WI vs AUS: ಹೆಟ್ಮೇರ್ ಸ್ಫೋಟಕ ಆಟ: ಆಸೀಸ್ ಬ್ಯಾಟ್ಸ್ಮನ್ಗಳನ್ನ ಹೆಡೆಮುರಿ ಕಟ್ಟಿದ ವೆಸ್ಟ್ ಇಂಡೀಸ್
56 ರನ್ಗಳ ಭರ್ಜರಿ ಜಯದೊಂದಿಗೆ 2-0 ಮುನ್ನಡೆ ಸಾಧಿಸಿರುವ ವೆಸ್ಟ್ ಇಂಡೀಸ್ ಸರಣಿ ವಶಪಡಿಸಿಕೊಳ್ಳುವ ಪ್ಲಾನ್ನಲ್ಲಿದೆ. ಇತ್ತ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಫಿಂಚ್ ಪಡೆ ರಣತಂತ್ರ ಹೇರಬೇಕಿದೆ.
ಕೆರಿಬಿಯನ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಸರಣಿ ಆಡುತ್ತಿದೆ. ಮೊದಲ ಟಿ-20 ಪಂದ್ಯದಲ್ಲಿ ಹೀನಾಯ ಸೋಲುಕಂಡಿದ್ದ ಕಾಂಗರೂ ಪಡೆ ಎರಡನೇ ಪಂದ್ಯದಲ್ಲೂ ಮತ್ತೆ ಎಡವಿದೆ. ಇಂದು ನಡೆದ ಎರಡನೇ ಟಿ-20 ಪಂದ್ಯದಲ್ಲಿ ವಿಂಡೀಸ್ ಬ್ಯಾಟ್ಸ್ಮನ್-ಬೌಲರ್ಗಳ ಅದ್ಭುತ ಪ್ರದರ್ಶನಕ್ಕೆ ತಲೆಬಾಗಿದ ಆಸೀಸ್ ಸತತ ಎರಡನೇ ಸೋಲುಂಡಿದೆ. 56 ರನ್ಗಳ ಭರ್ಜರಿ ಜಯದೊಂದಿಗೆ ಪೂರನ್ ತಂಡ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ವೆಸ್ಟ್ ಇಂಡೀಸ್ ನೀಡಿದ್ದ 197 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಮ್ಯಾಥ್ಯೂ ವೇಡ್(0) ಮತ್ತು ನಾಯಕ ಆ್ಯರೋನ್ ಫಿಂಚ್(6) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ಮಿಚೆಲ್ ಮಾರ್ಷ್ ಜೊತೆಯಾದ ಜೋಚ್ ಪಿಲಿಪ್(13) ತಂಡಕ್ಕೆ ಕೊಂಚ್ ಚೇತರಿಕೆ ನೀಡಿದರು. ಈ ಜೋಡಿ 37 ರನ್ಗಳ ಕಾಣಿಕೆ ನೀಡಿತು.
ಮೋಸಿಸ್ ಹೆನ್ರಿಕ್ಯೂಸ್ 21 ಎಸೆತಗಳಲ್ಲಿ 19 ರನ್ ಗಳಿಸಿ ಔಟ್ ಆದರು. ಇತ್ತ ತಂಡದ ಗೆಲುವಿಗೆ ಹೋರಾಟ ನಡೆಸುತ್ತಿದ್ದ ಮಿಚೆಲ್ ಮಾರ್ಷ್ ಕೂಡ 42 ಎಸೆತಗಳಲ್ಲಿ 54 ರನ್ ಬಾರಿಸಿ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಯಾರೂ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬಂದ ಬೆನ್ನಲ್ಲೆ ಪೆವಿಲಿಯನ್ ಸೇರಿಕೊಂಡಿರು. ಅಂತಿಮವಾಗಿ ಆಸ್ಟ್ರೇಲಿಯಾ 19.2 ಓವರ್ನಲ್ಲೇ 140 ರನ್ಗೆ ಸರ್ವಪತನ ಕಂಡಿತು. ವಿಂಡೀಸ್ ಪರ ಹೇಡನ್ ವಾಲ್ಶ್ 3 ವಿಕೆಟ್ ಕಿತ್ತರು.
Before Hetmyer departed he left us with this beauty. Thanks Hettie! #WIvAUS #MissionMaroon pic.twitter.com/wPI4LAsqwb
— Windies Cricket (@windiescricket) July 11, 2021
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ವಿಂಡೀಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತಾದರು ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೇರ್ ಸ್ಫೋಟಕ ಆಟ ತಂಡಕ್ಕೆ ನೆರವಾಯಿತು. 36 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಿಡಿಸಿ ಹೆಟ್ಮೇರ್ 61 ರನ್ ಚಚ್ಚಿದರು. ಡಿಜೆ ಬ್ರಾವೋ 34 ಎಸೆತಗಳಲ್ಲಿ ಅಜೇಯ 47 ಮತ್ತು ಆಂಡ್ರೆ ರಸೆಲ್ ಅಜೇಯ 25 ರನ್ ಬಾರಿಸಿ ತಂಡದ ಮೊತ್ತವನ್ನು 196ಕ್ಕೆ ತಂದಿಟ್ಟರು.
56 ರನ್ಗಳ ಭರ್ಜರಿ ಜಯದೊಂದಿಗೆ 2-0 ಮುನ್ನಡೆ ಸಾಧಿಸಿರುವ ವೆಸ್ಟ್ ಇಂಡೀಸ್ ಸರಣಿ ವಶಪಡಿಸಿಕೊಳ್ಳುವ ಪ್ಲಾನ್ನಲ್ಲಿದೆ. ಇತ್ತ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಫಿಂಚ್ ಪಡೆ ರಣತಂತ್ರ ಹೇರಬೇಕಿದೆ. ಮೂರನೇ ಟಿ-20 ಪಂದ್ಯ ಜುಲೈ 12 ಸೋಮವಾರದಂದು ನಡೆಯಲಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರನ ಸಾರ್ವಕಾಲಿಕ IPL XI ನಲ್ಲಿ ಧೋನಿಗಿಲ್ಲ ಸ್ಥಾನ: ಯಾರೆಲ್ಲಾ ಇದ್ದಾರೆ?
ನ್ಯೂಜಿಲೆಂಡ್ ಕ್ರಿಕೆಟಿಗನಿಂದ ಡೈವ್ ಹೊಡೆದು ಊಹಿಸಲಾಗದ ಕ್ಯಾಚ್: ಇಲ್ಲಿದೆ ರೋಚಕ ವಿಡಿಯೋ
Published On - 1:35 pm, Sun, 11 July 21