ಕಾರುಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆ ಹ್ಯುಂಡೈ ಮೋಟಾರ ಇಂಡಿಯವನ್ನು ಇಷ್ಟರಲ್ಲೇ ಹಿಂದಿಕ್ಕಲಿದೆ!
ಟಾಟಾ ಕಾರುಗಳ ವಿಷಯಕ್ಕೆ ಬಂದರೆ ನಮಗೆ ಬೇರೆ ಚಿತ್ರಣ ಸಿಗುತ್ತದೆ. ಭಾರತದ 9 ಕಾರು ಉತ್ಪಾದಕ ಕಂಪನಿಗಳ ಪೈಕಿ ಟಾಟಾ ಮೋಟಾರ್ಸ್ ಅತ್ಯುತ್ತಮ ಪ್ರಗತಿಯನ್ನು ದಾಖಲಿಸಿದೆ
ಕಾರುಗಳ ಉತ್ಪಾದನೆ ಮತ್ತು ಮಾರಾಟದದ ಅಂಕಿ-ಅಂಶಗಳ ಮೇಲೆ ಗಮನ ಇಡುವವರಿಗೆ ಇದು ಗೊತ್ತಿರುತ್ತದೆ. ಕಳೆದ ವರ್ಷ ನವೆಂಬರ್ನಲ್ಲಾದ ಕಾರುಗಳ ಮಾರಾಟವನ್ನು ಈ ವರ್ಷದ ನವೆಂಬರ್ ನಲ್ಲಿ ಆಗಿರುವ ಮಾರಾಟ ಆಗಿರುವ ಸಂಖ್ಯೆಗೆ ಹೋಲಿಸಿದರೆ, 2021 ರಲ್ಲಿ ಕಡಿಮೆ ಕಾರುಗಳು ಮಾರಾಟವಾಗಿವೆ. ನಾವಿಲ್ಲಿ ಹೇಳುತ್ತಿರುವುದು ಭಾರತದಲ್ಲಿ ಮಾರಾಟಗುವ ಎಲ್ಲ ಕಂಪನಿಗಳ ಕಾರು. ಓಕೆ, ಸಂಖ್ಯೆಗಳನ್ನೇ ನೋಡಿಬಿಡೋಣ. ನವೆಂಬರ್ 2020 ರಲ್ಲಿ 2,48,252 ಕಾರುಗಳು ಮಾರಾಟವಾಗಿದ್ದರೆ, ಈ ವರ್ಷದ ನವೆಂಬರ್ನಲ್ಲಿ 2,21,741 ಕಾರುಗಳು ಸೇಲ್ ಆಗಿವೆ. ಅಂದರೆ ಕಾರುಗಳ ಮಾರಾಟದಲ್ಲಿ ಶೇಕಡಾ 11 ರಷ್ಟು ಇಳಿಕೆ ಕಂಡಿದೆ. ಭಾರತದಲ್ಲಿ ಕಾರುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಹೇಳುವದಾದರೆ ಮಾರುತಿ ಮತ್ತು ಹ್ಯುಂಡೈ ಕಂಪನಿಗಳು ಶೇಕಡಾ 61ರಷ್ಟು ಮಾರ್ಕೆಟ್ ಶೇರ್ ಹೊಂದಿವೆ. ಆದರೆ 2021 ರಲ್ಲಿ ಇವೆರಡು ಕಂಪನಿಗಳ ಉತ್ಪಾದನೆಗಳ ಮಾರಾಟ ಬಹಳ ಕಮ್ಮಿಯಾಗಿದೆ. ಮತ್ತೊಂದೆಡೆ, ಟಾಟಾ ಮೋಟಾರ್ಸ್ ಕಾರುಗಳ ಮಾರಾಟ ಮತ್ತು ಪ್ರತಿಷ್ಠೆ ದಿನೇದಿನೆ ಹೆಚ್ಚುತ್ತಿದೆ.
ಕಾರುಗಳ ವಿಷಯಕ್ಕೆ ಬಂದರೆ ಮಾರುತಿ ಕಂಪನಿಯು ನಿಸ್ಸಂದೇಹವಾಗಿ ಲೀಡರ್ ಆಫ್ ದಿ ಪ್ಯಾಕ್. ಅದರ ನಂತರದ ಸ್ಥಾನಕ್ಕೆ ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಮೋಟಾರ ಇಂಡಿಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ವರ್ಷ ನವೆಂಬರ್ನಲ್ಲಿ ಹ್ಯುಂಡೈ ಒಟ್ಟು 37,001 ಕಾರುಗಳನ್ನು ಮಾರಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಅದು 48,000 ಯುನಿಟ್ಗಳನ್ನು ಮಾರಿತ್ತು.
ತಿಂಗಳವಾರು ಕಂಪನಿ ಉತ್ಪಾದಗಳ ಸ್ಥಿತಿಯನ್ನು ಗಮನಿಸುವುದಾದರೆ ಅದು ಇಳಿಮುಳಗೊಳ್ಳುತ್ತಾ ಸಾಗಿದೆ. ಅಕ್ಟೋಬರ್ 2021 ರಲ್ಲಿ ಹ್ಯುಂಡೈ ಕಂಪನಿಯು 37,021 ಯುನಿಟ್ಗಳ ಮಾರಾಟ ದಾಖಲಿಸಿತ್ತು.
ಟಾಟಾ ಕಾರುಗಳ ವಿಷಯಕ್ಕೆ ಬಂದರೆ ನಮಗೆ ಬೇರೆ ಚಿತ್ರಣ ಸಿಗುತ್ತದೆ. ಭಾರತದ 9 ಕಾರು ಉತ್ಪಾದಕ ಕಂಪನಿಗಳ ಪೈಕಿ ಟಾಟಾ ಮೋಟಾರ್ಸ್ ಅತ್ಯುತ್ತಮ ಪ್ರಗತಿಯನ್ನು ದಾಖಲಿಸಿದೆ. ಕಳೆದ ತಿಂಗಳು ಅದು 29,778 ಕಾರುಗಳ ಮಾರಾಟ ಮಾಡಿದೆ. ನವೆಂಬರ್ 2020ಗೆ ಹೋಲಿಸಿದರೆ (21,642 ಯುನಿಟ್ಗಳು) ಸಂಸ್ಥೆಯು ಶೇಕಡಾ 38 ರಷ್ಟು ಪ್ರಗತಿಯನ್ನು ತೋರಿದೆ.
ಇದರ ಐಸಿಇ ಕಾರುಗಳ ಮಾರಾಟದಲ್ಲಿ ಶೇಕಡಾ 32ರಷ್ಟು ಹೆಚ್ಚಳ ಕಂಡಿದೆ. ಟಾಟಾದ ಇಲೆಕ್ಟ್ರಿಕ್ ವಾಹನಗಳ ಮಾರಾಟ ಶೇಕಡಾ 324 ರಷ್ಟು ಹೆಚ್ಚಿದೆ.
ಈ ಅಂಕಿ-ಅಂಶಗಳನ್ನು ನೋಡುತ್ತಿದ್ದರೆ, ಟಾಟಾ ಮೋಟಾರ್ಸ್, ಹ್ಯುಂಡೈಯನ್ನು ಹಿಂದಿಕ್ಕುವ ದಿನಗಳು ದೂರವಿಲ್ಲ.
ಇದನ್ನೂ ಓದಿ: Viral Video: ಕೋಪಗೊಂಡ ಮಗನನ್ನು ಸಂತೈಸಿದ ತಾಯಿ; ನೆಟ್ಟಿಗರು ಮೆಚ್ಚಿಕೊಂಡ ಹೃದಯಸ್ಪರ್ಶಿ ವಿಡಿಯೋ ನೋಡಿ