
ಭಾರತದಲ್ಲಿನ ಅತ್ಯಂತ ಜನಪ್ರಿಯ ಆನ್‌ಲೈನ್ ಚಂದಾದಾರಿಕೆ ಸೇವೆಗಳಲ್ಲಿ ಒಂದಾದ ಅಮೆಜಾನ್ ಪ್ರೈಮ್ (Amazon Prime) ಇನ್ಮುಂದೆ ಭಾರೀ ದುಬಾರಿಯಾಗಲು ಸಿದ್ಧವಾಗಿ. ಸದ್ಯಕ್ಕೆ ಅಮೆಜಾನ್ ಪ್ರೈಮ್ ತನ್ನ ಬಳಕೆದಾರರಿಗೆ ಮೂರು ರೀತಿಯ ಚಂದಾದಾರಿಕೆ ಯೋಜನೆಗಳನ್ನು ಹೊಂದಿದೆ. ಇದೀಗ ಭಾರತದಲ್ಲಿ ಪ್ರೈಮ್ ಚಂದಾದಾರಿಕೆ ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ಕಂಪನಿಯು ತನ್ನ FAQ ಪೇಜ್‌ನಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದೆ. ಇದೇ ಡಿಸೆಂಬರ್ 13, 2021 ರಂದು ರಾತ್ರಿ 11:59ಕ್ಕೆ ಪ್ರಸ್ತುತ ಅಥವಾ ಹಳೆಯ ಬೆಲೆಗಳು ಕೊನೆಗೊಳ್ಳುತ್ತದೆ. ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಚಂದಾದಾರಿಕೆಗಳು (Amazon Prime Subscription) ಸೇರಿದಂತೆ ಎಲ್ಲವೂ ದುಬಾರಿಯಾಗಲಿದ್ದು, ಅಮೆಜಾನ್ ಮಾಸಿಕ ಚಂದಾದಾರಿಕೆ ವೆಚ್ಚವು ಪ್ರಸ್ತುತ ರೂ 129 ರಿಂದ ರೂ 179 ಕ್ಕೆ ಬದಲಾಗಲಿದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ನಿಮ್ಮ ನಿಮ್ಮ ಅಮೆಜಾನ್ ಪ್ರೈಮ್ ಅವಧಿ ಮುಕ್ತಾಯಗೊಳ್ಳುತ್ತಿದ್ದರೆ ಬೇಗನೆ ರಿಚಾರ್ಜ್ ಮಾಡಿರಿ.
ಈಗಾಗಲೇ ಅಸ್ತಿತ್ವದಲ್ಲಿರುವ ವಾರ್ಷಿಕ ಪ್ರಧಾನ ಸದಸ್ಯತ್ವ, ಮಾಸಿಕ ಚಂದಾದಾರಿಕೆ ಸೇರಿದಂತೆ ತನ್ನ ಮೂರು ಚಂದಾದಾರಿಕೆ ಯೋಜನೆಗಳ ಬೆಲೆ ಹೆಚ್ಚಳವಾಗಲಿದೆಯಂತೆ. ಆದರೆ ಸೇವೆಯ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ. ಒಂದು ತಿಂಗಳ ಹಿಂದೆಯಷ್ಟೇ, ಅಮೆಜಾನ್ ಪ್ರೈಮ್ ತನ್ನ ಚಂದಾದಾರಿಕೆ ಬೆಲೆಯನ್ನು ಹೆಚ್ಚಿಸುವ ಬಗ್ಗೆ ದೃಢಪಡಿಸಿತ್ತು. ಆದರೆ, ಬದಲಾವಣೆಯ ನಿಖರವಾದ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆಗಳು ಡಿಸೆಂಬರ್ 13 ರಿಂದ ಏರಿಕೆಯಾಗುವುದು ಖಚಿತವಾಗಿದೆ.
ಅಮೆಜಾನ್ ಮಾಸಿಕ ಚಂದಾದಾರಿಕೆ ವೆಚ್ಚವು ಪ್ರಸ್ತುತ ರೂ. 129 ರಿಂದ ರೂ. 179 ಕ್ಕೆ ಬದಲಾಗಲಿದ್ದರೆ, ರೂ. 329 ಬೆಲೆಯ ತ್ರೈಮಾಸಿಕ ಚಂದಾದಾರಿಕೆಗಳು ರೂ. 459 ಕ್ಕೆ ಏರಿಕೆ ಮಾಡಲಾಗಿದೆ. ಅಂತೆಯೆ 999 ಬೆಲೆಯ ವಾರ್ಷಿಕ ಚಂದಾದಾರಿಕೆಗೆ 1,499 ರೂ. ವೆಚ್ಚವಾಗಲಿದೆ. ಹಾಗಾಗಿ, ಡಿಸೆಂಬರ್ 14 ರಿಂದ ಅಮೆಜಾನ್ ಪ್ರೈಮ್ ಭಾರತದಲ್ಲಿ ಎಂದಿಗಿಂತಲೂ ದುಬಾರಿಯಾಗಲಿದೆ.
ಅಮೆಜಾನ್ ಪ್ರೈಮ್ FAQ ಪೇಜ್ ಮಾಹಿತಿ ಪ್ರಕಾರ, ನಿಮ್ಮ ಉಚಿತ ಪ್ರಯೋಗ ಅಥವಾ ಸದಸ್ಯತ್ವ ಅವಧಿಯು ಕೊನೆಗೊಂಡ ದಿನದಿಂದ ಮುಂದಿನ ಸದಸ್ಯತ್ವ ಅವಧಿಗೆ ಅಮೆಜಾನ್ ಸ್ವಯಂಚಾಲಿತವಾಗಿ ಬಳಕೆದಾರರಿಗೆ ಶುಲ್ಕ ವಿಧಿಸುತ್ತದೆ ಈಗಾಗಲೇ “ಅಸ್ತಿತ್ವದಲ್ಲಿರುವ ಪ್ರೈಮ್ ಸದಸ್ಯರು ತಮ್ಮ ಸದಸ್ಯತ್ವ ಯೋಜನೆಯು ಪ್ರಸ್ತುತ ಬೆಲೆಯಲ್ಲಿರುವ ಅವಧಿಯವರೆಗೆ ತಮ್ಮ ಸದಸ್ಯತ್ವವನ್ನು ಮುಂದುವರಿಸಬಹುದು. ಆದಾಗ್ಯೂ, ಬೆಲೆ ಬದಲಾವಣೆಯ ನಂತರ, ಹೊಸ ಬೆಲೆಯಲ್ಲಿ ನಿಮ್ಮ ಸದಸ್ಯತ್ವವನ್ನು ನವೀಕರಿಸಬೇಕಾಗುತ್ತದೆ.
ಅಮೆಜಾನ್ ಇತ್ತಿಚಿಗೆ ಭಾರತದಲ್ಲಿ ಹೊಸದಾಗಿ ಪ್ರೈಮ್ ವಿಡಿಯೋ ಚಾನೆಲ್‌ಗಳನ್ನು ಆರಂಭಿಸಿತ್ತು. ತನ್ನ ಪ್ರೈಮ್ ವೀಡಿಯೋ ಚಾನೆಲ್‌ಗಳು ಪ್ರೈಮ್ ಸದಸ್ಯರಿಗೆ 8 OTT ಅಪ್ಲಿಕೇಶನ್‌ಗಳನ್ನು ಒಳಗೊಂಡಿವೆ. ಈ ಅಪ್ಲಿಕೇಶನ್‌ಗಳು ಚಂದಾದಾರಿಕೆಯನ್ನು ಹೊಂದಿದ್ದು, ಒಂದೇ ಸೂರಿನಡಿಯಲ್ಲಿ ಪ್ರವೇಶಿಸಲು ಅನುಮತಿಸಲಿವೆ. ಇವುಗಳಲ್ಲಿ ಡಿಸ್ಕವರಿ+, ಲಯನ್ಸ್‌ಗೇಟ್ ಪ್ಲೇ, ಡಾಕ್ಯುಬೇ, ಇರೋಸ್ ನೌ, ಮುಬಿಐ, ಹೊಯಿಚೊಯ್, ಮನೋರಮಾ ಮ್ಯಾಕ್ಸ್, ಮತ್ತು ಶಾರ್ಟ್ಸ್ ಟಿವಿಯಂತಹ ಸ್ಟ್ರೀಮಿಂಗ್ ಆಪ್‌ಗಳು ಸೇರಿವೆ.
WhatsApp Tricks: ವಾಟ್ಸ್ಆ್ಯಪ್ನಲ್ಲಿ ಆನ್‌ಲೈನ್ ಬರದೇ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
iPhone XR: ಐಫೋನ್ ಖರೀದಿಗೆ ಕ್ಯೂ ನಿಂತ ಜನರು: ಕೇವಲ 18,599 ರೂ. ಗೆ ಸಿಗುತ್ತಿದೆ ಆ್ಯಪಲ್ ಫೋನ್
(Amazon Prime Amazon is all set to hike the price of Prime membership from December 13)
Published On - 3:34 pm, Fri, 10 December 21