ದೆಹಲಿ: ಪುರುಷರ ಕ್ರಿಕೆಟ್ನಲ್ಲಿ ಏಕದಿನ ಪಂದ್ಯಾವಳಿ ಆರಂಭವಾಗಿ 50 ವರ್ಷ ಸಂದಿದೆ. ಕ್ರಿಕೆಟ್ ಜಗತ್ತಿನ ಪಂಚಾಂಗ ಎಂದೇ ಪರಿಗಣಿತವಾಗಿರುವ ವಾರ್ಷಿಕ ಪ್ರಕಟಣೆಯ ವಿಸ್ಡನ್ ಅಲ್ಮನಾಕ್ ಪ್ರತಿ 10 ವರ್ಷಕ್ಕೊಮ್ಮೆ ದಶಕದ ಅತ್ಯುತ್ತಮ ಏಕದಿನ ಪಂದ್ಯಾವಳಿ ಆಟಗಾರನನ್ನು (ODI player of each decade) ಆಯ್ಕೆ ಮಾಡುತ್ತಾ ಬಂದಿದೆ. ವಿವಿಯನ್ ರಿಚರ್ಡ್ಸ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಮುತ್ತಯ್ಯ ಮುರಳೀಧರನ್ ಮತ್ತು ವಿರಾಟ್ ಕೊಹ್ಲಿ.. ಹೀಗೆ ಇದುವರೆಗಿನ ಒಟ್ಟಿ ಸಾಗುತ್ತದೆ. ಪಟ್ಟಿಯಲ್ಲಿ ನಾನಾ ಕಾಲಘಟ್ಟದಲ್ಲಿ ಅಂದ್ರೆ 1980ರ ದಶಕ, 1990ರ ದಶಕ ಮತ್ತು 2010ರ ದಶಕದಲ್ಲಿ ಅನುಕ್ರಮವಾಗಿ ಭಾರತೀಯ ಕ್ರಿಕೆಟಿಗರು ಸ್ಥಾನ ಪಡೆದಿರುವುದು ಸಂಭ್ರಮಿಸುವ ವಿಷಯವಾಗಿದೆ. ವಿಸ್ಡನ್ ಅಲ್ಮನಾಕ್ (Wisden Almanack) ಬೈಬಲ್ ಆಫ್ ಕ್ರಿಕೆಟ್ ಎಂದು ಪರಿಗಣಿತವಾಗಿದೆ. ಇದನ್ನು 1864ರಲ್ಲಿ ಜಾನ್ ವಿಸ್ಡನ್ ಸ್ಥಾಪಿಸಿದರು.
ಈ ವಿಸ್ಡನ್ ಅಲ್ಮನಾಕ್ ಪುಸ್ತಕದ ತಾಜಾ ಬೆಳವಣಿಗೆ ಏನಪ್ಪಾ ಅಂದ್ರೆ 2010ರ ದಶಕದಲ್ಲಿ ಏಕದಿನ ಕ್ರಿಕೆಟ್ನ ಅನಭಿಷಕ್ತ ದೊರೆಯಾಗಿ ಭಾರತೀಯ ಕ್ರಿಕೆಟ್ನ ಹಾಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗುರುತಿಸಲ್ಪಟ್ಟಿದ್ದಾರೆ. ಆದರೆ ಕೊಹ್ಲಿ ಹಾಗೆ ಆಯ್ಕೆಯಾದ ಬೆನ್ನಲ್ಲೇ ಬುಧವಾರದಂದು ಪಾಕಿಸ್ತಾನದ ಬಾಬರ್ ಅಜಂಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ಸ್ಥಾನವನ್ನು ಕಳೆದುಕೊಂಡರು.
ಆಯಾ ದಶಕದ ಗ್ರೇಟೆಸ್ಟ್ ಒಡಿಐ ಆಟಗಾರರ ಬಗ್ಗೆ ಹೇಳುವುದಾದರೆ..
ಆಟಗಾರ | ದೇಶ | ದಶಕ |
ವಿವಿಯನ್ ರಿಚರ್ಡ್ಸ್ | ವೆಸ್ಟ್ ಇಂಡೀಸ್ | 1970 |
ಕಪಿಲ್ ದೇವ್ | ಭಾರತ | 1980 |
ಸಚಿನ್ ತೆಂಡೂಲ್ಕರ್ | ಭಾರತ | 1990 |
ಮುತ್ತಯ್ಯ ಮುರಳೀಧರ್ | ಶ್ರೀಲಂಕಾ | 2000 |
ವಿರಾಟ್ ಕೊಹ್ಲಿ | ಭಾರತ | 2010 |
ಇಡೀ ದಶಕದುದ್ದಕ್ಕೂ 32 ವರ್ಷದ ಅದ್ಭುತ ಆಟಗಾರ ವಿರಾಟ್ ಕೊಹ್ಲಿ ಈ ವಿಸ್ಡನ್ ಅಲ್ಮನಾಕ್ ಪುಸ್ತಕದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿದ್ದರು. ವಿರಾಟ್ ಕೊಹ್ಲಿ ಏಕ ದಿನ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 2008 ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸ್ಥಾನ ಪಡೆದರು. ಅದಾದ ಮೇಲೆ ಕೊಹ್ಲಿ ಇದುವರೆಗೂ 254 ಪಂದ್ಯಗಳನ್ನು ಆಡಿದ್ದು12,169 ರನ್ ಕಲೆಹಾಕಿದ್ದಾರೆ. ದಾಖಲಾರ್ಹ ಸಂಗತಿಯೆಂದ್ರೆ ವಿಸ್ಡನ್ ಅಲ್ಮನಾಕ್ನ ನಾಲ್ಕೂ ಏಕದಿನ ಕ್ರಿಕೆಟ್ ದಿಗ್ಗಜರ ಪೈಕಿ ವಿರಾಟ್ ಕೊಹ್ಲಿ ಸರಾಸರಿ ಅತ್ಯುತ್ತಮವಾಗಿದೆ. ವಿರಾಟ್ ಕೊಹ್ಲಿ ಬಹುಶಃ ಸಚಿನ್ ತೆಂಡೂಲ್ಕರ್ ಅವರ ಸರಾಸರಿಯನ್ನೂ ಮೀರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಆಟಗಾರ | ಪಂದ್ಯಗಳು | ರನ್/ವಿಕೆಟ್ | ಸರಾಸರಿ | ಸ್ಟ್ರೈಕ್ ರೇಟ್ |
ವಿವಿಯನ್ ರಿಚರ್ಡ್ಸ್ | 187 | 6721 | 47 | 90.2 |
ಕಪಿಲ್ ದೇವ್ | 225 | 3783 | 23.79 | 95.1 |
ಸಚಿನ್ ತೆಂಡೂಲ್ಕರ್ | 463 | 18,425 | 44.83 | 86.2 |
ವಿರಾಟ್ ಕೊಹ್ಲಿ | 254 | 12,169 | 50.07 | 93.2 |
ಇತರೆ ಪ್ರತಿಷ್ಠಿತರ ಬಗ್ಗೆ ಹೇಳುವುದಾರೆ..
ವಿಸ್ಡನ್ ಅಲ್ಮನಾಕ್ ಪ್ರಕಟಣೆಯು ಬೆನ್ ಸ್ಟೋಕ್ಸ್ ಅವರನ್ನು ಸತತವಾಗಿ ಎರಡನೆಯ ವರ್ಷಕ್ಕೆ ‘ಕ್ರಿಕೆಟರ್ ಆಫ್ ದಿ ಇಯರ್’ ಆಯ್ಕೆ ಮಾಡಿದೆ. ಇನ್ನು ಮಹಿಳಾ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾದ ಬೆತ್ ಮೂನಿ ಮುಂಚೂಣಿ ಆಟಗಾರ್ತಿ ಎಂದು ಗುರುತಿಸಲ್ಪಟ್ಟಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರ ಕೈರೆನ್ ಪೊಲ್ಲಾರ್ಡ್ ಅವರನ್ನು ವಿಶ್ವದ ಅತ್ಯುತ್ತಮ ಟಿ20 ಕ್ರಿಕೆಟರ್ ಎಂದು ಆಯ್ಕೆ ಮಾಡಿದೆ.
WISDEN AWARDS
THE FIVE CRICKETERS OF THE YEAR#Zakcrawley @jaseholder98 @iMRizwanPak @DomSibley #Darrenstevens https://t.co/cnz7A6m2ia#Cricket #wisden21 pic.twitter.com/I7SYHUJAmo— Wisden Almanack (@WisdenAlmanack) April 14, 2021