Realme GT Neo 3: 5 ನಿಮಿಷದಲ್ಲಿ 50% ಚಾರ್ಜ್: 150W ಫಾಸ್ಟ್ ಚಾರ್ಜರ್ನ ಹೊಸ ರಿಯಲ್ ಮಿ ಫೋನ್ ಬಿಡುಗಡೆ
150W UltraDart fast charging phone: ಇದೀಗ ಶವೋಮಿಗೆ ಟಕ್ಕರ್ ಕೊಡಲು ರಿಯಲ್ ಮಿ ಕಂಪನಿ ಬಂದಿದೆ. ಹೌದು, ರಿಯಲ್ ಮಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ 150W ಫಾಸ್ಟ್ ಚಾರ್ಜರ್ನ ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.
ಅತ್ಯಂತ ವೇಗವಾಗಿ ಚಾರ್ಜ್ ಆಗುವ ಸ್ಮಾರ್ಟ್ಫೋನ್ಗಳಿಗೆ (Smatphone) ಈಗ ಬೇಡಿಕೆ ಹೆಚ್ಚಾಗುತ್ತಿದೆ. ನಿಧಾನವಾಗಿ ಚಾರ್ಜ್ ಆಗಿ ಬ್ಯಾಟರಿ ಫುಲ್ ಮಾಡಿಕೊಳ್ಳುವಷ್ಟು ತಾಳ್ಮೆ ಈಗಿನ ಹೆಚ್ಚಿನ ಜನರಿಗಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ಮೊಬೈಲ್ ಕಂಪನಿ ಕೂಡ ಫಾಸ್ಟ್ ಚಾರ್ಜಿಂಗ್ ಸ್ಮಾರ್ಟ್ಫೋನ್ನತ್ತ ಗಮನ ಹರಿಸುತ್ತಿದೆ. ಇತ್ತೀಚೆಗಷ್ಟೆ ಶವೋಮಿ (Xiaomi) ಕಂಪನಿ ತನ್ನ 120W ಫಾಸ್ಟ್ ಚಾರ್ಜಿಂಗ್ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಶವೋಮಿಗೆ ಟಕ್ಕರ್ ಕೊಡಲು ರಿಯಲ್ ಮಿ ಕಂಪನಿ ಬಂದಿದೆ. ಹೌದು, ರಿಯಲ್ ಮಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ 150W ಫಾಸ್ಟ್ ಚಾರ್ಜರ್ನ ರಿಯಲ್‌ಮಿ ಜಿಟಿ ನಿಯೋ 3 (Realme GT Neo 3) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ವೇಗದ ಚಾರ್ಜಿಂಗ್ ಜೊತೆಗೆ ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ.
ಏನು ವಿಶೇಷತೆ?:
ರಿಯಲ್ ಮಿ GT ನಿಯೋ 3 ಸ್ಮಾರ್ಟ್‌ಫೋನ್ ಅಧಿಕ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 6.43 ಇಂಚಿನ ಹೆಚ್‌ಡಿ + AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್ ನಿಂದ ಕೂಡಿದೆ. ಮೀಡಿಯಾ ಮೀಡಿಯಾ ಟೆಕ್ Dimensity 8100 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಆಧಾರಿತ ಕಾರ್ಯನಿರ್ವಹಿಸಲಿದೆ.
ಹಿಂಬದಿಯಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು ಇನ್ನು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.
ರಿಯಲ್ ಮಿ GT ನಿಯೋ 3 ಸ್ಮಾರ್ಟ್‌ಫೋನ್ ಎರಡು ಬ್ಯಾಟರಿ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಒಂದು 4,500 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದರೊಂದಿಗೆ 150W ಸಾಮರ್ಥ್ಯದ ಆಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದು ಕೇವಲ 5 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗುತ್ತಂತೆ. ಅಂತೆಯೆ 5000mAh ಸಾಮರ್ಥ್ಯದ ಬ್ಯಾಟರಿಗೆ 80W ಫಾಸ್ಟ್ ಚಾರ್ಜರ್ ಬೆಂಬಲ ನೀಡಲಾಗಿದ್ದು ಇದು 32 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗಲಿದೆ ಎಂದು ಕಂಪನಿ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್ V5.0, GPS ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಸೆನ್ಸಾರ್ ಅನ್ನು ಒಳಗೊಂಡಿದೆ.
ರಿಯಲ್‌ಮಿ GT ನಿಯೋ 3 ಫೋನ್ 6GB RAM ಮತ್ತು 128GB ರೂಪಾಂತರಕ್ಕೆ CNY 1,999, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 24,000 ರೂ. ಎನ್ನಬಹುದು. ಅಂತೆಯೆ 8GB RAM ಮತ್ತು 128GB ಮಾದರಿಗೆ CNY 2,299, ಭಾರತದಲ್ಲಿ ಅಂದಾಜು ಸುಮಾರು 27,500 ರೂ. ನಿಗದಿ ಮಾಡಲಾಗಿದೆ.
Redmi 10: ಇದೀಗ 10,999 ರೂಪಾಯಿಯ ರೆಡ್ಮಿ 10 ಖರೀದಿಗೆ ಲಭ್ಯ: ಆಫರ್ನಲ್ಲಿ ಸಿಗಲಿದೆ ಮತ್ತಷ್ಟು ಡಿಸ್ಕೌಂಟ್
WhatsApp: ಯಾರ ಕಣ್ಣಿಗೂ ಕಾಣಿಸದಂತೆ ವಾಟ್ಸ್ಆ್ಯಪ್ ಚಾಟ್ ಅನ್ನು ಶಾಶ್ವತವಾಗಿ ಹೈಡ್ ಮಾಡುವ ಟ್ರಿಕ್ ಗೊತ್ತೇ?