ನೀವು ದೊಡ್ಡ ಬ್ಯಾಟರಿ, ಉತ್ತಮ ಡಿಸ್ ಪ್ಲೇ, ಕ್ಯಾಮೆರಾದ ಹೊಸ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ ಇಲ್ಲೊಂದು ಆಯ್ಕೆಯಿದೆ. ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಸ್ಯಾಮ್‌ಸಂಗ್ (Samsung) ಇದೀಗ ತನ್ನ ಫೋನೊಂದನ್ನು 10,000 ರೂ. ಒಳಗೆ ಮಾರಾಟ ಮಾಡುತ್ತಿದೆ. ಕಳೆದ ಜೂನ್ನಲ್ಲಿ ಭಾರತದಲ್ಲಿ ಸ್ಯಾಮ್‌ಸಂಗ್ ಬಜೆಟ್ ಬೆಲೆಗೆ ಗ್ಯಾಲಕ್ಸಿ ಎಫ್13 (Samsung Galaxy F13) ಫೋನನ್ನು ಲಾಂಚ್ ಮಾಡಿತ್ತು. ಬರೋಬ್ಬರಿ 6000mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿರುವ ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಈ ಫೋನು ಈಗ ಶೇ. 33 ರಷ್ಟು ರಿಯಾಯಿತಿ ಪಡೆದುಕೊಂಡು ಸೇಲ್ ಕಾಣುತ್ತಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ ಭಾರತದಲ್ಲಿ 14,999 ರೂ. ಗೆ ಬಿಡುಗಡೆ ಆಗಿತ್ತು. ಇದೀಗ 5,000 ರೂ. ಗಳ ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಕೇವಲ 9999 ರೂ. ಗೆ ಮಾರಾಟ ಆಗುತ್ತಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಪುನಃ 500 ರೂ. ರಿಯಾಯಿತಿ ಪಡೆಯಬಹುದು.
ಈ ಫೋನ್ 6.6 ಫುಲ್ ಹೆಚ್‌ಡಿ + LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಪಡೆದುಕೊಂಡಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಗೀರುಗಳಿಂದ ರಕ್ಷಣೆಯನ್ನು ಪಡೆಯಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಎಕ್ಸಿನೋಸ್ 850 ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ RAM ಪ್ಲಸ್ ಟೆಕ್ನಾಲಜಿಯನ್ನು ಹೊಂದಿದ್ದು, ಹೆಚ್ಚಿನ RAM ಸಾಮರ್ಥ್ಯವನ್ನು ನೀಡಲು ಐಡಲ್ ಸ್ಟೋರೇಜ್ ಅನ್ನು ಬಳಸಲಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.
ದೀರ್ಘ ಸಮಯ ಬಾಳಿಕೆ ಬರುವ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲುಟೂತ್ v5.0, ವೈಫೈ, ಯುಎಸ್‌ಬಿ ಪೋರ್ಟ್, 3.5ಮಿ.ಮೀ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.
Published On - 1:20 pm, Mon, 10 October 22