ಮುರಿದುಹೋದ ಸಂಬಂಧದಿಂದ ಪ್ರಪಂಚವೇನೂ ಮುಳುಗದು, ಅದರಿಂದ ಪಾಠ ಕಲಿತು ಜೀವನದಲ್ಲಿ ಮುಂದುವರಿಯಬೇಕು: ಡಾ ಸೌಜನ್ಯ ವಶಿಷ್ಠ
ಒಂದು ಸಂಬಂಧದಲ್ಲಿ ಬೆಸೆದಿರುವ ಇಬ್ಬರಲ್ಲಿ ಪರಸ್ಪರ ಪ್ರೀತಿ, ಗೌರವ, ಅದರ ಮತ್ತು ಹೊಂದಾಣಿಕೆ ಇರಬೇಕು. ಇವುಗಳ ಕೊರತೆಯಾದರೆ, ಅಲ್ಲಿ ಅಪನಂಬಿಕೆ, ಅಸೂಯೆ, ಮನಸ್ತಾಪ ಮೊದಲಾದ ಭಾವನೆಗಳು ತಲೆ ಎತ್ತುತ್ತವೆ ಎಂದು ಡಾ ಸೌಜನ್ಯ ಹೇಳುತ್ತಾರೆ.
ಪ್ರೇಮ-ಪ್ರೀತಿಯಲ್ಲಾಗುವ ವೈಫಲ್ಯವನ್ನೇ ನಾವು ಬ್ರೇಕಪ್ ಅಂತ ಆಂಗ್ಲಭಾಷೆಯಲ್ಲಿ ಸ್ಟೈಲಾಗಿ ಹೇಳುತ್ತೇವೆ. ಈ ಪದ ಇತ್ತೀಚಿನ ದಿನಗಳಲ್ಲಿ ಬಹಳ ಸಾರಿ ಉಪಯೋಗಿಸಲ್ಪಡುತ್ತಿದೆ. ಪಡ್ಡೆಗಳು ಹುಡುಗಿಯರ ಒಂದು ಮುಗುಳ್ನಗುವನ್ನು, ಸ್ನೇಹವನ್ನು ಅಪಾರ್ಥ ಮಾಡಿಕೊಂಡು ಅವರು ಅದೇ ಸ್ನೇಹಭಾವದೊಂದಿಗೆ ಬೇರೆಯವರ ಜೊತೆ ಮಾತಾಡಿದಾಗ ಬ್ರೇಕಪ್ ಅಯಿತು, ಅವಳು ನನಗೆ ಮೋಸ ಮಾಡಿಬಿಟ್ಟಳು ಅಂದುಕೊಂಡು ಕೊರಗಲಾರಂಭಿಸುತ್ತಾರೆ. ಆನ್ ಎ ಸೀರಿಯಸ್ ನೋಟ್, ಹಾರ್ಟ್ ಬ್ರೇಕ್ ಆದಾಗ ಎಲ್ಲಕ್ಕಿಂತ ಜಾಸ್ತಿ ನಮ್ಮ ಇಗೊ ಘಾಸಿಗೊಳಗಾಗುತ್ತದೆ ಎಂದು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ಆಫ್ಕೋರ್ಸ್ ಹೃದಯದಲ್ಲಿ ನೋವು ಇರುತ್ತದೆ ಅದು ವಾಸಿಯಾಗಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.
ಪ್ರತಿಯೊಂದು ಸಂಬಂಧಕ್ಕೆ ನಾವೇ ಹೆಸರನ್ನು ಕೊಟ್ಟದ್ದೇವೆ ಮತ್ತು ಪ್ರತಿ ಸಂಬಂಧದಲ್ಲಿ ಒಂದು ಕಾರ್ಮಿಕ್ ಕನೆಕ್ಷನ್ ಇರುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ. ಮುರಿದಬಿದ್ದ ಪ್ರತಿ ಸಂಬಂಧ ನಮಗೆ ಜೀವನದಲ್ಲಿ ಒಂದು ಪಾಠವನ್ನು ಕಲಿಸುತ್ತದೆ. ರಿಲೇಷನ್ ಶಿಪ್ ನಲ್ಲಿ ಬೆಳವಣಿಗೆ ಇರಬೇಕು ಅದಿಲ್ಲದಿದ್ದರೆ ಆ ಸಂಬಂಧ ಬಹಳ ದಿನ ಬಾಳಲಾರದು ಅಂತ ಅವರು ಹೇಳುತ್ತಾರೆ.
ಒಂದು ಸಂಬಂಧದಲ್ಲಿ ಬೆಸೆದಿರುವ ಇಬ್ಬರಲ್ಲಿ ಪರಸ್ಪರ ಪ್ರೀತಿ, ಗೌರವ, ಅದರ ಮತ್ತು ಹೊಂದಾಣಿಕೆ ಇರಬೇಕು. ಇವುಗಳ ಕೊರತೆಯಾದರೆ, ಅಲ್ಲಿ ಅಪನಂಬಿಕೆ, ಅಸೂಯೆ, ಮನಸ್ತಾಪ ಮೊದಲಾದ ಭಾವನೆಗಳು ತಲೆ ಎತ್ತುತ್ತವೆ ಎಂದು ಡಾ ಸೌಜನ್ಯ ಹೇಳುತ್ತಾರೆ. ನಿಮ್ಮ ಸಂಗಾತಿಯ ಬಗ್ಗೆ ಒಮ್ಮೆ ಅಪನಂಬಿಕೆ ಮೊಳಕೆಯೊಡಿಯಿತು ಅಂತಾದರೆ, ಅದನ್ನು ನಿಮ್ಮ ಮನಸ್ಸಿನಿಂದ ಕಿತ್ತಿಹಾಕುವುದು ಬಹಳ ಕಷ್ಟ ಅಂತ ಅವರು ಹೇಳುತ್ತಾರೆ.
ಒಂದು ಸಂಬಂಧ ಮುರಿದುಬಿದ್ದರೆ ಪ್ರಳಯವೇನೂ ಆಗಲಾರದು. ಅದರ ಬಗ್ಗೆಯೇ ಯೋಚಿಸುತ್ತಾ ಕುಳಿತು ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ಮುರಿದು ಹೋದ ಸಂಬಂಧದಿಂದ ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.
ಇದನ್ನೂ ಓದಿ: MS Dhoni: ಧೋನಿ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ಯಾಂಡಲ್ವುಡ್ ನಟಿಯ ವಿಡಿಯೋ ವೈರಲ್