‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಗ್ಗೆ ಉಮಾಶ್ರೀ ಹೇಳಿದ್ದೇನು? ಹಿರಿಯ ನಟಿಯ ಕಿರುತೆರೆ ಕಮ್ಬ್ಯಾಕ್
Puttakkana Makkalu Serial: ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಬಗ್ಗೆ ಮಾಹಿತಿ ನೀಡಲು ಜೀ ಕನ್ನಡ ವಾಹಿನಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಉಮಾಶ್ರೀ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ವಿಡಿಯೋ ಇಲ್ಲಿದೆ..
ಹಿರಿಯ ನಟಿ ಉಮಾಶ್ರೀ (Umashree) ಅವರು ಬಹುದಿನಗಳ ಬಳಿಕ ಕಿರುತೆರೆಗೆ ಮರಳಿದ್ದಾರೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಡಿ.13ರಂದು ಪ್ರಸಾರ ಆರಂಭಿಸಲಿರುವ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ (Puttakkana Makkalu Serial) ಮೂಲಕ ಅವರು ಮತ್ತೆ ಧಾರಾವಾಹಿ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಸ್ವಾಭಿಮಾನದಿಂದ ಮೂವರು ಹೆಣ್ಣುಮಕ್ಕಳನ್ನು ಬೆಳೆಸುವ ದಿಟ್ಟ ಮಹಿಳೆಯ ಪಾತ್ರವನ್ನು ಅವರು ನಿಭಾಯಿಸಲಿದ್ದಾರೆ. ಈ ಧಾರಾವಾಹಿಯ ವಿಶೇಷತೆ ಏನು? ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ? ಮಕ್ಕಳ ಜತೆ ಪುಟ್ಟಕ್ಕನಿಗೆ ಯಾವ ರೀತಿಯ ಬಾಂಧವ್ಯ ಇದೆ ಎಂಬುದರ ಬಗ್ಗೆ ಉಮಾಶ್ರೀ ಅವರು ಮಾತನಾಡಿದ್ದಾರೆ. ಸೀರಿಯಲ್ ಬಗ್ಗೆ ಮಾಹಿತಿ ನೀಡಲು ಜೀ ಕನ್ನಡ ವಾಹಿನಿ ಆಯೋಜಿಸಿರುವ ಸುದ್ದಿಗೋಷ್ಠಿಯಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
‘ಜೊತೆ ಜೊತೆಯಲಿ’ ಸೀರಿಯಲ್ಗೆ ನಿರ್ದೇಶನ ಮಾಡಿ ಜನಮೆಚ್ಚುಗೆ ಗಳಿಸಿರುವ ಆರೂರು ಜಗದೀಶ್ ಅವರು ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಅನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ. ಡಿ.13ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಪ್ರಸಾರ ಆಗಲಿದೆ. ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದಾ ಹೊಸಪೇಟೆ, ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ:
‘ಜೊತೆ ಜೊತೆಯಲಿ’ ನಿರ್ದೇಶಕರ ಹೊಸ ಸೀರಿಯಲ್ ‘ಪುಟ್ಟಕ್ಕನ ಮಕ್ಕಳು’; ಇದರಲ್ಲಿದೆ ವಿಶೇಷ ಕಥೆ
ಹಾಲಿವುಡ್ ಆಫರ್ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ