ಮತ ಹಾಕಲು ಹಂಚಿದ್ದ ಸೀರೆ, ಬೆಳ್ಳಿ ಕಾಯಿನ್ ವಾಪಸ್ ನೀಡಿದ ಗ್ರಾಪಂ ಸದಸ್ಯರು; ವಿಡಿಯೋ ವೈರಲ್
ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಿಗೆ ಬಿಜೆಪಿ ಮುಖಂಡರು ಸೀರೆ ಮತ್ತು ಬೆಳ್ಳಿ ಕಾಯಿನ್ ನೀಡಿದ್ದರಂತೆ. ಆದರೆ ಗ್ರಾಮ ಪಂಚಾಯತಿ ಸದಸ್ಯರು ನೀಡಿದ್ದ ಸೀರೆ ಮತ್ತು ಬೆಳ್ಳಿ ಕಾಯಿನ್ನ ವಾಪಾಸ್ ನೀಡಿದ್ದಾರೆ.
ನಿನ್ನೆ (ಡಿಸೆಂಬರ್ 10) ನಡೆದ ವಿಧಾನ ಪರಿಷತ್ ಚುನಾವಣೆಗೆ ಮತ ಹಾಕಲು ಬಿಜೆಪಿ ಮುಖಂಡರು ಸೀರೆ ಮತ್ತು ಬೆಳ್ಳಿ ಕಾಯಿನ್ ಹಂಚಿದ್ದರಂತೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಿಗೆ ಬಿಜೆಪಿ ಮುಖಂಡರು ಸೀರೆ ಮತ್ತು ಬೆಳ್ಳಿ ಕಾಯಿನ್ ನೀಡಿದ್ದರಂತೆ. ಆದರೆ ಗ್ರಾಮ ಪಂಚಾಯತಿ ಸದಸ್ಯರು ನೀಡಿದ್ದ ಸೀರೆ ಮತ್ತು ಬೆಳ್ಳಿ ಕಾಯಿನ್ನ ವಾಪಾಸ್ ನೀಡಿದ್ದಾರೆ. ನಾವು ಬಿಜೆಪಿಗೆ ಮತ ಹಾಕಿಲ್ಲ. ನಾವು ಕಾಂಗ್ರೆಸ್ನವರು. ನಮಗೆ ಪಕ್ಷ ಮುಖ್ಯ ಅಂತ ಸೀರೆ, ಕಾಯಿನ್ನ ಸದಸ್ಯರು ವಾಪಸ್ ನೀಡಿದ್ದಾರೆ. ವಾಪಸ್ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ಮುಖಂಡರು ಗ್ರಾಪಂ ಸದಸ್ಯರಿಗೆ 11 ಸೀರೆ, 11 ಬೆಳ್ಳಿ ಕಾಯಿನ್ ನೀಡಿದ್ದರಂತೆ. ಆದರೆ ನಾವು ಕಾಂಗ್ರೆಸ್ನವರು. ನಾವು ಸೀರೆ, ಕಾಯಿನ್ಗೆ ಬಗ್ಗಲ್ಲ. ನಮಗೆ ಪಕ್ಷ ಮುಖ್ಯ ಅಂತ ವಾಪಸ್ ನೀಡಿದ್ದಾರಂತೆ.
Latest Videos