ಈ ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲಿರುವ ಪ್ರೀತಿ ಮತ್ತು ವಿದ್ಯಾರ್ಥಿಗಳಿಗೆ ಅವರ ಮೇಲಿರುವ ಗೌರವಾದರ ನಮ್ಮನ್ನು ಭಾವುಕರನ್ನಾಗಿಸುತ್ತವೆ
ತಮ್ಮನ್ನು ತಿದ್ದಿ ತೀಡಿದ ಶಿಕ್ಷಕರು ತಮ್ಮನ್ನು ಬಿಟ್ಟು ಬೇರೆ ಶಾಲೆಗೆ ಹೋಗುತ್ತಿರುವುದು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಮಕ್ಕಳ ಪ್ರೀತಿ ಕಂಡು ಕುಲಕರ್ಣಿಯವರು ಸಹ ಭಾವುಕರಾಗಿ ಕಣ್ಣೀರು ಸುರಿಸುತ್ತಿದ್ದಾರೆ.
ಒಂದೆಡೆ ಶಿಕ್ಷಕರೊಬ್ಬರ ಮೇಲೆ ಅವರ ವಿದ್ಯಾರ್ಥಿಗಳೇ ಹಲ್ಲೆ ಮಾಡುತ್ತಾರೆ ಮತ್ತೊಂದೆಡೆ ವರ್ಗಾವಣೆ ಹೊಂದಿದ ಶಿಕ್ಷರೊಬ್ಬರಿಗೆ ಅವರ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ನೋಡುಗರ ಹೃದಯ ತುಂಬಿ ಬಂದು ಭಾವುಕರಾಗುವ ಹಾಗೆ ಬೀಳ್ಕೊಡುತ್ತಾರೆ. ಎಂಥ ವಿರೋದಾಭಾಸಗಳು ಅಲ್ವಾ? ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿರುವುದು ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಲಿಂಗಂಪಲ್ಲಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆ. ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ಕುಲಕರ್ಣಿಯವರು ಬೇರೊಂದು ಶಾಲೆಗೆ ವರ್ಗ ಹೊಂದಿದ್ದಾರೆ. ಅವರು ಲಿಂಗಂಪಲ್ಲಿಯಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸದರೆಂಬ ಖಚಿತ ಮಾಹಿತಿ ನಮ್ಮಲ್ಲಿಲ್ಲ. ಆದರೆ, ಅವರು ಈ ಎಲ್ಲ ವಿದ್ಯಾರ್ಥಿಗಳ ನೆಚ್ಚಿನ ಮತ್ತು ಅತ್ಯಂತ ಪ್ರೀತಿಯ ಶಿಕ್ಷಕರಾಗಿದ್ದರು ಅನ್ನೋದರಲ್ಲಿ ಎರಡು ಮಾತಿಲ್ಲ.
ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯ ಕಣ್ಣಲ್ಲಿ ನೀರು. ತಮ್ಮನ್ನು ತಿದ್ದಿ ತೀಡಿದ ಶಿಕ್ಷಕರು ತಮ್ಮನ್ನು ಬಿಟ್ಟು ಬೇರೆ ಶಾಲೆಗೆ ಹೋಗುತ್ತಿರುವುದು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಮಕ್ಕಳ ಪ್ರೀತಿ ಕಂಡು ಕುಲಕರ್ಣಿಯವರು ಸಹ ಭಾವುಕರಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಅವರ ಸಹೋದ್ಯೋಗಿಗಳು ಅವರ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದಾರೆ. ಅವರ ಕಣ್ಣುಗಳಲ್ಲೂ ನೀರು.
ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬಂದು ಕುಲಕರ್ಣಿಯವರ ಪಾದಸ್ಪರ್ಶ ಮಾಡುತ್ತಿದ್ದಾರೆ. ತೀವ್ರ ಸ್ವರೂಪದಲ್ಲಿ ಭಾವುಕರಾಗಿರುವ ಶ್ರೀನಿವಾಸ ಕುಲಕರ್ಣಿ ಅವರು ಪ್ರತಿಯೊಂದು ಮಗುವಿನ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಿದ್ದಾರೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಅವಿನಾಭಾವ ಅನ್ನೋದು ಈ ವಿಡಿಯೋ ನೋಡಿದರೆ ವೇದ್ಯವಾಗುತ್ತದೆ.
ಶ್ರೀನಿವಾಸ ಕುಲಕರ್ಣಿಯವರಿಗೆ ಲಿಂಗಂಪಲ್ಲಿಯಿಂದ ಸೇಡಂನಲ್ಲಿರುವ ಶಾಲೆಯೊಂದಕ್ಕೆ ವರ್ಗಾವಣೆಯಾಗಿದೆ.
ಇದನ್ನೂ ಓದಿ: Child Marriage: ರಾಜಸ್ಥಾನದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಬಾಲ್ಯವಿವಾಹ; ಮಕ್ಕಳ ಮದುವೆಯ ಶಾಕಿಂಗ್ ವಿಡಿಯೋ ವೈರಲ್