19 ರನ್​ಗೆ 6 ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋಲುಂಡ ಆಸ್ಟ್ರೇಲಿಯಾ: ವಿಂಡೀಸ್​ಗೆ ರೋಚಕ ಜಯ: ವಿಡಿಯೋ

| Updated By: Vinay Bhat

Updated on: Jul 10, 2021 | 3:03 PM

ಈ ಸಂದರ್ಭ ರೋಚಕತೆ ಪಡೆದ ಪಂದ್ಯವನ್ನು ಸಂಪೂರ್ಣ ವಿಂಡೀಸ್ ಪರ ವಾಲಿಸಿದ್ದುಒಬೆಡ್ ಮೆಖಾಯ್. 10.3 ಓವರ್​​ಗೆ 108 ರನ್​ಗೆ 5 ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿಬಹುದಾಗಿದ್ದ ಆಸ್ಟ್ರೇಲಿಯಾಕ್ಕೆ ಸೋಲಿನ ಹಾದಿ ತೋರಿಸಿದ್ದು ಮೆಖಾಯ್.

19 ರನ್​ಗೆ 6 ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋಲುಂಡ ಆಸ್ಟ್ರೇಲಿಯಾ: ವಿಂಡೀಸ್​ಗೆ ರೋಚಕ ಜಯ: ವಿಡಿಯೋ
WI vs Aus 1st T20I
Follow us on

ಕೆರಿಬಿಯನ್ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವೆಸ್ಟ್​ ಇಂಡೀಸ್ ವಿರುದ್ಧ ಟಿ-20 ಸರಣಿ ಆಡುತ್ತಿದೆ. ಭಾರತದ ಕಾಲ ಮಾನದ ಪ್ರಕಾರ ಇಂದು ಮುಂಜಾನೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ತಂಡ 18 ರನ್​ಗಳ ರೋಚಕ ಜಯ ಸಾಧಿಸಿದೆ. ಒಂದುಹಂತದಲ್ಲಿ ಸುಲಭ ಜಯ ಸಾಧಿಸುವಲ್ಲಿದ್ದ ಕಾಂಗರೂ ಪಡೆ ಕೊನೆ ಕ್ಷಣದಲ್ಲಿ ಕೇವಲ 19 ರನ್​ಗೆ ಉಳಿದ 6 ವಿಕೆಟ್​ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ವೆಸ್ಟ್​ ಇಂಡೀಸ್ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರೂ ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆ ಕಂಡಿತು. ಓಪನರ್​ಗಳಾದ ಎವಿನ್ ಲೆವಿಸ್ ಸೊನ್ನೆ ಸುತ್ತಿದರೆ ಲೆಂಡಲ್ ಸಿಮನ್ಸ್ 27 ರನ್​ಗೆ ಔಟ್ ಆದರು. ಕ್ರಿಸ್ ಗೇಲ್ ಆಟ 4 ರನ್​ಗೆ, ಶಿಮ್ರೋನ್ ಹೆಟ್ಮೇರ್ 20 ರನ್​ಗೆ ನಿರ್ಗಮಿಸಿದರು. ನಿಕೋಲಸ್ ಪೂರನ್ ಕೂಡ 17 ರನ್​ಗೆ ಸುಸ್ತಾದರು.

ಬಳಿಕ ಅಂತಿಮ ಹಂತದಲ್ಲಿ ಶುರುವಾಗಿದ್ದು ಆಂಡ್ರೊ ರಸೆಲ್ ಆರ್ಭಟ. ಆಸೀಸ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ರಸೆಲ್ ಕೇವಲ 28 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಿಡಿಸಿ 51 ರನ್ ಚಚ್ಚಿ ಕೊನೆಯ ಓವರ್​ನಲ್ಲಿ ಔಟ್ ಆದರು. ಪರಿಣಾಮ ವೆಸ್ಟ್​ ಇಂಡೀಸ್ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ಆಸೀಸ್ ಪರ ಜೋಷ್ ಹ್ಯಾಜ್ಲೆವುಡ್ 3 ವಿಕೆಟ್ ಪಡೆದರು.

146 ರನ್​ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲಿ ನಾಯಕ ಆ್ಯರೋನ್ ಫಿಂಚ್(4) ವಿಕೆಟ್ ಕಳೆದುಕೊಂಡಿತಾದರೂ 2ನೇ ವಿಕೆಟ್​ಗೆ ಮ್ಯಾಥ್ಯೂ ವೇಡ್(33) ಮತ್ತು ಮಿಚೆಲ್ ಮಾರ್ಶ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಪವರ್ ಪ್ಲೇ ಓವರ್ ನಲ್ಲಿ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ವೇಡ್ ನಿರ್ಗಮನದ ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಅಷ್ಟೇನು ಪರಿಣಾಮಕಾರಿಯಾಗಿ ಗೋಚರಿಸಲಿಲ್ಲ. ಮಾರ್ಶ್​ಗೆ ಸಾಥ್ ನೀಡಲಿಲ್ಲ.

ಜೋಷ್ ಫಿಲಿಪ್ 1, ಬೆನ್ ಮೆಕ್​ಡೆರ್ಮಾಟ್ 2 ರನ್​ಗೆ ಸುಸ್ತಾದರು. ಮಿಚೆಲ್ ಮಾರ್ಷ್ ಕೂಡ 31 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ 51 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ರೋಚಕತೆ ಪಡೆದ ಪಂದ್ಯವನ್ನು ಸಂಪೂರ್ಣ ವಿಂಡೀಸ್ ಪರ ವಾಲಿಸಿದ್ದುಒಬೆಡ್ ಮೆಖಾಯ್. 10.3 ಓವರ್​​ಗೆ 108 ರನ್​ಗೆ 5 ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿಬಹುದಾಗಿದ್ದ ಆಸ್ಟ್ರೇಲಿಯಾಕ್ಕೆ ಸೋಲಿನ ಹಾದಿ ತೋರಿಸಿದ್ದು ಮೆಖಾಯ್.

ಕೇವಲ 15.6 ಓವರ್​ಗೆ 127 ರನ್ ಗಳಿಸಿ ಆಸ್ಟ್ರೇಲಿಯಾವನ್ನು ಆಲೌಟ್ ಮಾಡುವಲ್ಲಿ ಮೆಖಾಯ್ ಪ್ರಮುಖ ಪಾತ್ರವಹಿಸಿದರು. 4 ಓವರ್ ಬೌಲಿಂಗ್ ಮಾಡಿದ ಇವರು 26 ರನ್ ನೀಡಿ 4 ವಿಕೆಟ್ ಕಿತ್ತರು. 18 ರನ್​ಗಳ ಗೆಲುವಿನೊಂದಿಗೆ ವೆಸ್ಟ್​ ಇಂಡೀಸ್ 5 ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟಿ-20 ಜುಲೈ 10ಕ್ಕೆ ಅಂದರೆ ಭಾರತದ ಕಾಲಮಾನದ ಪ್ರಕಾರ ಜುಲೈ 11 ಮುಂಜಾನೆ 5 ಗಂಟೆಗೆ ಆರಂಭವಾಗಲಿದೆ.

IPL 2022 ರಲ್ಲಿ ಧೋನಿ ಆಡದಿದ್ರೆ ನಾನೂ ಕಣಕ್ಕಿಳಿಯಲ್ಲ ಎಂದ CSKಯ ಸ್ಟಾರ್ ಆಟಗಾರ

ಸಿಕ್ಸ್ ಲೈನ್ ಬಳಿ ಸೂಪರ್ ಮ್ಯಾನ್​ನಂತೆ ಹಾರಿದ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ: ರೋಚಕ ವಿಡಿಯೋ ಇಲ್ಲಿದೆ