WPL Auction 2025: ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ

|

Updated on: Dec 15, 2024 | 8:40 PM

2025ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮಿನಿ ಹರಾಜಿನಲ್ಲಿ 120 ಆಟಗಾರ್ತಿಯರ ಪೈಕಿ 19 ಮಂದಿ ಮಾರಾಟವಾಗಿದ್ದಾರೆ. ಸಿಮ್ರಾನ್ ಶೇಖ್ 1.90 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ ತಂಡ ಸೇರಿದರೆ, ಪ್ರೇಮಾ ರಾವತ್ 1.2 ಕೋಟಿ ರೂ.ಗೆ ಆರ್‌ಸಿಬಿ ಸೇರಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಇತರ ತಂಡಗಳು ಕೂಡ ಹಲವಾರು ಆಟಗಾರ್ತಿಯರನ್ನು ಖರೀದಿಸಿವೆ. ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

WPL Auction 2025: ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ
ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ
Follow us on

ಭಾನುವಾರ ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್ (WPL) ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 120 ಆಟಗಾರ್ತಿಯರ ಪೈಕಿ 19 ಆಟಗಾರ್ತಿಯರು ಸೋಲ್ಡ್ ಆಗಿದ್ದಾರೆ. ಇನ್ನು ನಾಲ್ವರು ಆಟಗಾರ್ತಿಯರು ಒಂದು ಕೋಟಿ ರೂ. ಅಧಿಕ ಬೆಲೆಗೆ ಮಾರಾಟವಾಗುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್​​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಹಾಗಾದರೆ ಯಾವ ತಂಡಗಳು ಯಾವೆಲ್ಲಾ ಆಟಗಾರ್ತಿಯರು ಖರೀದಿಸಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಅನ್‌ಕ್ಯಾಪ್ಡ್ ಭಾರತೀಯರಾದ ಸಿಮ್ರಾನ್ ಶೇಖ್​ 1. 90 ಕೋಟಿ ರೂ. ಗುಜರಾತ್ ಜೈಂಟ್ಸ್​​ ತಂಡದ ಪಾಲಾಗಿದ್ದಾರೆ. ಮುಂಬೈ ಇಂಡಿಯನ್ಸ್ 16 ವರ್ಷದ ಜಿ ಕಮಲಿನಿ 1.60 ಕೋಟಿ ರೂ. ಮುಂಬೈ ಇಂಡಿಯನ್ಸ್ ಸೇರಿದ್ದು, ಪ್ರೇಮಾ ರಾವತ್ 1.2 ಕೋಟಿ ರೂ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಡಿಯಾಂಡ್ರಾ ಡಾಟಿನ್ 1.7 ಕೋಟಿ ರೂ. ಗುಜರಾತ್ ಜೈಂಟ್ಸ್ ತಂಡ ಖರೀದಿಸಿದೆ.

ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

  • ಸಿಮ್ರಾನ್ ಶೇಖ್ – 1.90 ಕೋಟಿ ರೂ. ಗುಜರಾತ್ ಜೈಂಟ್ಸ್​
  • ಡಿಯಾಂಡ್ರಾ ಡಾಟಿನ್ – ರೂ 1.70 ಕೋಟಿ – ಗುಜರಾತ್ ಜೈಂಟ್ಸ್​
  • ಜಿ ಕಮಲಿನಿ – ರೂ 1.60 ಕೋಟಿ – ಮುಂಬೈ ಇಂಡಿಯನ್ಸ್​​
  • ಪ್ರೇಮಾ ರಾವತ್ – ರೂ 1.2 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಎನ್ ಚರಣಿ – ರೂ 55 ಲಕ್ಷ – ದೆಹಲಿ ಕ್ಯಾಪಿಟಲ್ಸ್​​
  • ನಡಿನ್ ಡಿ ಕ್ಲರ್ಕ್ – ರೂ 30 ಲಕ್ಷ – ಮುಂಬೈ ಇಂಡಿಯನ್ಸ್​
  • ಡೇನಿಯಲ್ ಗಿಬ್ಸನ್ – 30 ಲಕ್ಷ ರೂ – ಗುಜರಾತ್ ಜೈಂಟ್ಸ್​
  • ಅಲಾನಾ ಕಿಂಗ್ – 30 ಲಕ್ಷ ರೂ. – ಯುಪಿ ವಾರಿಯರ್ಜ್​
  • ಅಕ್ಷಿತಾ ಮಹೇಶ್ವರಿ – 20 ಲಕ್ಷ ರೂ. – ಮುಂಬೈ ಇಂಡಿಯನ್ಸ್​​
  • ನಂದಿನಿ ಕಶ್ಯಪ್ – ರೂ 10 ಲಕ್ಷ – ದೆಹಲಿ ಕ್ಯಾಪಿಟಲ್ಸ್​
  • ಅರುಷಿ ಗೋಸ್ – ರೂ 10 ಲಕ್ಷ – ಯುಪಿ ವಾರಿಯರ್ಜ್​
  • ಕ್ರಾಂತಿ ಗೌಡ್ – ರೂ 10 ಲಕ್ಷ – ಯುಪಿ ವಾರಿಯರ್ಜ್​​
  • ಸಂಸ್ಕೃತಿ ಗುಪ್ತಾ – ರೂ 10 ಲಕ್ಷ – ಮುಂಬೈ ಇಂಡಿಯನ್ಸ್​
  • ಜೋಶಿತಾ ವಿಜೆ – 10 ಲಕ್ಷ ರೂ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಸಾರಾ ಬ್ರೈಸ್ – ರೂ 10 ಲಕ್ಷ – ದೆಹಲಿ ಕ್ಯಾಪಿಟಲ್ಸ್​
  • ರಾಘ್ವಿ ಬಿಸ್ಟ್ – ರೂ 10 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಜಾಗರವಿ ಪವಾರ್ – 10 ಲಕ್ಷ ರೂ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ನಿಕಿ ಪ್ರಸಾದ್ – ರೂ 10 ಲಕ್ಷ – ದೆಹಲಿ ಕ್ಯಾಪಿಟಲ್ಸ್​
  • ಪ್ರಕಾಶಿಕಾ ನಾಯಕ್ – 10 ಲಕ್ಷ ರೂ. – ಗುಜರಾತ್ ಜೈಂಟ್ಸ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:37 pm, Sun, 15 December 24