ಕುಟುಂಬದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು ಸುದೀಪ್, ಗುಡಿಯಲ್ಲಿ ಅಶ್ಲೇಷ ಹಾಗೂ ನಾಗ ಪ್ರತಿಷ್ಠೆ ಪೂಜೆ

ಸುದೀಪ್ ಅವರು ಪತ್ನಿ ಪ್ರಿಯಾ ರಾಧಾಕೃಷ್ಣನ್ ಮತ್ತು ಮಗಳು ಸಾನ್ವಿ ಜೊತೆ ಅವರು ಸುಬ್ರಹ್ಮಣ್ಯದ ನರಸಿಂಹ ಸ್ವಾಮಿ ಮಠದಲ್ಲಿ ಆಶ್ಲೇಷ ಹಾಗೂ ನಾಗ ಪ್ರತಿಷ್ಠೆ ಪೂಜೆ ಮಾಡಿಸಿದರು.

TV9kannada Web Team

| Edited By: Arun Belly

Dec 11, 2021 | 11:52 PM

ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ಅವರು ಶನಿವಾರ ತಮ್ಮ ಬ್ಯೂಸಿ ಶೆಡ್ಯೂಲನಿಂದ ಬಿಡುವು ಮಾಡಿಕೊಂಡು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ಪ್ರಿಯಾ ರಾಧಾಕೃಷ್ಣನ್ ಮತ್ತು ಮಗಳು ಸಾನ್ವಿ ಜೊತೆ ಅವರು ಸುಬ್ರಹ್ಮಣ್ಯದ ನರಸಿಂಹ ಸ್ವಾಮಿ ಮಠದಲ್ಲಿ ಆಶ್ಲೇಷ ಹಾಗೂ ನಾಗ ಪ್ರತಿಷ್ಠೆ ಪೂಜೆ ಮಾಡಿಸಿದರು. ಅದಾದ ಮೇಲೆ ಅವರ ಕುಟುಂಬ ಸುಬ್ರಹ್ಮಣ್ಯನ ದರ್ಶನ ಪಡೆಯಿತು. 

25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ 50-ವರ್ಷ ವಯಸ್ಸಿನ ಸುದೀಪ್ ವರ್ಷವಿಡೀ ಬ್ಯೂಸಿಯಾಗಿರುತ್ತಾರೆ. ಬಿಗ್ ಬಾಸ್ ಕನ್ನಡ ಆವೃತ್ತಿಯನ್ನು ಅವರು 2013ರಿಂದ ನಡೆಸಿಕೊಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಗ್ ಬಾಸ್ ಸೀಸನ್ ನಡೆಯುವಾಗ ಅವರ ಹೆಚ್ಚಿನ ಸಮಯ ಅದರಲ್ಲೇ ಹೋಗುತ್ತದೆ. ವಾರದ ದಿನಗಳಲ್ಲಿ ಅವರು ಶೂಟಿಂಗ್ ನಲ್ಲಿ ಪಾಲ್ಗೊಂಡು ವಾರಾಂತ್ಯವನ್ನು ಆ ಕಾರ್ಯಕ್ರಮಕ್ಕೆ ಮೀಸಲಿಡುತ್ತಾರೆ ಎಂದು ಹೇಳಲಾಗುತ್ತದೆ.

ಸುದೀಪ್ ಅವರ ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ಮುಂದಿನ ವರ್ಷ ಫೆಬ್ರುವರಿಯಲ್ಲಿ ತೆರೆ ಕಾಣಲಿದೆ. ಅದಲ್ಲದೆ ಅವರ ಮತ್ತೊಂದು ಚಿತ್ರ ‘ಕಬ್ಜಾ’ದ ಚಿತ್ರೀಕರಣ ನಡೆಯುತ್ತಿದೆ.

ಇದನ್ನೂ ಓದಿ:   Child Marriage: ರಾಜಸ್ಥಾನದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಬಾಲ್ಯವಿವಾಹ; ಮಕ್ಕಳ ಮದುವೆಯ ಶಾಕಿಂಗ್ ವಿಡಿಯೋ ವೈರಲ್

Follow us on

Click on your DTH Provider to Add TV9 Kannada