ಕೇವಲ 7 ರನ್​ಗಳಿಗೆ ಆಲ್​ಔಟ್! 8 ಬ್ಯಾಟ್ಸ್‌ಮನ್‌ಗಳ ಶೂನ್ಯ ಸಾಧನೆ; ಸುಲಭವಾಗಿ ಗೆದ್ದ ಎದುರಾಳಿ.. ಹೇಗಿತ್ತು ಗೊತ್ತಾ ಆ ಪಂದ್ಯ?

ಇಡೀ ತಂಡವು ಕೇವಲ 8 ಓವರ್‌ಗಳನ್ನು ಆಡಿತು ಆದರೆ ಕೇವಲ 7 ರನ್‌ಗಳಿಸಲಷ್ಟೇ ಶಕ್ತವಾಯಿತು. 8 ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ತಂಡದ ಇಬ್ಬರು ಬ್ಯಾಟ್ಸ್‌ಮನ್‌ಗಳು 2 ರನ್ ಗಳಿಸಿದರು.

ಕೇವಲ 7 ರನ್​ಗಳಿಗೆ ಆಲ್​ಔಟ್! 8 ಬ್ಯಾಟ್ಸ್‌ಮನ್‌ಗಳ ಶೂನ್ಯ ಸಾಧನೆ; ಸುಲಭವಾಗಿ ಗೆದ್ದ ಎದುರಾಳಿ.. ಹೇಗಿತ್ತು ಗೊತ್ತಾ ಆ ಪಂದ್ಯ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on: Jul 11, 2021 | 3:50 PM

ಅಂದಹಾಗೆ, ಟಿ 20 ಪಂದ್ಯಾವಳಿ ಕ್ರಿಕೆಟ್‌ನ ಕಡಿಮೆ ಸ್ವರೂಪವಾಗಿದೆ. ಆದರೆ ನಾವು ಇನ್ನೂ ಸ್ವಲ್ಪ ಕಡಿಮೆ ಸ್ವರೂಪದ ಕ್ರಿಕೆಟ್ ಬಗ್ಗೆ ಮಾತನಾಡಿದರೆ ಟಿ 10 ಕೂಡ ಇದೆ. ಆದರೆ, ಈ ಪಂದ್ಯವು ಅದಕ್ಕಿಂತ ಚಿಕ್ಕದಾಗಿದೆ. ನೀವು ಪಂದ್ಯವನ್ನು ವೀಕ್ಷಿಸಲು ಮೈದಾನದತ್ತ ಹೊರಟಿರುವಾಗಲೇ ಪಂದ್ಯದ ಪಲಿತಾಂಶ ಹೊರಬಿದ್ದಿದ್ದರೆ ನಿಮಗೆ ಏನನಿಸಬೇಡ. ಈ ಪಂದ್ಯವೂ ಹಾಗೇ ಇತ್ತು. ನಾವು ಕ್ರಿಕೆಟ್‌ನ ಪ್ರತಿಯೊಂದು ಹಂತದಲ್ಲೂ ಕಡಿಮೆ ಪಂದ್ಯಗಳ ಬಗ್ಗೆ ಮಾತನಾಡಿದರೆ, ಖಂಡಿತವಾಗಿಯೂ ಈ ಪಂದ್ಯವನ್ನು ಉಲ್ಲೇಖಿಸಬಹುದು. ಟಿ 10 ಕ್ರಿಕೆಟ್​ನಲ್ಲಿ 2 ಇನ್ನಿಂಗ್ಸ್‌ಗಳನ್ನು ಒಟ್ಟುಗೂಡಿಸಿ 120 ಎಸೆತಗಳನ್ನು ಆಡಲಾಗುತ್ತದೆ. ಆದರೆ ಇಲ್ಲಿ ಎರಡೂ ಇನ್ನಿಂಗ್ಸ್ ಕೇವಲ 56 ಎಸೆತಗಳಲ್ಲಿ ಕೊನೆಗೊಂಡಿತು. ಕ್ರಿಕೆಟ್‌ನ ಈ ಸಣ್ಣ ಪಂದ್ಯವನ್ನು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಯಾರ್ಕ್‌ಷೈರ್ ಪ್ರೀಮಿಯರ್ ಲೀಗ್‌ನ ಡಿವಿಷನ್ ಫೋರ್ ಪಂದ್ಯದಲ್ಲಿ ಆಡಲಾಯಿತು. ಈ ಪಂದ್ಯವು ಈಸ್ಟರಿಂಗ್ಟನ್ ಕ್ಲಬ್ ಮತ್ತು ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ನಡುವೆ ನಡೆಯಿತು.

ಪಂದ್ಯದಲ್ಲಿ, ಹಿಲಮ್ ಮತ್ತು ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿದರು. ಆದರೆ ಸ್ಕೋರ್ ಬೋರ್ಡ್​ ಅನ್ನು ಬದಲಾಯಿಸುವುದಕ್ಕೂ ಅವಕಾಶ ಕೊಡದಂತೆ ತಂಡದ ಆಟಗಾರರು ತಮ್ಮ ವಿಕೆಟ್‌ ಒಪ್ಪಿಸಲಾರಂಭಿಸಿದರು. ಈಸ್ಟರ್ಟನ್ ಕ್ಲಬ್‌ ತಂಡಕ್ಕೆ ಮೂರನೇ ಬೌಲರ್ ಕೂಡ ಅಗತ್ಯವಿರಲಿಲ್ಲ. ಅವರ ತಂಡದ ಇಬ್ಬರು ಬೌಲರ್‌ಗಳೇ ಹಿಲಮ್ ಮತ್ತು ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್‌ನ 10 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್​ಗಟ್ಟಿದರು. ಇಡೀ ತಂಡವು ಕೇವಲ 8 ಓವರ್‌ಗಳನ್ನು ಆಡಿತು ಆದರೆ ಕೇವಲ 7 ರನ್‌ಗಳಿಸಲಷ್ಟೇ ಶಕ್ತವಾಯಿತು. 8 ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ತಂಡದ ಇಬ್ಬರು ಬ್ಯಾಟ್ಸ್‌ಮನ್‌ಗಳು 2 ರನ್ ಗಳಿಸಿದರು. 3 ರನ್ ಹೆಚ್ಚುವರಿ ಸಿಕ್ಕಿತು. ಈಸ್ಟರ್ಟನ್ ಕ್ಲಬ್ ಬೌಲರ್ ನಾಥನ್ ಕ್ರೀಗರ್ 4 ಓವರ್‌ಗಳಲ್ಲಿ 3 ರನ್‌ಗಳಿಗೆ 7 ಬ್ಯಾಟ್ಸ್‌ಮನ್‌ಗಳನ್ನು ಬಲಿಪಡೆದರು.

ಗೆಲ್ಲಲು 7 ರನ್ ಗುರಿ ಗೆಲುವಿಗೆ ಬೇಕಾದ 8 ರನ್‌ಗಳ ಗುರಿಯನ್ನು ಬೆನ್ನಟ್ಟುವ ಸರದಿ ಈಗ. ಈಸ್ಟರಿಂಗ್ಟನ್‌ನ ಆರಂಭಿಕ ಆಟಗಾರರು ಕೇವಲ 1.2 ಓವರ್‌ಗಳಲ್ಲಿ ಈ ಕೆಲಸವನ್ನು ಬಹಳ ನಾಜೂಕ್ಕಾಗಿ ಪೂರ್ಣಗೊಳಿಸಿದರು. ಅಂದರೆ, ಅವರು 8 ಎಸೆತಗಳಲ್ಲಿ 8 ರನ್ ಗಳಿಸಿದರು. ಈ ರೀತಿಯಾಗಿ ಅವರು 10 ವಿಕೆಟ್‌ಗಳಿಂದ ದೊಡ್ಡ ಗೆಲುವು ದಾಖಲಿಸಿದರು. ಈಸ್ಟರಿಂಗ್ಟನ್‌ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಜೇಮ್ಸ್, ಎಲ್ಲಾ 8 ಎಸೆತಗಳನ್ನು ಒಂಟಿಯಾಗಿ ಎದುರಿಸಿ ಒಂದು ಬೌಂಡರಿಯೊಂದಿಗೆ 7 ರನ್ ಗಳಿಸಿದರು. ಒಂದು ರನ್ ಹೆಚ್ಚುವರಿಯಾಗಿ ಬಂದಿತು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್