ಟೊಯೊಟಾ ಹೈಲಕ್ಸ್ ಪಿಕ್-ಅಪ್ ಮುಂದಿನ ವರ್ಷದ ಜನೆವರಿಯಲ್ಲಿ ಭಾರತದ ರಸ್ತೆಗಳ ಮೇಲೆ ಕಾಣಿಸಿಕೊಳ್ಳಲಿದೆ

ಟೊಯೊಟಾ ಹೈಲಕ್ಸ್ ಪಿಕ್-ಅಪ್ ಮುಂದಿನ ವರ್ಷದ ಜನೆವರಿಯಲ್ಲಿ ಭಾರತದ ರಸ್ತೆಗಳ ಮೇಲೆ ಕಾಣಿಸಿಕೊಳ್ಳಲಿದೆ

TV9 Web
| Updated By: shivaprasad.hs

Updated on: Dec 12, 2021 | 9:02 AM

ಟೊಯೊಟಾ ಹೈಲಕ್ಸ್ ಗಾಡಿಯ ಒಳಾಂಗಣ ಭಾರತೀಯರಿಗೆ ಅಪರಿಚಿತವೆನಿಸಲಾರದು ಅಂತ ಹೇಳಲಾಗುತ್ತಿದೆ. ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗಿರುವ ಉಪಕರಣಗಳನ್ನೇ ಹೈಲಕ್ಸ್ ನಲ್ಲೂ ಉಪಯೋಗಿಸಲಾಗಿದೆಯಂತೆ.

ಅಮೇರಿಕ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ 1968 ರಲ್ಲಿ ಲಾಂಚ್ ಆಗಿ ಅಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಹೈಲಕ್ಸ್ ಪಿಕ್-ಅಪ್ ವಾಹನವನ್ನು ಟೊಯೊಟಾ ಇಂಡಿಯ ಇಷ್ಟರಲ್ಲೇ ಭಾರತದಲ್ಲಿ ಲಾಂಚ್ ಮಾಡಲಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹೈಲಕ್ಸ್ ಮುಂದಿನ ತಿಂಗಳು ಭಾರತದಲ್ಲಿ ಕಾಣಿಸಿಕೊಳ್ಳಲಿದೆ. ಅಸಲಿಗೆ ಭಾರತದಲ್ಲಿ ಪಿಕ್-ಅಪ್ ವಾಹನದ ಪರಂಪರೆಯನ್ನು ಶುರುಮಾಡಿದ್ದು ಜಪಾನಿನ ಪ್ರಸಿದ್ಧ ಮೋಟಾರು ತಯಾರಕ ಕಂಪನಿ ಇಸುಜು. ಅದರೆ ಜಪಾನೀ ಸಂಸ್ಥೆ ಬಿಡುಗಡೆ ಮಾಡಿದ ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್-ಅಪ್ ವಾಹನಕ್ಕೆ ಭಾರತದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಓಕೆ, ಟೊಯೊಟಾ ಲಾಂಚ್ ಮಾಡುತ್ತಿರುವ ಹೈಲಕ್ಸ್ ವಾಹನವು ಭಾರತದಲ್ಲಿ ಈ ಸಂಸ್ಥೆಯ ಜನಪ್ರಿಯ ಮಾಡೆಲ್ಗಳಾಗಿರುವ ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರುಗಳ ವಿನ್ಯಾಸದಲ್ಲೇ ತಯಾರಾಗಿದೆ. ಆದರೆ, ಹೈಲಕ್ಸ್ ಈ ಎರಡು ಕಾರುಗಳಿಗಿಂತ ಹೆಚ್ಚು ಉದ್ದವಾಗಿರಲಿದೆ. 3,000 ಎಮ್ ಎಮ್ ವ್ಹೀಲ್‌ಬೇಸ್‌ನೊಂದಿಗೆ 5,300 ಎಮ್ ಎಮ್ ಉದ್ದವಿರುವ ಹೈಲಕ್ಸ್ ಪಿಕ್-ಅಪ್ ಕಾರು ಎಲ್ಲ ಆಯಾಮಗಳಲ್ಲಿ ಇಸುಜುಗೆ ಸವಾಲು ಒಡ್ಡಲಿದೆ. ಜಾಗತಿಕವಾಗಿ ಇದು ಎರಡು-ಡೋರ್ ಮತ್ತು ನಾಲ್ಕು-ಡೋರ್ಗಳ ಸಂರಚನೆಗಳಲ್ಲಿ ಲಭ್ಯವಿದ್ದರೂ, ಭಾರತದಲ್ಲಿ ಮಾತ್ರ ನಾಲ್ಕು-ಡೋರ್ಗಳ ಆವೃತ್ತಿಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಟೊಯೊಟಾ ಹೈಲಕ್ಸ್ ಗಾಡಿಯ ಒಳಾಂಗಣ ಭಾರತೀಯರಿಗೆ ಅಪರಿಚಿತವೆನಿಸಲಾರದು ಅಂತ ಹೇಳಲಾಗುತ್ತಿದೆ. ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗಿರುವ ಉಪಕರಣಗಳನ್ನೇ ಹೈಲಕ್ಸ್ ನಲ್ಲೂ ಉಪಯೋಗಿಸಲಾಗಿದೆಯಂತೆ.

ಆ ಕಾರುಗಳಲ್ಲಿರುವ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಡಿಸ್ಪ್ಲೇ ಹೈಲಕ್ಸ್ ನಲ್ಲೂ ಲಭ್ಯವಾಗಲಿದ್ದು ಇದು ಟೊಯೊಟಾ ಕಂಪನಿಗೆ ವೆಚ್ಚ ನಿರ್ವಹಣೆಯಲ್ಲಿ ನೆರವಾಗಿವುದಲ್ಲದೆ, ಭಾರತದಲ್ಲಿ ಅದರ ಪಯಣಕ್ಕೆ ಒಂದು ನಿಶ್ಚಿತ ಆಧಾರವನ್ನು ಒದಗಿಸಿದೆ.

ಇದನ್ನೂಓದಿ:    ಮತ ಹಾಕಲು ಹಂಚಿದ್ದ ಸೀರೆ, ಬೆಳ್ಳಿ ಕಾಯಿನ್ ವಾಪಸ್ ನೀಡಿದ ಗ್ರಾಪಂ ಸದಸ್ಯರು; ವಿಡಿಯೋ ವೈರಲ್