ಮಂಡಳಿ ವಿರುದ್ಧ ಆರೋಪ; ಪಾಕ್ ಮಾಜಿ ಕ್ರಿಕೆಟಿಗನ ಮಾಸಿಕ ಪಿಂಚಣಿ ರದ್ದು ಮಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಪಾಕಿಸ್ತಾನದ ಕ್ರಿಕೆಟ್‌ನ ಚಿತ್ರಣವನ್ನು ಕೆಡಿಸದಂತೆ ಮಂಡಳಿಯಿಂದ ಈ ಹಿಂದೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ಪಿಸಿಬಿ ಮೂಲವೊಂದು ತಿಳಿಸಿದೆ. ಆದರೆ ಅನುಭವಿ ಬೌಲರ್ ಅದನ್ನು ಎಂದಿಗೂ ಸ್ವೀಕರಿಸಲಿಲ್ಲ.

ಮಂಡಳಿ ವಿರುದ್ಧ ಆರೋಪ; ಪಾಕ್ ಮಾಜಿ ಕ್ರಿಕೆಟಿಗನ ಮಾಸಿಕ ಪಿಂಚಣಿ ರದ್ದು ಮಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿ
Follow us
| Updated By: ಆಯೇಷಾ ಬಾನು

Updated on: Jul 11, 2021 | 7:38 AM

ಪಾಕಿಸ್ತಾನ ಕ್ರಿಕೆಟ್‌ನ ಅನೇಕ ಮಾಜಿ ಅನುಭವಿ ಆಟಗಾರರು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಡುವೆ ಆಗಾಗ್ಗೆ ಒಳಜಗಳು ಕಂಡುಬರುತ್ತದೆ. ಕ್ರಿಕೆಟಿಗ ಎಷ್ಟು ಶ್ರೇಷ್ಠನಾಗಿದ್ದರೂ, ಮಂಡಳಿಯೊಂದಿಗಿನ ಅವನ ಜಗಳವು ಆತನನ್ನು ಆರೋಪಿಯನ್ನಾಗಿಸಿಬಿಡುತ್ತದೆ. ಇತ್ತೀಚಿನ ಪ್ರಕರಣದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಸರ್ಫರಾಜ್ ನವಾಜ್ ಅವರು ಮಂಡಳಿಯಲ್ಲಿನ ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಶಿಕ್ಷೆ ವಿಧಿಸಲಾಗಿದೆ. 1970 ರ ವೇಗದ ಬೌಲರ್ ಆಟಗಾರರ ಕಲ್ಯಾಣ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪಿಸಿಬಿ ಅವರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು ನಿಲ್ಲಿಸಿದೆ. 72 ವರ್ಷದ ಸರ್ಫರಾಜ್ ನವಾಜ್ ಕೂಡ ಇದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಿವರ್ಸ್ ಸ್ವಿಂಗ್‌ನಂತಹ ಪರಿಣಾಮಕಾರಿ ಚೆಂಡನ್ನು ಕ್ರಿಕೆಟ್ ಜಗತ್ತಿಗೆ ನೀಡಿದ ನವಾಜ್, 1969 ಮತ್ತು 1984 ರ ನಡುವೆ ಪಾಕಿಸ್ತಾನವನ್ನು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದರು. ನವಾಜ್ ಅವರ ಹೇಳಿಕೆಗಳಿಂದಾಗಿ ಚರ್ಚೆಯಲ್ಲಿ ಉಳಿದಿದ್ದಾರೆ. ನವಾಜ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೀತಿಗಳು ಪ್ರಶ್ನಿಸುವುದು ಮತ್ತು ಖಂಡಿಸುವುದು ಅವರ ಕೆಲಸವಾಗಿದೆ. ಸ್ಪಷ್ಟವಾಗಿ ಪಿಸಿಬಿ ಈ ಎಲ್ಲ ಆರೋಪಗಳನ್ನು ಅಲ್ಲಗಳೆದು ಸರ್ಫರಾಜ್ ಅವರಿಗೆ ನೀಡುತ್ತಿದ್ದ ಪಿಂಚಣಿಯನ್ನು ನಿಲ್ಲಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮತ್ತು ಮಂಡಳಿಗೆ ಅವಮಾನ ಪಾಕಿಸ್ತಾನ ಮಂಡಳಿಯ ವಿಶ್ವಾಸಾರ್ಹ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ, ಮಂಡಳಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಆಟಗಾರರ ಕಲ್ಯಾಣ ನೀತಿಯ ಉಲ್ಲಂಘನೆಯಾಗಿದೆ. ಜೊತೆಗೆ ಅವರು ಮಂಡಳಿಯ ಅಧಿಕಾರಿಗಳು ಮತ್ತು ಆಟಗಾರರನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ ಮತ್ತು ಅವಮಾನಿಸುತ್ತಿದ್ದಾರೆ. ಹೀಗಾಗಿ ಸರ್ಫರಾಜ್ ಅವರ ಪಿಂಚಣಿಯನ್ನು ಮಂಡಳಿಯ ಅಧಿಕಾರಿಗಳು ನಿಲ್ಲಿಸಿದ್ದಾರೆ. ನವಾಜ್ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಮಂಡಳಿ ಮತ್ತು ರಾಷ್ಟ್ರೀಯ ತಂಡದ ಆಟಗಾರರ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸುವ ಅಭ್ಯಾಸವನ್ನು ಅವರು ಹೊಂದಿದ್ದಾರೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್‌ನ ಚಿತ್ರಣವನ್ನು ಕೆಡಿಸದಂತೆ ಮಂಡಳಿಯಿಂದ ಈ ಹಿಂದೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ಪಿಸಿಬಿ ಮೂಲವೊಂದು ತಿಳಿಸಿದೆ. ಆದರೆ ಅನುಭವಿ ಬೌಲರ್ ಅದನ್ನು ಎಂದಿಗೂ ಸ್ವೀಕರಿಸಲಿಲ್ಲ. ಹೀಗಾಗಿ ಈಗ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ಪಾಕಿಸ್ತಾನ ಪರ 55 ಟೆಸ್ಟ್ ಆಡಿದ್ದಾರೆ ಸರ್ಫರಾಜ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಬಗ್ಗೆಗಿನ ವಿಮರ್ಶಾತ್ಮಕ ಟೀಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಆಟಗಾರರು ಮತ್ತು ಅಧಿಕಾರಿಗಳ ವಿರುದ್ಧ ಪಂದ್ಯ ಮತ್ತು ಸ್ಪಾಟ್ ಫಿಕ್ಸಿಂಗ್ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಜಿ ವೇಗದ ಬೌಲರ್ ಪಾಕಿಸ್ತಾನ ಪರ 55 ಟೆಸ್ಟ್ ಮತ್ತು 45 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಖಾತೆಯಲ್ಲಿ 177 ವಿಕೆಟ್ ಪಡೆದರೆ, ಏಕದಿನ ಪಂದ್ಯಗಳಲ್ಲಿ 63 ವಿಕೆಟ್ ಪಡೆದಿದ್ದರು. ಸರ್ಫರಾಜ್ ಕೂಡ ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟ್ಸ್‌ಮನ್ ಎಂದು ಸಾಬೀತಾಗಿದೆ. 4 ಅರ್ಧಶತಕಗಳನ್ನು ಒಳಗೊಂಡಂತೆ ಸಾವಿರಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದರು.

ಇದನ್ನೂ ಓದಿ: ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಪಡೆದಿರುವ ಭಾರತೀಯರು ಮತ್ತು ಅವರು ಪ್ರತಿನಿಧಿಸಲಿರುವ ಕ್ರೀಡೆಯ ವಿವರ ಇಲ್ಲಿದೆ