೀವ್ ಎಸ್ಕಿನಾಜಿ 9 ರನ್ ಗಳಿಸಿರುವಾಗ ಚೆಂಡನ್ನು ಬೌಂಡರಿಗೆಂದು ಅಟ್ಟಿದರು. ಆದರೆ,

ನ್ಯೂಜಿಲೆಂಡ್ ಕ್ರಿಕೆಟಿಗನಿಂದ ಡೈವ್ ಹೊಡೆದು ಊಹಿಸಲಾಗದ ಕ್ಯಾಚ್: ಇಲ್ಲಿದೆ ರೋಚಕ ವಿಡಿಯೋ
Glenn Phillips
Vinay Bhat
|

Updated on:Jul 11, 2021 | 11:57 AM

Share

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ಗ್ಲೆನ್ ಪಿಲಿಪ್ಸ್ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ-20 ವಿಟಾಲಿಟಿ ಬ್ಲಾಸ್ಟ್ 2021 ಟೂರ್ನಿಯಲ್ಲಿ ಗ್ಲೌಸ್​ಸ್ಟೆರ್​ಶೈರ್ ತಂಡದ ಪರ ಆಡುತ್ತಿದ್ದು, ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ವೈರಲ್ ಆಗುತ್ತಿದೆ. ಮಿಡಲ್ಸ್​ಎಕ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಪಿಲಿಪ್ಸ್ ಕ್ಯಾಚ್​ಗೆ ಕ್ರಿಕೆಟ್ ಪಂಡಿತರೇ ಬೆರಗಾಗಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಗ್ಲೌಸ್​ಸ್ಟೆರ್​ಶೈರ್ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು. ರಿಯಾನ್ ಹಿಗ್ಗಿನ್ಸ್ ಕೇವಲ 25 ಎಸೆತಗಳಲ್ಲಿ 43ರನ್ ಚಚ್ಚಿದರೆ, ಲಾನ್ ಕಾಕ್​ಬಿನ್ 34 ರನ್ ಬಾರಿಸಿದರು.

172 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಮಿಡಲ್ಸ್​ಎಕ್ಸ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದ್ದು ಗ್ಲೆನ್ ಪಿಲಿಪ್ಸ್. ಓಪನರ್ ಸ್ಟೀವ್ ಎಸ್ಕಿನಾಜಿ 9 ರನ್ ಗಳಿಸಿರುವಾಗ ಚೆಂಡನ್ನು ಬೌಂಡರಿಗೆಂದು ಅಟ್ಟಿದರು. ಆದರೆ, ಬ್ಯಾಕ್​ವರ್ಡ್ ಪಾಯಿಂಟ್​ನಿಂದ ಓಡಿ ಬಂದ ಪಿಲಿಪ್ಸ್ ಡೈವ್ ಹೊಡೆದು ಸ್ಟನ್ನಿಂಗ್ ಕ್ಯಾಚ್ ಹಿಡಿದರು. ಇದರ ವಿಡಿಯೋವನ್ನು ವಿಟಾಲಿಟಿ ಬ್ಲಾಸ್ಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಈ ಪಂದ್ಯದಲ್ಲಿ ಮಿಡಲ್ಸ್​ಎಕ್ಸ್ ತಂಡ ತಂಡ 20 ಓವರ್​​ನಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಕೊಂಡಿತು. ತಂಡದ ಪರ ಮ್ಯಾಕ್ಸ್ ಹೋಲ್ಡೆನ್ 34 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದರು.

ಗ್ಲೆನ್ ಪಿಲಿಪ್ಸ್ ಅವರು ಈ ಟೂರ್ನಿಯಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 423 ರನ್ ಗಳಿಸಿ 60 ಸರಾಸರಿ ಕಾಪಾಡಿಕೊಂಡಿದ್ದಾರೆ. ಮೂರು ಅರ್ಧಶತಕ ಕೂಡ ಸೇರಿದ್ದು, 160ಕ್ಕಿಂತ ಅಧಿಕ ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ನ್ಯೂಜಿಲೆಂಡ್ ಪರ ಪಿಲಿಪ್ಸ್ ಅವರು 25 ಅಂತರರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 506 ರನ್ ಗಳಿಸಿದ್ದು, 2 ಅರ್ಧಶತಕ ಕೂಡ ಸೇರಿದೆ. ನ್ಯೂಜಿಲೆಂಡ್​ ತಂಡದ ಪರ ಟೆಸ್ಟ್​ ಪಂದ್ಯಗಳಲ್ಲೂ ಇವರು ಕಣಕ್ಕಿಳಿದಿದ್ದಾರೆ.

Ashleigh Barty: ಚೊಚ್ಚಲ ವಿಂಬಲ್ಡನ್ ಗೆದ್ದ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ ಕ್ರಿಕೆಟರ್ ಎಂಬುದು ನಿಮಗೆ ಗೊತ್ತೇ?

Copa America Final: ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟಿನಾ

Published On - 11:56 am, Sun, 11 July 21

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ