Copa America Final: ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟಿನಾ

ಅರ್ಜೆಂಟಿನಾ ತಂಡದ ಗೆಲುವಿನ ಗೋಲು 22ನೇ ನಿಮಿಷದಲ್ಲಿ ರೊಡ್ರಿಗೋ ಡಿ ಪಾಲ್, ಏಂಜೆಲ್ ಡಿ ಮಾರಿಯಾ ಅವರಿಗೆ ಲಾಂಗ್ ಪಾಸ್ ನೀಡಿದ ನಂತರ ಬಂತು.

Copa America Final: ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟಿನಾ
Copa America
Follow us
TV9 Web
| Updated By: Vinay Bhat

Updated on: Jul 11, 2021 | 10:02 AM

ಕೋಪಾ ಅಮೆರಿಕಾ ಫುಟ್​ಬಾಲ್ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಬ್ರೆಜಿಲ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ ಅರ್ಜೆಂಟಿನಾ ಬರೋಬ್ಬರಿ 28 ವರ್ಷಗಳ ನಂತರ ಮಹತ್ವದ ಅಂತರರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಅಂತರರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ಆಗಿ ಬ್ರೆಜಿಲ್ 1993 ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದಾದ ಬಳಿಕ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರಲಿಲ್ಲ. ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರಿಗೂ ಇದು ಪ್ರಥಮ ಮಹತ್ವದ ಅಂತರರಾಷ್ಟ್ರೀಯ ಟ್ರೋಫಿಯಾಗಿದೆ.

ಭಾರೀ ಕುತೂಹಲ ಕೆರಳಿಸಿದ್ದ ಫೈನಲ್‌ ಪಂದ್ಯದಲ್ಲಿ ಮೆಸ್ಸಿಯ ಪ್ರದರ್ಶನವು ಹಿಂದಿನ ಪಂದ್ಯಗಳಂತೆ ಪ್ರಭಾವಶಾಲಿಯಾಗಿ ಮೂಡಿಬರಲಿಲ್ಲ. 88ನೇ ನಿಮಿಷದಲ್ಲಿ ಗೋಲ್ ದಾಖಲಿಸುವ ಅವಕಾಶ ಇತ್ತಾದರೂ ಬ್ರೆಜಿಲ್‌ನ ಗೋಲ್‌ಕೀಪರ್ ಅವರನ್ನು ತಡೆದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಅರ್ಜೆಂಟಿನಾ ತಂಡದ ಗೆಲುವಿನ ಗೋಲು 22ನೇ ನಿಮಿಷದಲ್ಲಿ ರೊಡ್ರಿಗೋ ಡಿ ಪಾಲ್, ಏಂಜೆಲ್ ಡಿ ಮಾರಿಯಾ ಅವರಿಗೆ ಲಾಂಗ್ ಪಾಸ್ ನೀಡಿದ ನಂತರ ಬಂತು. ಪಂದ್ಯಾವಳಿಯಲ್ಲಿ ಬ್ರೆಜಿಲ್ ಬಿಟ್ಟುಕೊಟ್ಟ ಮೂರನೇ ಗೋಲು ಇದಾಗಿತ್ತು.

ಈ ರೋಚಕ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಸಂಭ್ರಮಾಚರಣೆಯಲ್ಲಿ ತೊಡಗಿದ ಅರ್ಜೆಂಟಿನಾ ತಂಡದ ಆಟಗಾರರು ಮೆಸ್ಸಿಯನ್ನು ಹಿಡಿದು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದರು. ಈ ಮೂಲಕ ಫುಟ್ಬಾಲ್ ಜಗತ್ತಿನಲ್ಲಿ ಅತ್ಯಂತ ಮಹತ್ವದ ಟ್ರೋಫಿಯನ್ನು ಲಿಯೋನೆಲ್ ಮೆಸ್ಸಿ ಹಾಗೂ ಅವರ ತಂಡ ಗೆದ್ದು ತಮ್ಮದಾಗಿಸಿತು.

ಕೊಲಂಬಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಶೂಟೌಟ್​ನಲ್ಲಿ 3-2 ಅಂತರದಿಂದ ಜಯಭೇರಿ ಬಾರಿಸಿ ಫೈನಲ್ ಪ್ರವೇಶ ಪಡೆದಿಯತ್ತು.

Tokyo Olympics: ನಿಮ್ಮ ದೇಶಕ್ಕೆ ವಾಪಸ್ ಹೋಗಿ, ನಮಗೆ ಒಲಂಪಿಕ್ಸ್ ಬೇಡ; ಹೆಚ್ಚಾಯ್ತು ಜಪಾನಿಗರ ಪ್ರತಿಭಟನೆ

ಮಂಡಳಿ ವಿರುದ್ಧ ಆರೋಪ; ಪಾಕ್ ಮಾಜಿ ಕ್ರಿಕೆಟಿಗನ ಮಾಸಿಕ ಪಿಂಚಣಿ ರದ್ದು ಮಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್