India vs England: ಥರ್ಡ್ ಅಂಪೈರ್​ಗೆ ‘ನನಗೆ ಗೊತ್ತಾಗುತ್ತಿಲ್ಲ’ ಎಂದು ಹೇಳುವ ಆಪ್ಷನ್ ಯಾಕಿಲ್ಲ ಅಂತ ಪ್ರಶ್ನಿಸಿದ ಕೊಹ್ಲಿ

|

Updated on: Mar 19, 2021 | 10:53 PM

ಗುರುವಾರದಂದು ನಡೆದ ಪಂದ್ಯದಲ್ಲಿ ಥರ್ಡ್​ ಅಂಪೈರ್​ ಎಸಗಿದ ಪ್ರಮಾದಗಳು ಪ್ರವಾಸಿ ತಂಡಕ್ಕೆ ಪ್ರಯೋಜನಕಾರಿಯಾದವು ಅಂತ ಕೊಹ್ಲಿ ಹೇಳಿದರು.

India vs England: ಥರ್ಡ್ ಅಂಪೈರ್​ಗೆ ‘ನನಗೆ ಗೊತ್ತಾಗುತ್ತಿಲ್ಲ’ ಎಂದು ಹೇಳುವ ಆಪ್ಷನ್ ಯಾಕಿಲ್ಲ ಅಂತ ಪ್ರಶ್ನಿಸಿದ ಕೊಹ್ಲಿ
ದಾವಿದ ಮಲಾನ್ ಕ್ಯಾಚ್ ಮಾಡಿದ ಬಾಲು ನೆಲಕ್ಕೆ ತಾಕಿದೆ!
Follow us on

ಗುರುವಾರದಂದು ಅಹಮದಾಬಾದಿನಲ್ಲಿ ನಡೆದ 4 ನೇ ಟಿ20ಐ ಪಂದ್ಯದಲ್ಲಿ 8ರನ್​ಗಳ ರೋಮಾಂಚಕ ಮತ್ತು ಅರ್ಹ ಜಯ ಪಡೆದ ಭಾರತ ಸರಣಿಯನ್ನು 2-2 ಸಮವಾಗಿಸಿಕೊಂಡಿದೆ. ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ನಾಳೆ (ಶನಿವಾರ) ಅಹಮದಾಬಾದಿನ ಅದೇ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. 4ನೇ ಪಂದ್ಯದಲ್ಲಿ ಉತ್ಕೃಷ್ಟ ಪ್ರದರ್ಶನಗಳನ್ನು ನೀಡಿದ ಸೂರ್ಯಕುಮಾರ್ ಯಾದವ್ ಮತ್ತು ತಮ್ಮ ಕೋಟಾದ 4 ಓವರ್​ಗಳಲ್ಲಿ ಕೇವಲ 16 ರನ್ ನೀಡಿ 2 ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ ಅವರನ್ನು ಭಾರತದೆಲ್ಲೆಡೆ ಕೊಂಡಾಡಲಾಗುತ್ತಿದೆ.

ಈ ಪಂದ್ಯವನ್ನು ಮನೆಗಳಲ್ಲಿ ಟಿವಿ ಮುಂದೆ ಕೂತು ವೀಕ್ಷಿಸಿದವರು ಒಂದು ವಿಶೇಷ ಸಂಗತಿಯನ್ನು ಗಮನಿಸಿರಬಹುದು. ಇಂಗ್ಲೆಂಡ್ ಬ್ಯಾಟ್ ಮಾಡುವಾಗ ಕೊನೆಯ ಓವರ್​ಗಳಲ್ಲಿ ಟೀಮಿನ ನಾಯಕತ್ವವನ್ನು ಉಪನಾಯಕ ರೋಹಿತ್ ಶರ್ಮ ನಿಭಾಯಿಸಿದರು. ಕ್ಯಾಪ್ಟನ್ ವಿರಾಟ್​ ಕೊಹ್ಲಿ ಟೀಮಿನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್​ ಅವರೊಂದಿಗೆ ಡಗ್​ಔಟ್​ನಲ್ಲಿ ಕೂತು ಪಂದ್ಯವನ್ನು ನೋಡುತ್ತಿದ್ದರು. ಹಾಗೆ ನೋಡಿದರೆ, ಕೊಹ್ಲಿಗೆ ಫೀಲ್ಡಿಂಗ್ ಮಾಡುವಾಗ ಅಥವಾ ಬ್ಯಾಟಿಂಗ್ ಮಾಡುವಾಗ ಗಾಯವೇನೂ ಆಗಿರಲಿಲ್ಲ. ಹಾಗಾದರೆ, ಆಚೆ ಹೋಗಿದ್ದೇಕೆ?

ಈ ಪ್ರಶ್ನೆ ಎಲ್ಲರನ್ನೂ ಕಾಡಿದ್ದು ನಿಜ. ಆದರೆ ಯಾಕೆ ಹೋಗಿದ್ದೆ ಅನ್ನುವುದನ್ನು ಖುದ್ದು ಕೊಹ್ಲಿಯೇ ವಿವರಿಸಿದ್ದಾರೆ.

ವಿರಾಟ್ ಕೊಹ್ಲಿ ಪ್ರತಿಕ್ರಿಯೆ

‘ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲ್​ ಹಿಂದೆ ಓಡಿ, ತಡೆದು ವಾಪಸ್ಸು ಎಸೆಯುವಾಗ ಕಾಲು ಉಳುಕಿದಂತಾಯಿತು. ಅದು ಗಾಯದಲ್ಲಿ ಪರಿವರ್ತನೆಯಾದೀತು ಎಂಬ ಆತಂಕದಲ್ಲಿ ನಾನು ಡ್ರೆಸಿಂಗ್ ರೂಮಿಗೆ ವಾಪಸ್ಸು ಹೋದೆ. ನಾವು ಮತ್ತೊಂದು ಪಂದ್ಯವನ್ನು ಆಡಬೇಕಿರುವುದರಿಂದ ರಿಸ್ಕ್ ತೆಗೆದುಕೊಳ್ಳುವುದ ಬೇಡ ಅಂತ ಅನಿಸಿದ್ದರಿಂದ ಹಾಗೆ ಮಾಡಬೇಕಾಯಿತು,’ ಎಂದು ಕೊಹ್ಲಿ ಪಂದ್ಯದ ನಂತರ ಹೇಳಿದರು.

ಗುರುವಾರದಂದು ನಡೆದ ಪಂದ್ಯದಲ್ಲಿ ಥರ್ಡ್​ ಅಂಪೈರ್​ ಎಸಗಿದ ಪ್ರಮಾದಗಳು ಪ್ರವಾಸಿ ತಂಡಕ್ಕೆ ಪ್ರಯೋಜನಕಾರಿಯಾದವು ಅಂತ ಕೊಹ್ಲಿ ಹೇಳಿದರು.

‘ಟೆಸ್ಟ್​ ಸರಣಿಯುತ್ತಿದ್ದಾಗಲೂ ಇಂಥದೊಂದು ಸಂದರ್ಭ ಎದುರಾಗಿತ್ತು. ಜಿಂಕ್ಸ್ (ಅಜಿಂಕ್ಯಾ ರಹಾನೆ) ಚೆಂಡನ್ನು ಕ್ಯಾಚ್​ಮಾಡಿದಾಗ ಅವರಿಗೆ ಕ್ಲೀನಾಗಿ ಕ್ಯಾಚ್​ ಮಾಡಿದೆನೋ ಇಲ್ಲವೋ ಅಂತ ಗೊಂದಲವಿತ್ತು, ಹಾಗಾಗೇ ನಾವು ಥರ್ಡ್ ಅಂಪೈರ್ ನೆರವು ಕೇಳಿದೆವು. ಕ್ಯಾಚ್​ ಮಾಡಿದ ಬಗ್ಗೆ ಖುದ್ದು ಫೀಲ್ಟರ್​ನಲ್ಲೇ ಗೊಂದಲವಿದ್ದರೆ ಅದನ್ನು ಸ್ಕ್ವೇರ್​ಲೆಗ್ ಅಂಪೈರ್ ಹೇಗೆ ನೋಡಿಯಾನು?’ ಎಂದು ಕೊಹ್ಲಿ ಹೇಳಿದರು.

‘ಇಂಥ ಸಂದರ್ಭಗಳಲ್ಲೇ ಸಾಫ್ಟ್ ಸಿಗ್ನಲ್ ಬಹಳ ಮಹತ್ವ ಪಡೆದುಕೊಳ್ಳುತ್ತದೆ ಮತ್ತು ಅದು ಪೇಚಿಗೆ ಸಿಕ್ಕಿಸುವಂಥದ್ದೂ ಹೌದು. ನಿಚ್ಚಳವಾದ ಪ್ರೂಫ್ ಇಲ್ಲದಾದಾಗ ಥರ್ಡ್ ಅಂಪೈರ್​ಗೆ ‘ನನಗೂ ಗೊತ್ತಾಗುತ್ತಿಲ್ಲ’ ಎಂದು ಹೇಳುವ ಆಪ್ಷನ್ ಯಾಕೆ ನೀಡಬಾರದು?’ ಎಂದು ಕೊಹ್ಲಿ ಪ್ರಶ್ನಿಸಿದರು.

‘ಇಂಥ ನಿರ್ಣಯಗಳು ಪಂದ್ಯದ ಅದರಲ್ಲೂ ವಿಶೇಷವಾಗಿ ಇಂಥ ಕಿರು ಆವೃತ್ತಿಯ ಪಂದ್ಯಗಳ ದಿಕ್ಕನ್ನೇ ಬದಲಾಯಿಸಿಬಿಡುತ್ತವೆ. ಇವತ್ತಿನ ಪಂದ್ಯದಲ್ಲಿ ತೊಂದರೆ ಅನುಭವಿಸಿದವರು ನಾವು. ನಾಳೆ ಮತ್ತಿನ್ಯಾವುದೋ ತಂಡ ಇದೇ ಸ್ಥಿತಿಯನ್ನು ಎದುರಿಸಬೇಕಾಗಬಹದು,’ ಎಂದು ಕೊಹ್ಲಿ ಹೇಳಿದರು.

ಗುರುವಾರದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಥರ್ಡ್​ ಅಂಪೈರ್ ಎಸಗಿದ ಪ್ರಮಾದಕ್ಕೆ ಬಲಿಯಾದರು. ಸ್ಯಾಮ್ ಕರನ್ ಅವರ ಎಸೆತವನ್ನು ಅವರು ಫೈನ್​ಲೆಗ್​ ಕಡೆ ಪುಲ್ ಮಾಡಿದಾಗ ಅಲ್ಲಿದ್ದ ದಾವಿದ್ ಮಲಾನ್ ಅದನ್ನು ಕ್ಲೀನಾಗಿ ಕ್ಯಾಚ್​ ಮಾಡಲಿಲ್ಲ. ಚೆಂಡು ನೆಲಕ್ಕೆ ತಾಕಿದ್ದು ಗೊತ್ತಾಗುವಂತಿತ್ತು. ಹತ್ತಾರು ಬಾರಿ ರೀಪ್ಲೇಗಳನ್ನು ನೋಡಿದ ಥರ್ಡ್ ಅಂಪೈರ್ ಆನ್-ಫೀಲ್ಡ್ ಅಂಪೈರ್ ನೀಡಿದ ಸಾಫ್ಟ್ ಸಿಗ್ನಲ್​ ಅನ್ನು ಎತ್ತಿ ಹಿಡಿದರು.

ವಾಷಿಂಗ್ಟನ್ ಸುಂದರ್ ಸಹ ಅಂಥದ್ದೇ ಪ್ರಮಾದಿಂದ ಪೆವಿಲಿಯನ್​ಗೆ ಮರಳಬೇಕಾಯಿತು. ಆದಿಲ್ ರಶೀದ್ ಕ್ಯಾಚ್​ ಮಾಡಿದಾಗ ಅವರ ಕಾಲು ಬೌಂಡರಿ ಹಗ್ಗವನ್ನು ತುಳಿದಿದ್ದು ಕಾಣಿಸುತ್ತಿತ್ತು. ನಿಚ್ಚಳವಾದ ಪ್ರೂಪ್ ಇಲ್ಲ ಅಂತ ಭಾವಿಸಿದ ಥರ್ಡ್ ಅಂಪೈರ್ ಸಾಫ್ಟ್​ ಸಿಗ್ನಲ್ ಎತ್ತಿ ಹಿಡಿದರು.

ಇದನ್ನೂ ಓದಿ: India vs England: 3ನೇ ಅಂಪೈರ್​ ಕೆಟ್ಟ ತೀರ್ಪಿಗೆ ಸೂರ್ಯ ಕುಮಾರ್​ ಔಟ್​..​ ಸಾಫ್ಟ್​ ಸಿಗ್ನಲ್ ಬಗ್ಗೆ ಕಿಡಿಕಾರಿದ ಮಾಜಿ ಕ್ರಿಕೆಟಿಗರು!

Published On - 9:45 pm, Fri, 19 March 21