ಶಬರಿಮಲೆ ದೇಗುಲಕ್ಕೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ ನೀಡಿದ ಕೇರಳ ಸರ್ಕಾರ

ಶಬರಿಮಲೆ ದೇಗುಲಕ್ಕೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ ನೀಡಿದ ಕೇರಳ ಸರ್ಕಾರ

TV9 Web
| Updated By: sandhya thejappa

Updated on:Dec 11, 2021 | 9:56 AM

ಕೇರಳದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆ ಅಯ್ಯಪ್ಪಸ್ವಾಮಿ ಸನ್ನಿಧಿಗೆ ತೆರಳುವುದಕ್ಕೆ ಮಾರ್ಗ ಓಪನ್ ಆಗಿದೆ. ಪಂಪಾದಿಂದ ನೀಲಿಮಲ ಮಾರ್ಗದಲ್ಲಿ ತೆರಳಲು ಅವಕಾಶ ನೀಡಲಾಗುತ್ತಿದೆ.

ವರ್ಷಾಂತ್ಯದ ವೇಳೆ ಅಯ್ಯಪ್ಪಸ್ವಾಮಿ ಭಕ್ತರು ಮಾಲೆ ಧರಿಸಿ ಶಬರಿಮಲೆಗೆ ಹೋಗುತ್ತಾರೆ. ಅಲ್ಲಿ ಭಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಾರೆ. ಆದರೆ ಕೊರೊನಾ ಕಾರಣದಿಂದ ಕಳೆದ ಬಾರಿ ಅಯ್ಯಪ್ಪಸ್ವಾಮಿ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಸದ್ಯ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರಿಂದ ದೇಗುಲಕ್ಕೆ ತೆರಳಲು ಮತ್ತೆ ಅವಕಾಶ ಸಿಕ್ಕಿದೆ. ಕೇರಳದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆ ಅಯ್ಯಪ್ಪಸ್ವಾಮಿ ಸನ್ನಿಧಿಗೆ ತೆರಳುವುದಕ್ಕೆ ಮಾರ್ಗ ಓಪನ್ ಆಗಿದೆ. ಪಂಪಾದಿಂದ ನೀಲಿಮಲ ಮಾರ್ಗದಲ್ಲಿ ತೆರಳಲು ಅವಕಾಶ ನೀಡಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಮಾರ್ಗ ಮಧ್ಯೆ ಆರೋಗ್ಯ ತಪಾಸಣೆಗೆ ಕೇಂದ್ರಗಳನ್ನ ತೆರೆಯಲಾಗಿದೆ ಅಂತ ಕೇರಳ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಕಳೆವ ವರ್ಷ ಶಬಮರಿಮಲೆಗೆ ಹೋಗಲು ಸಾಧ್ಯವಾಗದ ಕಾರಣ ಭಕ್ತರು ಅನ್ಯ ಮಾರ್ಗವನ್ನು ಕಂಡುಕೊಂಡಿದ್ದರು. ಕೋಟೆನಾಡು ಚಿತ್ರದುರ್ಗ ಸುಕ್ಷೇತ್ರದತ್ತ ಭಕ್ತರು ಹೆಜ್ಜೆ ಹಾಕುತ್ತಿದ್ದರು. ಇರುಮುಡಿ ಹೊತ್ತು ಮಾಲಾಧಾರಿಗಳು ಕೋಟೆನಾಡಿಗೆ ಆಗಮಿಸುತ್ತಿದ್ದರು. ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಶಬರಿಮಲೆ ಮಾದರಿಯಲ್ಲಿಯೇ 18 ಮೆಟ್ಟಿಲುಗಳನ್ನು ಏರಿ ದೇವರ ಆಶೀರ್ವಾದ ಪಡೆಯುತ್ತಿದ್ದರು.

ಇದನ್ನೂ ಓದಿ

ಹಿಂದೂ ಧರ್ಮಕ್ಕೆ ಮತಾಂತರ ಆಗಲು ಅಲಿ ಅಕ್ಬರ್​ ನಿರ್ಧಾರ; ಬಲವಾದ ಕಾರಣ ನೀಡಿದ ಖ್ಯಾತ ನಿರ್ದೇಶಕ

ಪಶ್ಚಿಮ ಬಂಗಾಳ: ಮಕ್ಕಳ ಕಲಿಕೆಗೆ ಅಡಚಣೆ ತಪ್ಪಿಸಲು ಮೈಕ್ ಬಳಸದೆ ಮಸೀದಿಯಲ್ಲಿ ನಮಾಜ್

Published on: Dec 11, 2021 09:53 AM