India vs Australia Test Cricket 2020 | ಚುಟುಕು ಸಮರದಲ್ಲಿ ರನ್ ಮಳೆ ಹರಿಸಿದ್ದ ರಾಹುಲ್​ಗಿಲ್ಲ ಸ್ಥಾನ

|

Updated on: Dec 25, 2020 | 5:47 PM

ವಿರಾಟ್ ಕೊಹ್ಲಿಗೆ ಪರ್ಯಾಯವಾಗಿ ಕೆ.ಎಲ್. ರಾಹುಲ್​ರನ್ನು ಕಣಕ್ಕಿಳಿಸಬಹುದೆಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದರು. ಹನುಮಾ ವಿಹಾರಿ ಬದಲಿಗೆ ರಾಹುಲ್‌ಗೆ ಅವಕಾಶ ಸಿಗಬಹುದೆಂಬ ಊಹಾಪೋಹಗಳು ಇದ್ದವು.

India vs Australia Test Cricket 2020 | ಚುಟುಕು ಸಮರದಲ್ಲಿ ರನ್ ಮಳೆ ಹರಿಸಿದ್ದ ರಾಹುಲ್​ಗಿಲ್ಲ ಸ್ಥಾನ
ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಆಡುತ್ತಿರುವ ಆಟಗಾರ ಶೀಘ್ರದಲ್ಲೇ ಟೆಸ್ಟ್‌ನಲ್ಲಿ ಸ್ಥಾನ ಪಡೆಯುವ ಭರವಸೆಯಲ್ಲಿದ್ದಾರೆ. ರಾಹುಲ್ ಪ್ರಸ್ತುತ ಟಿ 20 ಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Follow us on

ಮೆಲ್ಬೋರ್ನ್ ಟೆಸ್ಟ್​ಗಾಗಿ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ಅಡಿಲೇಡ್‌ನಲ್ಲಿ ಆಡಿದ ಮೊದಲ ಟೆಸ್ಟ್‌ಗೆ ಹೋಲಿಸಿದರೆ ಈ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಭಾರತ ತಂಡದ ಆಡಳಿತ ಮಂಡಳಿ 4 ಬದಲಾವಣೆಗಳನ್ನು ಮಾಡಿದೆ.

ಆದರೆ, ಕ್ರಿಕೆಟ್ ಅಭಿಮಾನಿಗಳು ಹೆಚ್ಚು ನಿರೀಕ್ಷಿಸುತ್ತಿದ್ದ ಆಟಗಾರನಿಗೆ ಮಂಡಳಿ ಮಣೆ ಹಾಕಿಲ್ಲ. ವಿರಾಟ್ ಕೊಹ್ಲಿಗೆ ಪರ್ಯಾಯವಾಗಿ ಕೆ.ಎಲ್. ರಾಹುಲ್​ರನ್ನು ಕಣಕ್ಕಿಳಿಸಬಹುದೆಂದು ಕ್ರಿಕೆಟ್ ಪಂಡಿತರು ಉಲ್ಲೇಖಿಸುತ್ತಿದ್ದರು. ಜೊತೆಗೆ ಹನುಮಾ ವಿಹಾರಿ ಬದಲಿಗೆ ರಾಹುಲ್‌ಗೆ ಅವಕಾಶ ಸಿಗಬಹುದೆಂಬ ಊಹಾಪೋಹಗಳು ಇದ್ದವು. ಅದು ಮಾತ್ರವಲ್ಲದೇ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ರಾಹುಲ್​ ಉತ್ತಮ ಆಯ್ಕೆ ಎನ್ನಲಾಗಿತ್ತು. ಆದರೆ ಭಾರತ ತಂಡದ ಆಯ್ಕೆ ಮಂಡಳಿಯ ಚಿಂತನೆ ಕ್ರಿಕೆಟ್​ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಶುಭಮನ್​ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ ಮತ್ತು ಸಿರಾಜ್ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ರಾಹುಲ್ ಇನ್ನೂ ಸ್ವಲ್ಪ ದಿನ ಬೆಂಚ್ ಕಾಯಲೇಬೇಕಾಗಿದೆ. ಸದ್ಯಕ್ಕೆ ಆಡಳಿತ ಮಂಡಳಿ ಹನುಮಾ ವಿಹಾರಿಯನ್ನು ಆಡುವ ಹನ್ನೊಂದರಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಿರುವುದೇ ರಾಹುಲ್​ ಆಯ್ಕೆಗೆ ಮುಳುವಾಗಿದೆ.

ಶಾರ್ಟ್ ಫಾರ್ಮ್ಯಾಟ್‌ನಲ್ಲಿ ಹೆಚ್ಚು ರನ್ ಗಳಿಸುತ್ತಿರುವ ಕೆ.ಎಲ್.ರಾಹುಲ್, ಟೆಸ್ಟ್ ಕ್ರಿಕೆಟ್​ನಲ್ಲಿ 26 ಪಂದ್ಯಗಳನ್ನಾಡಿದ್ದು, 34.58 ರ ಸರಾಸರಿಯಲ್ಲಿ 2006 ರನ್ ಗಳಿಸಿದ್ದಾರೆ. ಅದರಲ್ಲಿ 5 ಶತಕಗಳು ಮತ್ತು 11 ಅರ್ಧಶತಕಗಳು ಸೇರಿವೆ. ಆಶ್ಚರ್ಯಕರ ಸಂಗತಿಯೆಂದರೆ, ರಾಹುಲ್​ ಬ್ಯಾಟ್‌ನಿಂದ ಹೊರಬಂದ 5 ಟೆಸ್ಟ್ ಶತಕಗಳಲ್ಲಿ, 3 ಶತಕಗಳು ವಿದೇಶಿ ನೆಲದಲ್ಲೇ ಸಿಡಿದಿವೆ.

ರಾಹುಲ್ ಆಯ್ಕೆಗೆ ಮುಳುವು
ಇಂತಹ ಅದ್ಭುತ ಪ್ರದರ್ಶನದ ಹೊರತಾಗಿಯೂ ರಾಹುಲ್ ನಿಯಮಿತವಾಗಿ ಟೀಮ್ ಇಂಡಿಯಾದ ಟೆಸ್ಟ್ ತಂಡದ ಭಾಗವಾಗಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ಎರಡು ಪ್ರಮುಖ ಕಾರಣಗಳು ಸಿಗುತ್ತವೆ. ರಾಹುಲ್​ ಹೆಚ್ಚು ರನ್​ಗಳಿಸಿರುವುದು ಆರಂಭಿಕ ಆಟಗಾರನಾಗಿ. ಆದರೆ ಈಗಾಗಲೇ ಓಪನರ್​ ಸ್ಥಾನ ಭರ್ತಿಯಾಗಿದೆ. ಎರಡನೆಯದಾಗಿ, ರಾಹುಲ್​ ಏಕದಿನ ಮತ್ತು ಟೆಸ್ಟ್​ ಪಂದ್ಯಗಳನ್ನ ಹೆಚ್ಚಾಗಿ ಆಡಿಲ್ಲ.

ರಾಹುಲ್ 2020 ರಲ್ಲಿ ಭಾರತಕ್ಕಾಗಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸಹ ಆಡಲಿಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಬಂಗಾಳದ ವಿರುದ್ಧ ಕೇವಲ ಒಂದು ಪಂದ್ಯವನ್ನು ಆಡಿರುವ ರಾಹುಲ್ ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಿಂದ ಕೇವಲ 26 ರನ್ ಗಳಿಸಿದ್ದಾರೆ. ಈ ವರ್ಷ ಚುಟುಕು ಕ್ರಿಕೆಟ್​ನಲ್ಲಿ ರಾಹುಲ್ ಸಾಕಷ್ಟು ರನ್ ಗಳಿಸಿದ್ದಾರೆ. ಈ ಚುಟುಕು ಕ್ರಿಕೆಟ್​ ಪ್ರದರ್ಶನ ಆಯ್ಕೆ ಮಂಡಳಿಯ ಹೃದಯ ಗೆಲ್ಲುವಲ್ಲಿ ವಿಫಲವಾಗಿದೆ.

India vs Australia Test Cricket 2020 | ಬಾಕ್ಸಿಂಗ್ ಡೇ ಟೆಸ್ಟ್‌; ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲ್ಲಿದೆ ಭಾರತ

Published On - 5:40 pm, Fri, 25 December 20