ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಭರ್ಜರಿ ಮೇಳಗಳು ಮತ್ತೊಮ್ಮೆ ಆರಂಭವಾಗಿದೆ. ಇದೀಗ ಅಮೇಜಾನ್ನಲ್ಲಿ ಅಮೆಜಾನ್ ಎಂಐ ಡೇಸ್ ಸೇಲ್ (Amazon MI Days Sale) ಪ್ರಾರಂಭಗೊಂಡಿದೆ. ಈಗಾಗಲೇ ಈ ಸೇಲ್ ಲೈವ್ ಆಗಿದ್ದು ಮಾರ್ಚ್ 23 ರವರೆಗೆ ನಡೆಯಲಿದೆ. ಮಾರಾಟದ ಸಮಯದಲ್ಲಿ ಖರೀದಿದಾರರಿಗೆ ಶವೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು (Smartphone), ಎಲೆಕ್ಟ್ರಾನಿಕ್ಸ್ ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್ ಆಫರ್‌ಗಳನ್ನು ನೀಡಲಾಗಿದೆ. ನೀವು ಹೊಸ ರೆಡ್ಮಿ, ಎಂಐ ಸ್ಮಾರ್ಟ್ಫೋನ್ಗಳನ್ನು ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್ ಟೈಮ್ ಎನ್ನಬಹುದು. ಯಾಕಂದ್ರೆ ಈ ಸೇಲ್ನಲ್ಲಿ ಶವೋಮಿ ಕಂಪನಿಯ ಮೊಬೈಲ್ಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಅಮೆಜಾನ್ ಒದಗಿಸುತ್ತಿದೆ. ಇದರ ಜೊತೆಗೆ ಎಸ್‌ಬಿಐ ಬ್ಯಾಂಕ್ ಕಾರ್ಡ್ (SBI Bank Card) ಮೇಲೆ 1,000 ರೂ ವರೆಗೂ ರಿಯಾಯಿತಿ ತಿಳಿಸಿದೆ. ಹಾಗಾದ್ರೆ ಆಕರ್ಷಕ ಡಿಸ್ಕೌಂಟ್ ಪಡೆದುಕೊಂಡಿರುವ ಕೆಲ ಅತ್ಯುತ್ತಮ ಸ್ಮಾರ್ಟ್ಫೋನ್ಗಳಯ ಯಾವುವು ಎಂಬುದನ್ನು ನೋಡೋಣ.
ಶವೋಮಿ ಎಂಐ 11 ಲೈಟ್ NE 5G ಸ್ಮಾರ್ಟ್‌ಫೋನ್ ಇದೀಗ ಕೇವಲ 26,999 ರೂ. ಗೆ ಮಾರಾಟ ಆಗುತ್ತಿದೆ. ಈ ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಫುಲ್ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಬೆಂಬಲವನ್ನು ಒಳಗೊಂಡಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.
ರೆಡ್ಮಿ ನೋಟ್ 10s ಸ್ಮಾರ್ಟ್‌ಫೋನ್ ಇದೀಗ ಕೇವಲ 15,499 ರೂ. ಗೆ ಮಾರಾಟ ಆಗುತ್ತಿದೆ. ಈ ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ AMOLED ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಶವೋಮಿ 11T ಪ್ರೊ 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ರೆಡ್ಮಿ 9 ಆಕ್ಟಿವ್ ಸ್ಮಾರ್ಟ್‌ಫೋನ್ ಇದೀಗ ಕೇವಲ 11,499 ರೂ. ಗೆ ಮಾರಾಟ ಆಗುತ್ತಿದೆ. ಈ ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13 ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.
Oppo K10: ಭಾರತದಲ್ಲಿ ಧೂಳೆಬ್ಬಿಸಲು ಬಂತು ಬಜೆಟ್ ಬೆಲೆಯ ಒಪ್ಪೋ K10 ಸ್ಮಾರ್ಟ್‌ಫೋನ್
Realme GT Neo 3: 5 ನಿಮಿಷದಲ್ಲಿ 50% ಚಾರ್ಜ್: 150W ಫಾಸ್ಟ್ ಚಾರ್ಜರ್ನ ಹೊಸ ರಿಯಲ್ ಮಿ ಫೋನ್ ಬಿಡುಗಡೆ